logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಎಸಕಂಗಾಯ್
[ಕ್ರಿ] ಕರ್ತವ್ಯಪಾಲಿಸು (ಹರಿಯುಂ ತಾನುಂ ಭರಂಗೆಯ್ದು ತನ್ನ ಎಸಕಂ ಕಾಯದೆ ಅಧರ್ಮಯುದ್ಧದೆ ನರಂ ಕೊಲ್ವಲ್ಲಿ: ಪಂಪಭಾ, ೧೧. ೮೩)

ಎಸಕಂಗಿಡು
[ಕ್ರಿ] ಪ್ರತಾಪಹೀನವಾಗು (ಬೆಸಸಿದೊಡೆ ಅದು ಮಾರ್ಕೊಳ್ಳದೆ ಬೆಸನಂ ಬಲವಂದು ಬಾಹುಬಲಿಯಂ ಅಣಂ ಭೇದಿಸಲಾಱದುದಱಿಂ ಇರ್ದುದು ಮಸುಳ್ದೆಸಕಂಗೆಟ್ಟು ಬಲದ ಮುಯ್ಪಿನ ಕೆಲದೊಳ್: ಆದಿಪು, ೧೪. ೧೧೭)

ಎಸಗು
[ಕ್ರಿ] ಗಾಳಿ ಬೀಸು (ಪೊಸಪೂವಿನ ಸರಿ ಪರಿದಾಯ್ತಸದಳಂ ಎಸಪ ಎಲರದೊಂದು ಮೇಲ್ವಾಯ್ದಾಗಳ್: ಆದಿಪು, ೧೦. ೨); [ಕ್ರಿ] ಮಾಡು (ಲೋಕದ ಪೞಿ ಪೊರ್ದದೆ ಮಾಣೆ ಧರ್ಮಯುದ್ಧದೊಳ್ ಎಸಗಿಂ: ಆದಿಪು ೧೪. ೧೦೨); [ಕ್ರಿ] ನಡೆದುಕೊ (ಶ್ರೀಗೆ ಫಳಂ ಚಾಗಂ ವಾಕ್‌ಶ್ರೀಗೆ ಫಳಂ ಸರ್ವಶಾಸ್ತ್ರಪರಿಣತಿ ವೀರಶ್ರೀಗೆ ಫಳಂ ಆಯಂ ಎಂದಿಂತಾಗಳುಂ ಅಱಿದೆಸೆಗಿದಂ ಪರಾಕ್ರಮಧವಳಂ: ಪಂಪಭಾ, ೬. ೧); [ಕ್ರಿ] [ರಥ] ನಡೆಸು (ಪಿಂದೆ ಕಡಂಗಿ ತೇರಂ ಎಸಗು ಎಂಬವಂ ಅಂಬಿಗಂ ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದೆ ಇರ್ಪವನುಂ ತುಱುಕಾಱನಾಗೆ: ಪಂಪಭಾ, ೧೨. ೯೪); [ಕ್ರಿ] ನಡೆದುಕೊ (ಒಂದೆ ಗಡ ಹರಿಯ ಪೇೞ್ದೊಂದಂದದೆ ನರನೆಸಗುವಂತೆ ಕರ್ಣನುಂ ಎನ್ನೆಂದ ಒಂದೋಜೆಯೊಳ್ ಎಸಗದೊಡೆ: ಪಂಪಭಾ, ೧೨. ೧೦೧)

ಎಸಳ್
[ನಾ] ಎಸಳು, ಹೂವಿನ ಪಕಳೆ (ತಾವರೆಯ ನೀಳ್ದೆಸಳೊಳ್ ಮಱಿದುಂಬಿ ಪಾಯ್ದು ಒಡಂಬಡನೊಳಕೊಂಡು: ಪಂಪಭಾ, ೪. ೭೮)

