logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಒರ್ಮೆ ನುಡಿ
[ಕ್ರಿ] ಒಂದು ಬಾರಿ ಹೇಳು (ರಂಗತ್ತರಂಗ ವಾರ್ಧಿಚಯಂಗಳ್ ತಂತಮ್ಮ ಮೇರೆಯಂ ದಾಂಟುವೊಡಂ ಗಾಂಗೇಯನುಂ ಪ್ರತಿಜ್ಞಾಗಾಂಗೇಯನುಮೊರ್ಮೆ ನುಡಿದುದಂ ತಪ್ಪುವರೇ: ಪಂಪಭಾ, ೧. ೮೪)

ಒರ್ಮೆಯೆ
[ಅ] ಒಮ್ಮೆಗೇ, ಇದ್ದಕ್ಕಿದ್ದಂತೆ (ಭೀಕರರಥಚಕ್ರಮಂ ಪಿಡಿದು ನುಂಗಿದಳ್ ಒರ್ಮೆಯೆ ಧಾತ್ರಿ ಕೋಪದಿಂ: ಪಂಪಭಾ, ೧೨. ೨೦೬); ಒಟ್ಟಿಗೆ, ಒಂದೇ ಬಾರಿಗೆ (ಆ ಸತಿಯಿಕ್ಕಿದ ಕಣ್ಣ ನೀರ ಧಾರೆಗಳೊಳೆ ನಾಂದು ಎಲರ್ಚಿ ಪೊದಳ್ದು ಒರ್ಮೆಯೆ ಪಾಱಿದುವು ಉನ್ಮದಾಳಿಗಳ್: ಪಂಪಭಾ, ೫. ೧೦)

ಒರ್ಮೊದಲ್
[ಅ] ಒಂದೇ ಬಾರಿಗೆ (ತ್ರಿದಶೇಂದ್ರಾಮರರ್ ಕಳಕಳಪ್ರಧ್ವಾನದಿಂ ಶಾತಕುಂಭದ ಕುಂಭಂಗಳ ನೀರಂ ಒರ್ಮೊದಲೆ ಭೋರ್ಭೋರೆಂದು ಪೊಯ್ವಾಗಳ್: ಆದಿಪು: ೭. ೯೭); [ಅ] ಮೊದಲಿಗೇ (ಅನಂಗನಿರ್ದೆಡೆವೇೞ್ವವೊಲ್ ಒರ್ಮೊದಲೆ ಗೀತವಾದಿತರವಂ ಏವೇೞ್ವುದೊ ಸಭೆಯಂ ರಸದೊಳ್ ಪೂೞ್ದವೊಲೆಸೆದತ್ತು: ಆದಿಪು, ೯. ೧೪); [ಅ] ಕೂಡಲೇ (ಸಾರೆಯೊಳ್ ಅೞ್ವ ಮಹಾದ್ವಿಜನಾರಿಯ ಮಮತಾವಿಪೂರಿತ ಊರ್ಜಿತರವದಿಂ ಕಾರುಣ್ಯಾಕ್ರಂದನಂ ಅನಿವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್: ಪಂಪಭಾ, ೩. ೨೪)

ಒರ್ಮೊರ್ಮೆ
[ನಾ] ಒಂದೊಂದು ಬಾರಿ (ಕಡಕುಂ ಪೆಟ್ಟೆಯುಂ ಒತ್ತೆ ಮೆಲ್ಲಡಿಗಳಂ ಬಳ್ಕುತ್ತುಂ ಅಳ್ಕುತ್ತುಂ ಓರಡಿಗೆ ಒರ್ಮೊರ್ಮೆ ಕುಳುತ್ತುಂ ಏೞುತಿರೆ: ಪಂಪಭಾ, ೩. ೯)

ಒರ್ವ
[ನಾ] ಒಬ್ಬ (ಒರ್ವ ಗೋವಳಂ ಅನಿಬರ ಸಾವುಮಂ ಕಂಡು: ಪಂಪಭಾ, ೮. ೯೫ ವ)

ಒರ್ವಾಗ
[ನಾ] ಒಂದು ಭಾಗ, ಪಾಲು (ಏಗೆಯ್ದುಂ ಎನ್ನ ಧರೆಯ ಒರ್ವಾಗಮುಮಂ ನೀಮೆ ಬೆಸಸೆಯುಂ ಕುಡದೆ ಇನಿತಂ ಮೇಗಿಲ್ಲದೆ ನೆಗೞ್ದು ಅೞಿದಂ ನಾಗಧ್ವಜಂ: ಪಂಪಭಾ, ೧೪. ೬)

