logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಂಬುವೀಡು
[ನಾ] ಬಾಣ ಹೋಗುವಷ್ಟು ದೂರ (ಅಂತು ಒಂದಂಬುವೀಡಿನೆಡೆಯೊಳ್ ಕಾಮನ ಅಂಬುವೀಡಿಂಗೊಳಗಾಗಿ ತಾಂ ಕಾಮರೂಪೆಯಪ್ಪುದಱಿಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಕೊಂಡು: ಪಂಪಭಾ, ೩. ೧೩ ವ)

ಅಂಬೆ
[ನಾ] ಭೀಷ್ಮನು ವಿಚಿತ್ರವೀರ್ಯನಿಗಾಗಿ ಗೆದ್ದು ತಂದು ಮೂವರು ಕನ್ಯೆಯರಲ್ಲಿ ಒಬ್ಬಳು (ಅಂಬೆಯೆಂಬ ದುಂಡುರುಂಬೆ ನಿನಗೆ ವಧಾರ್ಥಮಾಗಿ ಪುಟ್ಟುವೆನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರಿಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಪುಟ್ಟಿ: ಪಂಪಭಾ, ೧. ೮೦ ವ)

ಅಂಬೆತ್ತು
[ಕ್ರಿ] ಬಾಣವನ್ನು ಮೇಲೆತ್ತಿ ಸವಾಲು ಎಸೆ (ಕಲಿಗಂ ಬಲ್ಲಾಳ್ಗಂ ಅಂಬೆತ್ತಿದೆಂ ಇದುವೆ ಪದಂ ಮಾರ್ಕೊಳಲ್ ಸಿಂಧುರಾಜಂ ಗೆಲಲೆಂದು ಆಂ ಬಂದೆಂ: ಪಂಪಭಾ, ೧೧. ೧೪೮)

ಅಂಬೇಱು
[ನಾ] ಬಾಣದ ಹೊಡೆತ (ಒಡವಂದಂಕದ ಕೌರವರ್ ದ್ರುಪದನ ಅಂಬೇಱಿಂಗೆ ಮೆಯ್ಯೊಡ್ಡದೆ ಒಡ್ಡೊಡೆದೋಡುತ್ತಿರೆ: ಪಂಪಭಾ, ೨. ೬೨)

ಅಂಭಃಖಾತಿಕೆ
[ನಾ] ನೀರಿನ ಕಂದಕ (ಧೂಳೀಶಾಳಮಾನಸ್ತಂಭ ಅಂಭಃಖಾತಿಕಾವಲ್ಲೀಮನೋಪವನಪತಾಕಾವನಿಕಲ್ಪಭೂರುಹ: ಆದಿಪು, ೧೦. ೫೨ ವ)

ಅಂಭೋಜ
[ನಾ] ತಾವರೆ (ಇನಕಿರಣದ್ಯೋತಿಗೆತ್ತು ಆಗಳಾಗಳ್ ಮುಗಿದಿರ್ದ ಅಂಭೋಜಂ ಓರೊಂದಲರ್ದುದು: ಆದಿಪು, ೧೨. ೯)

ಅಂಭೋಜನಾಭ
[ನಾ] ಹೊಕ್ಕುಳಲ್ಲಿ ತಾವರೆಯುಳ್ಳವನು, ವಿಷ್ಣು (ರಸೆಯೊಳ್ ಕಾಲಾಗ್ನಿರುದ್ರಂ ಜಲಶಯನದೊಳ್ ಅಂಭೋಜನಾಭಂ ಪೊದಳ್ದು ಆಗಸದಿಂ ಸುತ್ತಿರ್ದ ಅಜಾಂಡೋದರದೊಳ್ ಅಜಂ ಅಡಂಗಿರ್ಪವೋಲ್; ಪಂಪಭಾ, ೮. ೮೬)

ಅಂಭೋಜಪತ್ರೇಕ್ಷಣೆ
[ನಾ] ತಾವರೆಯ ಎಸಳಿನಂತಹ ಕಣ್ಣು[ಳ್ಳವಳು] (ಒಂದು ಅಂಚೆಯಂ ಪೊದೆದು ಒಂದು ಅಂಚೆಯಂ ಉಟ್ಟ ನಿನ್ನಿರವು ಇದೇಂ ಅಂಭೋಜಪತ್ರೇಕ್ಷಣೇ: ಪಂಪಭಾ, ೮. ೬೬)

ಅಂಭೋಜಿನಿ
[ನಾ] ಕಮಲಿನಿ, ತಾವರೆ (ಕಳಹಂಸೀಲೀಲೆ ನೀಲೋತ್ಪಳರುಚಿ ಕನಕಾಂಭೋಜಿನೀಲಕ್ಷ್ಮಿ ಭೃಂಗೀವಳಯಂ ಶ್ರೀಚಕ್ರವಾಕದ್ವಯವಿಳಸನಂ: ಆದಿಪು, ೧೧. ೧೪೧)

ಅಂಭೋದ
[ನಾ] ಮೋಡ (ಲಯಾಂಭೋದಂಗಳ್ ಕವಿವಂತೆವೋಲ್ ಕವಿವುದುಂ ಕಾಲ್ಗಾಪು ಕಾಲ್ಗಾಪಿನೊಳ್ ಜೋದರ್ ಜೋದರೊಳ್ .. .. ಅಗುರ್ವಪ್ಪನ್ನೆಗಂ: ಪಂಪಭಾ, ೧೦. ೯೩)


logo