ಎಸೆ
[ಕ್ರಿ] ಶೋಭಿಸು (ಮಂಗಳತೂರ್ಯನಾದಂ ಎಸೆಯುತ್ತಿರ್ಪನ್ನೆಗಂ ಚಕ್ರಿ ರಾಗಿಸಿ ಕೆಯ್ನೀರ್ ಎಱೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ: ಪಂಪಭಾ, ೫. ೨೫); [ಕ್ರಿ] ಹಾಡು (ಮಿಡಿವಂ ಬೀಣೆಯನಿವಂ ಇವಳ್ ಒಡನೆ ಎಸೆವಳ್ ಬೆರಲ ಕೊರಲ ಕೂಟಂ ಬೆರಲಂ ಮಿಡಿಯಿಸಿದುದೆನಿಸಿ: ಆದಿಪು, ೯. ೧೧೭); [ಕ್ರಿ] ಹೊರಹೊಮ್ಮು (ಕೋಟಿ ತೆಱದಿಂದಂ ಎಸೆವ ಈ ನಾಟಕಮಂ ತೋಱಿ ಮಾಣ್ದಳಿಲ್ಲಳ್: ಆದಿಪು, ೯. ೪೫); [ಕ್ರಿ] ಮೊಳಗು (ಆನಂದದುಂದುಭಿಧ್ವನಿ ತಾನೊಡನೊಡನೆಸೆಯೆ ನಭದೊಳ್ ಒಡನೆಸೆದುದು ಅಹೋ ದಾನಿ ಅಹೋ ಪಾತ್ರಂ ಅಹೋ ದಾನಂ ಅಹೋ ದೇಯಮೆಂಬ ದಿವ್ಯಧ್ವನಿಗಳ್: ಆದಿಪು, ೧೦. ೪); [ಕ್ರಿ] ಮಧುರ ಧ್ವನಿಮಾಡು (ಫಳಾಮೃತಾಸ್ವಾದದೆ ತಣ್ಣನೆ ತಣಿದು ಕಿವಿಯೊಳ್ ಅಮರ್ದಿನ ಪನಿ ಪನಿವಿನಂ ಎಸೆದರ್ ಅರೆಬರ್ ಅಳಿಕುಳರುತಿಯಿಂ: ಆದಿಪು, ೧೧. ೮೦)

ಎಳಗಂಪು
[ನಾ] ನವಿರು ವಾಸನೆ (ನನೆಯ ಎಳಗಂಪನೆತ್ತಿಯುಂ ಅಣಂ ನನೆನಾಱದೆ ಅರಲ್ದ ಅನೇಕ ಕೋಕನದವನಂಗಳೊಳ್ ಸುೞಿದು ತಣ್ಣಸಮಾಗದೆ: ಪಂಪಭಾ, ೫. ೩೪)

ಎಳಗಾವು
[ನಾ] [ಎಳ+ಕಾವು] ಎಳೆಯ ದಂಟು (ಬಿಳಿಯ ತಾವರೆಯ ಎಳಗಾವಿನ ಅಸಿಯ ನೂಲೊಳ್ ಕೋದ ತೋರಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ: ಪಂಪಭಾ, ೫. ೬ ವ)

ಎಳಗೊಂಬು
[ನಾ] ಎಳೆಯ ಕೊಂಬೆ (ಮಾಮರಂಗಳಂ ಅಡರ್ದು ತೊಡರ್ದು ಎಳಗೊಂಬುಗಳ್ವಿಡಿದು ದಾಂಗುಡಿವಿಡುವ ಮಾಧವೀಲತೆ: ಪಂಪಭಾ, ೨. ೧೨ ವ)

ಎಳದಳಿಸು
[ಕ್ರಿ] ಎಳವೆಯಿಂದ ಹೊಳೆ, ನಳನಳಿಸು (ಪೊಳೆವೆಳೆದರಿಳೊಳೆ ಪುದಿದು ಎಳದಳಿಸಿ ಕುಳಿರ್ಕೋೞ್ದ ಸೋನೆಯ ಸೊನೆಯನೆ ಪುದುಂಗೊಳಿಸಿದುದು: ಆದಿಪು, ೧೧. ೮೦)

ಎಳನೀರ್
[ನಾ] ಸೀಯಾಳ (ಎಳನೀರೊಳೊತ್ತಿನೊಳೊತ್ತಿ ಬರ್ಪ ಪೊನಲೊಳ್: ಆದಿಪು, ೧. ೬೪)


logo