ಒರ್ವುಳಿ
[ನಾ] ಒಂದು ಕಡೆ, ಗುಂಪಾಗಿ (ತಮ್ಮನಿಬರುಮಂ ಅಂದು ಒರ್ವುಳಿ ನೆರೆದು ಅತಿಲಲಿತದೋರ್ವೀಸುಖಮಂ ಉಣುತುಮಿರೆ ಪಲಕಾಲಂ: ಆದಿಪು, ೬. ೪)

ಒರ್ವೆಸರ್
[ನಾ] ಒಂದೇ ಹೆಸರು, ಅದೇ ಹೆಸರು (ಹತೋಶ್ವತ್ಥಾಮಾ ಎನೆ ನೃಪಂ ಅಶ್ವತ್ಥಾಮನೆ ಗೆತ್ತು ಒಣರ್ದಂ ಒವಜಂ ಒರ್ವೆಸರಿಭಮಂ: ಪಂಪಭಾ, ೧೨. ೨೭)

ಒಲ್
[ಕ್ರಿ] ಸಂಭ್ರಮದಿಂದ ಕೂಡು (ತಳಿರ್ಗಳಸಂ ಮುಕುಂದ ರವಂ ಎತ್ತಿದ ಮುತ್ತಿನ ಮಂಟಪಂ ಮನಂಗೊಳಿಪ ವಿತಾನಪಙ್ಕ್ತಿ ಪಸುರ್ವಂದಲೊಳ್ ಒಲ್ದು ಎಡೆಯಾಡುವ ಎಯ್ದೆಯರ್: ಪಂಪಭಾ, ೧. ೧೦೭); [ಕ್ರಿ] ಬಯಸು (ನೀನಾರ್ಗೆ ಏಕೆ ಬಂದೆಯೆಂದೊಡೆ ಎರಡೞಿಯದೊಲ್ದು ನಿನ್ನೊಳೆರಡಂ ನುಡಿಯಲಾಗದೆನಗೆ ಬನಂ ಹಿಡಿಂಬವನಂ ಎಂಬುದು: ಪಂಪಭಾ, ೩. ೧೪ ವ); [ಕ್ರಿ] ಇಷ್ಟಪಡು (ಈ ಕೂಸುಗಳ್ ಯೋಗ್ಯರಪ್ಪುದಂ ಇನ್ನು ಒಲ್ವೊಡೆ ಶಸ್ತ್ರವಿದ್ಯೆಗೊವಜಂ ನೀನಾಗು ಕುಂಭೋದ್ಭವಾ: ಪಂಪಭಾ, ೨. ೫೩); [ಕ್ರಿ] ಮೋಹಗೊಳ್ಳು, ಪ್ರೀತಿಸು (ಸುಯೋಧನನ ರಾಜ್ಯಮಂ ಒಲ್ವೊಡಂ ಶಲ್ಯನನೆ ಸಾರಥಿಮಾಡಿ ಕಾದುವುದು ಎಂದು ಪರಸಿ ಪೋಗೆಂಬುದುಂ: ಪಂಪಭಾ, ೧೨. ೫೯ ವ)

ಒಲವರ
[ನಾ] ಪ್ರವೃತ್ತಿ, ಒಲವು (ಮೃಗದ ಒಲವರಮುಮಂ ಅರಸನ ಬಗೆಯುಮಂ ಅಱಿದು ಅಲಸದೆ ಎಳಸಿ ಓಲಗಿಸಲ್ ನೆಟ್ಟನೆ ಬಲ್ಲನುಳ್ಳೊಡೆ ಅವನಲ್ತೆ ಗುಣಾರ್ಣವ ಬೇಂಟೆಕಾಱಂ ಓಲಗಕಾಱಂ: ಪಂಪಭಾ, ೫. ೪೨); [ನಾ] ಪ್ರೀತಿ, ಗೌರವ (ಮನದೆ ಒಲವರಂ ಉಳ್ಳೊಡೆ ಕುಡು ಮನೆಯೊಳ್ ಹರಿಗೆ ಅಗ್ರಪೂಜೆಯಂ: ಪಂಪಭಾ, ೬. ೪೫)


logo