logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅೞ್ಗಿಸು
[ಕ್ರಿ] ನಾಶಮಾಡು (ಇನ್ನಿನಿಸಂ ಇರ್ದೊಡಂ ಆಜಿಯೊಳ್ ಎನ್ನ ತನೂಜನುಮಂ ಅೞ್ಗಿಪಂ ನರಂ: ಪಂಪಭಾ, ೧೨. ೮೮)

ಅೞ್ಗು
[ಕ್ರಿ] ನಾಶವಾಗು (ಅೞ್ಗಿದ ಬಿಲ್ವಡೆ ಮಾಣದೆ ತೞ್ಗಿದ ರಥಮೆಯ್ದೆ ಬಗಿದ ಪುಣ್ಗಳ ಪೊಱೆಯಂ ಮೊೞ್ಗಿದ ಕರಿಘಟೆ ಜವನಡುವೞ್ಗಿಯನನುಕರಿಸೆ ವೀರಭಟರಣರಂಗಂ: ಪಂಪಭಾ, ೧೧. ೬೪)

ಅೞ್ಗೆ
[ನಾ] ಅಡುಗೆ (ಅೞ್ಗಿದ ಬಿಲ್ವಡೆ ಮಾಣದೆ ತಗ್ಗಿದ ರಥಂ ಎಯ್ದೆ ಬಗಿದ ಪುಣ್ಗಳ ಪೊಱೆಯಿಂ ಮೊೞ್ಗಿದ ಕರಿಘಟೆ ಜವಂ ಅಡುವ ಅೞ್ಗೆಯಂ ಅನುಕರಿಸೆ ವೀರಭಟರಣರಂಗಂ: ಪಂಪಭಾ, ೧೧. ೬೪):

ಅೞ್ತಿ
[ನಾ] ಪ್ರೀತಿ (ಮನ್ನಿಸಿ ಮನ್ತ್ರಿಮುಖ್ನತಿಭಕ್ತಿಭರಾನತಮೂರ್ಧಂ ಅೞ್ತಿಯಿಂ ಬಿನ್ನವಿಕುಂ: ಆದಿಪು, ೨. ೩೪); [ನಾ] ಸಂತೋಷ (ನಾನಾಪ್ರಕಾರದಿಂದಮದೇನೆಂಬುತ್ಸವಮಂ ಅೞ್ತಿಯಿಂ ಮಾಡಿದರೋ: ಆದಿಪು, ೧೬. ೫೪); [ನಾ] ಇಷ್ಟ (ಈ ಕಥೆಯೊಳ್ ತಗುಳ್ಚಿ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್: ಪಂಪಭಾ, ೧. ೧೪); [ನಾ] ಆಸಕ್ತಿ (ನೋಡುವುದಱೊಳ್ ಏಂ ಅೞ್ತಿಯೊಳ್ ಆಡುತ್ತಿರಲಾಗ ತಮ್ಮುತಿರ್ವರುಂ: ಪಂಪಭಾ, ೬. ೭೦)


logo