logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಏವಿರಿಯ
[ನಾ] ಏನು ದೊಡ್ಡವನು, ಏನು ಮಹಾ ಆದವನು (ಕೊಂದೆವಿಲ್ಲವಿನ್ನುಂ ಬಳವತ್ ಕ್ರೂರಾರಾತಿಯಂ ಉಪಸಂಹಾರಿಪೆವು ಏವಿರಿನಾದಂ ಎಂಬುದುಂ: ಪಂಪಭಾ, ೧೨. ೧೨೮)

ಏವುದು
[ಸ] ಏನು ಮಾಡುವುದು (ಪೋ ಬಿಡು ಕಟಿಸೂತ್ರಮಂ ತೊಡೆಯ ಬಿಣ್ಪು ಪದಾಂಬುರುಹಕ್ಕೆ ತಿಣ್ಣಂ ಎಂತು ಉಡಿಸುವುದಕ್ಕ ನೂಪುರಮಂ ಈ ತೊಡವು ಏವುದೋ ರೂಪ ಸಾಲದೇ: ಪಂಪಭಾ, ೩. ೪೬); [ಸ] ಏನು ಪ್ರಯೋಜನ (ಭೂವಲಯಮನಯ್ಯನಿತ್ತುದುಮಂ ಆಂ ನಿನಗಿತ್ತೆಂ ಇದೇವುದಣ್ಣ ನೀನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗೞ್ತೆ ಮಾಸದೇ: ಆದಿಪು, ೧೪. ೧೩೦); [ಸ] ಯಾವುದು, ಏತಕ್ಕೆ (ಮಾರೀಚಿ ತೊಡರ್ಪುಳಿಂದೆ ಸರದಿಂ ಕಂಪಿಲ್ಲ ಚಿಂತಾಮಣಿಗೇವುದಕ್ಕ ದಳಮಿಲ್ಲ ಈ ಕಕ್ಕರಕ್ಕಿಂತುಟಪ್ಪುದು ಕಳ್ಳಪ್ಪುದು ತಪ್ಪದೆಂದು ಕುಡಿದರ್ ಕಾಮಾಂಗಮಂ ಕಾಂತೆಯರ್: ಪಂಪಭಾ, ೪. ೮೮)

ಏವೆಸಗೊಳ್
[ಕ್ರಿ] [ಏ+ಬೆಸಗೊಳ್] ಏನೆಂದು ಕೇಳುವುದು (ಇನ್ನು ಏವೆಸಗೊಳ್ವುದೊ ಕಡುವೇಗದಿಂ ಅಸಕೞಿದುದು ಮನಮುಮಂ ತುರಂಗಮರತ್ನಂ: ಆದಿಪು, ೧೩. ೩೯)

ಏವೇಡು
[ಗು] ಬಯಸಿದ್ದು (ಅಕ್ಕರಗೊಟ್ಟಿಯುಂ ಚದುರರ ಒಳ್ವಾತುಂ ಕುಳಿರ್ ಕೋೞ್ಪ ಜೊಂಪಮುಂ ಏವೇೞ್ಪುದನುಳ್ಳ ಮೆಯ್ಸುಕಮುಂ: ಪಂಪಭಾ, ೪. ೩೧)

ಏವೈಸು
[ಕ್ರಿ] ದುಃಖಪಡು (ಕೌರಬಲಪ್ರಧಾನನಾಯಕನಪ್ಪ ಚಿತ್ರಸೇನಂ ಕೃತವರ್ಮನ ಕೆಯ್ಯೊಳ್ ಅತೀತನಾದುದರ್ಕೆ ಏವೈಸಿ: ಪಂಪಭಾ, ೧೨. ೬೧ ವ)

ಏಸಾಡು
[ಕ್ರಿ] (√ಇಸು) ಬಾಣ ಪ್ರಯೋಗಮಾಡು (ಅನಿತುಂ ಬಲಮಂ ಮುತ್ತಿ ಚಿಳಾತಾವರ್ತರ್ ಸುತ್ತಲುಂ ಏಸಾಡಿ ಪಿರಿದು ತಿಣಿಕಂ ತಂದರ್: ಆದಿಪು, ೧೪. ೭೦)

ಏಸು
[ನಾ] ಬಾಣಪ್ರಯೋಗದ ಬಗೆ (ಒಂದೆ ಕೆಲ್ಲಂಬಿನಿಂ ಮೆಲ್ಲಗೆ ಪಾರ್ದು ಆರ್ದು ಎಚ್ಚಂ ಏಸಿಂ ತಲೆ ಪಱಿದು ಸಿಡಿಲ್ದತ್ತ ಬೀೞ್ವನ್ನಮಾಗಳ್: ಪಂಪಭಾ, ೧೨. ೧೮)

ಏಹಿ
[ಕ್ರಿ] ಹೋಗು (ಮನದೊಳ್ ನಿಷ್ಕಾರಣಂ ಕಾಯ್ವರೇಂ ಪರಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ: ಪಂಪಭಾ, ೭. ೩೫)

ಏಳಾ
[ನಾ] ಏಲಕ್ಕಿ (ನೆಗೞ್ದೀ ಕರ್ಪೂರ ಕಾಳಾಗರು ಮಳಯಮಹೀಜಂಗಳ್ ಏಳಾಲತಾಳೀ ಸ್ಥಗಿತಂಗಳ್ ಕಣ್ಗೆವಂದಿರ್ದುವಂ ಇವನೆ ವಲಂ ಕೊಂಬುಗೊಂಡ ಅಂಗಜಂ: ಪಂಪಭಾ, ೪. ೨೩)

ಏಳಾವನ
[ನಾ] ಏಲಕ್ಕಿ ತೋಟ ಚೂತ ಸಪ್ತಚ್ಧದ ಏಳಾವನಸುರಭಿ .. .. ಆಶಾಚಕ್ರಂ ಗಂದೇಭಚಕ್ರಂ: ಆದಿಪು, ೧೧. ೩೦)


logo