logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಎರ್ದೆಮುಟ್ಟು
[ಕ್ರಿ] ಎದೆ ಸೋಂಕು, ಮನಮುಟ್ಟು (ಚೈತಾಗ್ನಿಯಿಂ ಸುಟ್ಟೆನಿಲ್ಲ ಒಲವಿಂದೆ ಇಂದಿಂತು ಎರ್ದೆಮುಟ್ಟಿ ಕೂರ್ತನೊಳನೇ ಕರ್ಣಂಗೆ ದುರ್ಯೋಧನಂ: ಪಂಪಭಾ, ೧೩. ೬೦)

ಎರ್ದೆಯಾಣ್ಮ
[ನಾ] ಪ್ರಿಯಕರ (ಇಚ್ಚೆಯಾಣ್ಮನೆಲ್ಲಿದಂ ಎರ್ದೆಯಾಣ್ಮನೆನ್ನರಸಂ ಎಲ್ಲಿದನೋ: ಆದಿಪು, ೩. ೧೫)

ಎರ್ದೆಯಾಱು
[ಕ್ರಿ] ಶಾಂತಮನಸ್ಕರಾಗು (ನಲ್ಲರ ದೆಸೆಯಿಂದಮೞ್ತಿವರೆ ಕೋಗಿಲೆಯಕ್ಕೆ ಎಲರಕ್ಕೆ ತುಂಬಿಯಕ್ಕೆ ಅರಗಿಳಿಯಕ್ಕೆ ಬಂದೊಡಂ ಒಱಲ್ದೆರ್ದೆಯಾಱುವರೆಂದೊಡೆ: ಆದಿಪು, ೩. ೮೬)

ಎರ್ದೆಯುರಿ
[ಕ್ರಿ] ಎದೆ [ವಿರಹದಿಂದಾಗಿ] ಉರಿ (ಅಱಿಮರುಳಂತುಟೆ ಸೊರ್ಕಿನ ತೆಱನಂತುಟೆ ಮನಮೊಱಲ್ದು ಎರ್ದೆಯುರಿವುದು ಮೆಯ್ಯೆಱಗುವುದು ಪದೆವುದು ಆನಿದನಱಿಯನಿದೇಕೆಂದು ಕನ್ನೆ ತಳವೆಳಗಾದಳ್; ಪಂಪಭಾ, ೪. ೭)

ಎರ್ದೆಯೆಱಕ
[ನಾ] ಮನದಿಚ್ಚೆ, ಪ್ರೀತಿ (ಎರ್ದೆಯೆಱಕದೆ ಪೊಗೞ್ದಖಿಳಭುವನಜನನಿಯನಾಗಳ್: ಆದಿಪು, ೭. ೪೫)

ಎರ್ದೆವುಗು
[ಕ್ರಿ] [ಎದೆ+ಪುಗು] ಮನಸ್ಸನ್ನು ಸೇರು (ಅವಿನಾಣಮನಿತುಂ ಎರ್ದೆವುಗೆ ಕಿವಿವುಗೆ ಪಂಡಿತೆಗೆ ನುಡಿದ ನಲ್ಲನ ನುಡಿ: ಆದಿಪು, ೪. ೨೩)

ಎರ್ದೆವೇೞ್
[ಕ್ರಿ] ಎದೆಬಿಚ್ಚಿ ಹೇಳು (ನುಡಿವೊಡೆ ಲಲ್ಲೆಯೆಂಗುಂ ಎರ್ದೆವೇೞ್ದೊಡೆ ಕೈತವಮೆಂಗುಂ: ಆದಿಪು, ೧೨. ೪೨)

ಎಲಗೆ
[ಅ] ಲೇ [ಸ್ತ್ರೀ ಸಂಬೋಧನೆ] (ನಿವೇದಿಸು ನಿಜಾಂತರಂಗಗತಮಪ್ಪುದಂ ನೀನಿದಂ ವಿವೇಕವಿಕಳರ್ಕಳಂತೆ ಎಲಗೆ ಚಿತ್ತದೊಳ್ ತಾಳ್ದುವೋ: ಆದಿಪು, ೩. ೩೨)

ಎಲರ್
[ನಾ] ಗಾಳಿ ಮತ್ತು ನರ್ತಕ (ಅವಳ್ದಿರ ಮಿಳಿರ್ವ ಒಳ್ಗರುಳ್ಗಳನೆ ಲೀಲೆಯಿನಾಡಿಸಿ ಪುಷ್ಪಕೇಸರಂ ತೆರಳೆ ತೆರಳ್ಚಿ ಬೀಸಿದುದು ತೆಂಬೆಲರ್ ಎಂಬ ಎಲರ್ ಅಪ್ಪಿಕೊಳ್ವವೋಲ್: ಆದಿಪು, ೨. ೬೫) [ನರಸಿಂಹಶಾಸ್ತ್ರಿಗಳು ನೀಡುವ ಅರ್ಥ]

ಎಲರ್ಚು
[ಕ್ರಿ] ಚೇತನಗೊಳ್ಳು (ಆ ಸತಿಯಿಕ್ಕಿದ ಕಣ್ಣ ನೀರ ಧಾರೆಗಳೊಳೆ ನಾಂದು ಎಲರ್ಚಿ ಪೊದಳ್ದು ಒರ್ಮೆಯೆ ಪಾಱಿದುವು ಉನ್ಮದಾಳಿಗಳ್: ಪಂಪಭಾ, ೫. ೧೦)


logo