logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಏಗೆಯ್ವುದು
[ಕ್ರಿ] ಏನು ಮಾಡಬೇಕು (ಕೃಷ್ಣದ್ವೈಪಾಯನನಂ ನೆನೆದು ಬರಿಸಿದೊಡೆ ವ್ಯಾಸಮುನೀಂದ್ರನೇಗೆಯ್ವುದೇನಂ ತೀರ್ಚುವುದೆಂದೊಡೆ ಸತ್ಯವತಿಯಿಂತೆಂದಳ್: ಪಂಪಭಾ, ೧. ೮೪ ವ)

ಏಗೆಯ್ವುದೊ
[ಕ್ರಿ] ಏನನ್ನು ಮಾಡಬೇಕಾಗಿದೆ (ಬೆಸನೇಂ ಏಗೆಯ್ವುದೊ ನಿನಗೊಸೆದೇನಂ ಕುಡುವುದು ಎಂದೊಡೆ ಅವಳ್ ಮಕ್ಕಳ ಒಸಗೆಯನೆನಗೀವುದು ನಿನ್ನೆಸಕದ ಮಸಕಮನೆ ಪೋಲ್ವ ಮಗನಂ ಮಘವಾ: ಪಂಪಭಾ, ೧. ೧೩೯)

ಏಗೊಳ್
[ಕ್ರಿ] ಒಪ್ಪು, ಅಂಗೀಕರಿಸು (ಎಂಬುದುಂ ಅದನೆ ಮನದೆ ಏಗೊಂಡು: ಆದಿಪು, ೩. ೧೬ ವ)

ಏಡ
[ನಾ] ಕಿವುಡ (ಕವಿತಾರಹಸ್ಯಮಂ ಸತ್ಕವಿಯಱಿಗುಮ್ ಅನೇಡಮೂಕಂ ಏಡಂ ಜಡಂನೆಂಬವನಱಿಗುಮೆ: ಆದಿಪು, ೧. ೨೦)

ಏಡಿಸು
[ಕ್ರಿ] ಹೀಯಾಳಿಸು, ಗೇಲಿಮಾಡು (ನಿನಗೆ ಅದೇವಿರಿದು ಈ ಎಡಱ್ ಎಂದು ಮುಂದೆ ಬಂದು ಏಡಿಸುವಂತಿರೆ ಆಡಿದುದೊಂದು ಮರುಳ್ ಫಣಿರಾಜಕೇತುವಂ: ಪಂಪಭಾ, ೧೩. ೫೪)

ಏಣಗೋಣ
[ನಾ] ಗರ್ವ, ವಕ್ರತೆ (ಮುಗುಳ್ನಗೆ ನಕ್ಕು ವಿಕ್ರಮಾರ್ಜುನಂ ಇಳಿಸಿ ನುಡಿವ ನಿನ್ನ ಏಣಗೋಣಂಗಳುಂ ಎಕ್ಕಸಕ್ಕತನಂಗಳುಂ ಎತ್ತವೋದುವು: ಪಂಪಭಾ, ೧೧. ೧೩೮ ವ)

ಏಣಗೋಣಸಾವು
[ನಾ] ದುರ್ಮರಣ (ಅಂತು ದ್ರೋಣಂ ಏಣಗೋಣಸಾವಂ ಸಾವುದುಂ: ಪಂಪಭಾ, ೧೨. ೩೦ ವ) [‘ಏಣಗೋಣ’ ಎಂಬುದರ ಬದಲು ಡಿಎಲ್‌ಎನ್ ‘ಎೞೆಗೋಣ’ ಎಂದು ಪಾಠವನ್ನು ಪರಿಷ್ಕರಿಸಿ “{ಬಲಿಯಾಗಿ} ಎಳೆದು ತಂದ ಕೋಣನ ಸಾವು” ಎಂದು ಅರ್ಥ ನೀಡುತ್ತಾರೆ ‘ದೀಪಿಕೆ’, ಪು, ೪೪೬]

ಏತರ್ಕೆ ಬಾರ್ತೆ
[ನಾ] ಯಾವ ಪ್ರಯೋಜನಕ್ಕೆ [ಬರುವವನು] (ಅದಟಂ ಕೊಂಡಾಡದೆ ಬೇಡಿದರ್ಗೀಯದೆ ಮಱೆಗೆ ವಂದರಂ ಕಾಯದೆ ನೀಳ್ದೊದವಿದ ಜಸಮನುಪಾರ್ಜಿಸದ ಅಧಮಂ ಅದೇತರ್ಕೆ ಬಾರ್ತೆ ಜೀವನ್ಮೃತಕಂ: ಆದಿಪು, ೧೨. ೯೭)

ಏತಱೊಳಂ
[ಅ] ಯಾವುದರಲ್ಲಿಯೂ (ಈಶ್ವರಂ ನೀನುದಾರ ಮಹೇಶ್ವರನಪ್ಪುದಱಿಂ ನಿನಗಂ ಎನಗಂ ಏತಱೊಳಂ ವಿಕಲ್ಪಮುಂ ವಿಚ್ಛಿನ್ನಮುಂ ಇಲ್ಲ ಎಂದಂ: ಪಂಪಭಾ, ೫. ೧೦೩ ವ

ಏತೊದಳ್
[ನಾ] ಏನು ಅಡ್ಡಿ, ಏನು ತೊಂದರೆ (ನೀಂ ಇನಿಸು ಕಾಲ ಇರ್ದೆಯಪ್ಪೊಡೆ ಏ ತೊದಳೊ ಸರೋವರಾಂಬುವನಿತಂ ತವೆ ತುಳ್ಕಿ ರಸಾತಳಂಬರಂ ಬೆದಕಿಯುಂ ಎಂತುಂ ಅಪ್ಪಳಿಸಿ ಕೊಂದಪೆಂ: ಪಂಪಭಾ, ೧೩. ೮೦)


logo