logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಎೞೆಗೋಣ
[ನಾ] [ಬಲಿಗಾಗಿ] ಎಳೆದು ತಂದ ಕೋಣ (ಅಂತು ದ್ರೋಣಂ ಎೞೆಗೋಣಸಾವಂ ಸಾವುದುಂ ಭೋರ್ಗರೆದಾರ್ದ ಪಾಂಡವ ಪತಾಕಿನಿಯುಮಂ ಒಂದು ತಲೆಯಾಗೋಡುವ ಕೌರವ್ಯಧ್ವಜಿನಿಯುಮಂ: ಪಂಪಭಾ, ೧೨. ೩೦ ವ) [‘ಎೞೆಗೋಣಸಾವು’ ಎಂಬುದು ಡಿ.ಎಲ್. ಎನ್ ಸ್ವೀಕರಿಸಿರುವ ಪಾಠ, ದೀಪಿಕೆ ೪೪೬)

ಎೞೆದಿಕ್ಕು
[ಕ್ರಿ] ತಂತಿಯನ್ನು ಎಳೆ, ನೂಲನ್ನು ತೆಗೆ (ಪದಕೊರಲ್ ಇಂಪಂ ಅಪ್ಪುಕೆಯೆ ಕೊಂಕು ನಯಂ ಗಮಕಂಗಳಿಂ ಪೊಡರ್ ಕೊದಳ್ ಎೞೆದಿಕ್ಕಿದಂತೆ ಸುತಿಯೊಳ್ ಸಮವಾಗಿರೆ: ಪಂಪಭಾ, ೭. ೮೮)

ಎೞೆದುಕೊಳ್
[ಕ್ರಿ] ಸೆಳೆದುಕೋ (ರಾಜರಾಜನ ಪಡೆ ಚೆಲ್ವನೇನೆೞೆದುಕೊಂಡುದೋ ಬಂದ ಬಸಂತರಾಜನಾ: ಆದಿಪು, ೧೩. ೬)

ಎೞ್ಚತ್ತಿರು
[ಕ್ರಿ] ಎಚ್ಚರಿಕೆಯಿಂದಿರು (ದೇವರ ಮುಂದೆ ಆನಱಿಯೆಂ ಪಿರಿದುಂ ಗೞಪಲ್ ಮಱಸೊಂದಿದನಿಲ್ಲಂ ಅಹಿತಂ ಎೞ್ಚತ್ತಿರ್ದಂ: ಪಂಪಭಾ, ೭. ೪೪)

ಎೞ್ಚಱ್
[ಕ್ರಿ] ಎಚ್ಚರಗೊಳ್ಳು (ಬಣ್ಣವುರಂ ತೀವಿದ ಮಾೞ್ಕೆಯಾಯ್ತು ನವಿಲಿಂ ಕುಂದಂಗಳಿಂ ಇಂದ್ರಗೋಪ ವಿಳಾಸಂಗಳಿಂ ಆಲಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ: ಪಂಪಭಾ, ೭. ೨೪)

ಎೞ್ತರ್
[ಕ್ರಿ] ದಂಡೆತ್ತಿ ಬರು (ಕಿಱಿಯಂದಿಂದಿತ್ತ ದುರ್ಯೋಧನನೆನಿಸಿದ ವಿಕ್ರಾಂತಮೇನಾದುದು ಎೞ್ತಂದು ಇಱಿವ ಉರ್ಕೆಲ್ಲಿತ್ತೊ: ಪಂಪಭಾ=, ೧೩. ೭೭)

ಎೞ್ತರಂ
[ನಾ] ಅಭ್ಯುದಯ (ಆಗುಳಿಸುವ ಬಾಯ ಕೆಂಪಂ ಉದಯಂಗೆಯೆ ಪೊಣ್ಮುವ ಕೆಂಪು ಪೋಲ್ವಿನಂ ತಳರೆ ಬೆಡಂಗಿನೊಳ್ ಪುದಿದು ಎೞ್ತರಂ ಉದ್ಗತಚಂದ್ರಸಿಂಹದಾ: ಆದಿಪು, ೧೨. ೫)

ಎೞ್ತರವು
[ನಾ] ಬರುವಿಕೆ (ಈ ಮದದಂತಿಯ ಎೞ್ತರವುಂ ಈತನ ಶೌರ್ಯಂ ಇಂ ಈ ಮಹೋಗ್ರಸಂಗ್ರಾಮದೊಳ್ ಎನ್ನುಮಂ ಚಳಿಯಿಸಲ್ ಬಗೆದಪುದು: ಪಂಪಭಾ, ೧೨. ೮೪)

ಎೞ್ತು
[ನಾ] ಎತ್ತು (ನೋಂತರ ಪಗೆವರಂ ಎೞ್ತಿಱಿದಂತಾಯ್ತು ಎಂದಿರದೆ ಪುರುಷಕಾರದ ಪೆಂಪಂ ಚಿಂತಿಸಿ: ಪಂಪಭಾ, ೭. ೩೪)

ಎೞ್ದಾಡು
[ಕ್ರಿ] [ಎೞ್ದು+ಆಡು] ಎದ್ದು ಕುಣಿದಾಡು (ಅಚ್ಚರೆಸೆಯರ್ ಎೞ್ದಾಡುವರ್ ಎಂದೊಡೆ ಪೊಗೞಲ್ವೇಡ ಗುಣಾರ್ಣವನ ಜನ್ಮದಿನದ ಬೆಡಗಂ: ಪಂಪಭಾ, ೧. ೧೪೮)


logo