logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಏೞುಂ ಮಾೞ
[ನಾ] ಮಾಲವದೇಶದ ಏಳು ಭಾಗಗಳು (ಏೞುಂ ಮಾೞಮುಮಂ ಪಾಱೇೞೆ ತಗುಳ್ದಿಱಿದು ನರಗನುರಿಪಿದೊಡೆ ಕರಿಂಕೇೞಿಸಿದಾತನ ತೇಜದ ಬೀೞಲನನುಕರಿಪುವಾದುವು ಒಗೆದುರಿವುರಿಗಳ್: ಪಂಪಭಾ, ೧. ೩೫)

ಏೞುಂ ಸಮುದ್ರಂಗಳ್
[ನಾ] (ಉಪ್ಪು ನೀರು, ಹಾಲು, ಕಬ್ಬಿನ ರಸ, ಮೊಸರು, ಜೇನುತುಪ್ಪ, ತುಪ್ಪ, ರುಚಿಯಾದ ನೀರುಗಳಿಂದ ಕೂಡಿದ ಸಮುದ್ರಗಳು (ಕ್ಷಾರ ಕ್ಷೀರ ಇಕ್ಷು ದಧಿ ಮಧು ಘೃತ ಸ್ವಾದೂದಕಂಗಳೆಂಬ ಏೞುಂ ಸಮುದ್ರಂಗಳ ಚತುರ್ದಶ ಮಹಾನದಿಗಳ ನೀರುಮಂ: ಪಂಪಭಾ, ೧೪. ೧೭ ವ)

ಏೞು ಜನಪದ
[ನಾ] ಏಳು ಜನಸಮುದಾಯ (ಆ ತಿರ್ಯಗ್ಲೋಕದ ನಟ್ಟ ನಡುವೆ ಲವಣಜಲಧಿಪರಿವೃತಮಾಗಿ ಭರತ ಹೈಮವತ ಹರಿವರ್ಷ ವಿದೇಹ ರಮ್ಯಕ ಹೈರಣ್ಯವತ ಐರಾವತಂಗಳೆಂಬ ಏೞು ಜನಪದಂಗಳಿಂದಂ: ಆದಿಪು, ೧. ೪೮ ವ)

ಏೞುಮಂಬುಧಿ
[ನಾ] ಏಳು ಸಮುದ್ರಗಳು, ಪೌರಾಣಿಕವಾದ ಸಪ್ತಸಮುದ್ರಗಳು (ಕುಡಿವುದಂ ಏೞುಮಂಬುಧಿಯುಮಂ ಕುಲಶೈಲಕುಳಂಗಳುಂ ತಗುಳ್ದಡರ್ವುದನೊಂದಿ ಬಾಳರವಿ ತನ್ನಯ ಸೋಗಿಲ ಮೇಗೆ ರಾಗದಿಂ ಪೊಡರ್ವುದಂ: ಪಂಪಭಾ, ೧. ೧೪೦) [ಲವಣ, ಇಕ್ಷು, ಸುರಾ, ಸರ್ಪಿಸ್, ದಧಿ, ಕ್ಷೀರ, ಮತ್ತು ಜಲಸಮುದ್ರಗಳು]

ಏೞ್ಕಟ್ಟು
[ನಾ] [ಏಡು+ಕಟ್ಟು] ವರ್ಷಗಳ ಅವಧಿಯ ಕಟ್ಟುಪಾಡು, ಕಾಲಾವಧಿಯ ಕಟ್ಟುಪಾಡು (ಏೞ್ಕಟ್ಟಿನೆೞೆದು ನಿಮ್ಮಂ ನಾೞ್ಕಡೆಗೞಿದೊಡೆ ಮದೀಯ ನಾಥಂ ಬೇರಂ ಬಿೞ್ಕೆಯನೆ ತಿಂದ ದೆವಸದೊಳ್ ಅೞ್ಕಾಡಿದ ಬೀರಮೀಗಳೇಂ ಪೊಸತಾಯ್ತೇ: ಪಂಪಭಾ, ೧೨. ೧೭೮)

ಏೞ್ಗೆವಾಡಿವ
[ನಾ] [ಏೞ್ಗೆ+ಪಾಡಿವ=ಚಂದ್ರ ಬೆಳೆಯುವ ಕಾಲದ] ಶುಕ್ಲಪಕ್ಷದ ಪಾಡ್ಯ (ಅಯ್ವರ್ ಕೂಸುಗಳುಂ ಏೞ್ಗೆವಾಡಿವದ ಚಂದ್ರನಂತೆ ಉತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ: ಪಂಪಭಾ, ೨. ೩)

ಏೞ್ತರ್
[ಕ್ರಿ] ಹೊರಟು ಬಾ (ಆದಿಬ್ರಹ್ಮನೇೞ್ತರ್ಪುದನೆ ಕನಸುವೇೞ್ದಪ್ಪುದು ಎಂದು ಅಗ್ರಜಂಗೆ ಆದರದಿಂದಂ ಪೇೞ್ದು: ಆದಿಪು, ೯. ೧೩೦)

ಏೞ್ಪೋಗು
[ಕ್ರಿ] ಎದ್ದು ಹೋಗು (ಏೞ್ಪೋಗು ದೂತನಪ್ಪನ ಬೇೞ್ಪನ ನುಡಿಗೇೞ್ದು ಮುಳಿಯಲಾಗದು ನೀನುಂ ಮೆೞ್ಪಟ್ಟು ವಿದುರನೆಂಬೀ ತೊೞ್ಪುಟ್ಟಿಯ ಮನೆಯ ಕೂೞೆ ನುಡಿಯಿಸೆ ನುಡಿದೈ: ಪಂಪಭಾ, ೯. ೫೮)


logo