logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒಲವು
[ನಾ] ಗಂಡುಹೆಣ್ಣಿನ ಪ್ರೇಮ (ಒರ್ಮೆಯುಂ ಅವಚಱದ ಒಲವಿನ ಕೂರ್ಮೆಯ ತತ್ಪತಿಗಂ ಆಕೆಗಂ ನಿಜವಂಶಕ್ಕಾರ್ಮಮೆನೆ ಪುಟ್ಟಿದರ್ ಜಯವರ್ಮ ಶ್ರೀವರ್ಮರೆಮಬರಿರ್ವರ್ ತನಯರ್: ಆದಿಪು, ೨. ೩೭)

ಒಲಿ
[ಕ್ರಿ] ಒಲ್, ಆಸೆಪಡು (ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ ನೀಂ ಒಲಿದಲ್ಲಿ ಪುಟ್ಟಿ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ: ಪಂಪಭಾ, ೨. ೮೩)

ಒಲಿಸು
[ಕ್ರಿ] ಪ್ರೀತಿಸುವಂತೆ ಮಾಡು (ಒಲಿಸುವ ರೂಪು ಗಾಡಿಯೊಳೊಡಂಬಡೆ ಗಾಡಿ ವಿಳಾಸದೇೞ್ಗೆಯೊಳ್ ನೆಲಸೆ: ಆದಿಪು, ೧. ೭೨)

ಒಲೆ
[ಕ್ರಿ] ಓಲಾಡು, ತೂಗಾಡು (ಆಂತು ಒಲೆಯದಿರ್ ಉರ್ಕಿನೊಳ್ ನುಡಿವೆ ಈ ಕರಿ ಸೂಕರಿಯಲ್ತೆ: ಪಂಪಭಾ, ೧೧. ೭೩)

ಒಲೆಗಲ್
[ನಾ] ಒಲೆಯ ಕಲ್ಲು (ಬೀಡಿಂಗೆ ಬೀಡುವಿಡಲ್ ನೆಲನುಂ ಆನೆಗಂಬಕ್ಕೆ ಒಲೆಗಲ್ಗಳ್ಗೆ ಬೆಟ್ಟುಗಳುಂ ಗುಡಿಯ ಗೂಂಟಕ್ಕೆ ಬಲ್ಲಡವಿಗಳುಂ: ಪಂಪಭಾ, ೯. ೧೦೪ ವ)

ಒಲ್ದನಿಲ್ಲ
[ನಾ] ಇಷ್ಟಪಟ್ಟವನಾಗಲಿಲ್ಲ, ಇಷ್ಟಪಡಲಿಲ್ಲ (ನಲ್ಲಳ ರತಿಶ್ರಮವಿಶ್ಲಥಕೇಶಪಾಶದೊಳ್ ಸವಸವನಾಗಿ ತೋಱಿದಪುದು ಎಂಬುದೆ ಕಾರಣದಿಂದಂ ಗುಣಾರ್ಣವಂ ಇಡಲ್ ಒಲ್ದನಿಲ್ಲ: ಪಂಪಭಾ, ೫. ೫೧)

ಒಲ್ಲಂ
[ಕ್ರಿ] (√ಒಲ್) ಪ್ರೀತಿಸನು (ಅಸಿಯಳಂ ಒಲ್ಗುಂ ಒಲ್ಲಂ ಅಣಂ ಎನ್ನದೆ ರೂಪನೆ ನೋಡಿ ಕೂಡಲಾಟಿಸಿ ಪರಿದೆಯ್ದಿ: ಪಂಪಭಾ, ೫. ೧೩)

ಒಲ್ಲಣಿಗೆ
[ನಾ] ಒದ್ದೆಯಾದ ಬಟ್ಟೆ, ಸ್ನಾನವಸ್ತ್ರ (ಧರಾತಳಮಂ ಒಲ್ಲಣಿಗೆಯಂ ಪಿೞಿವಂತೆ ತಳಂ ಎಯ್ದೆ ಸುರುಳ್ವಿನಂ ಮುಯ್ಯೇೞು ಸೂೞ್ ಪಿೞಿದ ಸಾಹಸಮುಂ: ಪಂಪಭಾ, ೧೨. ೪೮ ವ)

ಒಲ್ಲದೆ
ಒಪ್ಪದೆ (ಒಲ್ಲದೆ ಉೞಿದು ಅಟ್ಟಿದೊಡೆ ಅಂದು ಕುಬೇರನಿತ್ತುದು: ಪಂಪಭಾ, ೪. ೮೬)

ಒಲ್ಲನುಲಿ
[ಕ್ರಿ] [ಒಲ್ಲನೆ+ಉಲಿ] ಕಿರಿಚಿಕೊ (ನೆಲನದಿರೆ ಬರ್ಪ ವಿಕ್ರಮಾರ್ಜುನನ ಬರವಿಂಗೆ ಕುರುಬಲಮೆಲ್ಲಂ ಮೆಲ್ಲನುಲಿದೋಡಿ ಸುರಾಪಗಾನಂದನನ ಮಱೆಯಂ ಪೊಕ್ಕಾಗಳ್: ಪಂಪಭಾ, ೧೧. ೧೨ ವ)


logo