(ವೈ) ಕರುಳಿನಲ್ಲಿ ಅಮೀಬ ಅಧಿಕವಾದಾಗ (ವಿಶೇಷವಾಗಿ ಎಂಟಮೀಬ ಹಿಸ್ಟೊಲಿಟಿಕ ಎಂಬುದರಿಂದ) ತಲೆದೋರುವ ಬೇನೆ. ರಕ್ತ ಕೀವು ಮಿಶ್ರಿತ ಭೇದಿ. ಅಮೀಬಿಯಾಸಿಸ್
amoebic dysentery
ಅಮೂರ್ತ ಬೀಜಗಣಿತ
(ಗ) ಆಧುನಿಕ ದೃಷ್ಟಿಕೋನದಿಂದ ಬೀಜಗಣಿತೀಯ ಸಂರಚನೆಗಳ ಸಿದ್ಧಾಂತದ ಅಧ್ಯಯನ, ನೋಡಿ: ಬೀಜಗಣಿತೀಯ ಸಂರಚನೆ
abstract algebra
ಅಮೃತಶಿಲೆ
(ಭೂವಿ) ಸ್ಫಟಿಕ ರೂಪದಲ್ಲಿ ಇಲ್ಲವೇ ಕಣಗೂಡಿದ ಸ್ಥಿತಿಯಲ್ಲಿ ದೊರೆಯುವ ರೂಪಾಂತರಿತ ಸುಣ್ಣ ಶಿಲೆ. ಸುಲಭವಾಗಿ ಮೆರುಗು ಪಡೆಯಬಲ್ಲುದು. ವಿಗ್ರಹ ರಚನೆಯಲ್ಲೂ ವಾಸ್ತುಶಿಲ್ಪದಲ್ಲೂ ಬಳಕೆ. ಗಡಸು ಅಥವಾ ನುಣುಪು ಗುಣಕ್ಕೆ ಈ ಪದ ಅನೇಕ ವೇಳೆ ವಿಶೇಷಣವಾಗಿ ಪ್ರಯೋಗ. ಇದರ ಪ್ರಧಾನ ಘಟಕ ಕ್ಯಾಲ್ಸೈಟ್
(ರ) ಗಾತ್ರ ೧೦-೭ ಸೆಮೀಗಿಂತಲೂ ಕಿರಿ ದಾಗಿದ್ದು ಪರಮ ಸೂಕ್ಷ್ಮದರ್ಶಕಕ್ಕೂ ಗೋಚರವಾಗದ ಕಣ
amicron
ಅಮೈಡ್‌ಗಳು
(ರ) ಆಮ್ಲಗಳ ಕಾರ್ಬಾಕ್ಸಿಲ್ ಗುಂಪಿನ ಹೈಡ್ರಾಕ್ಸಿಲ್ಲನ್ನು ಅಮೈಡ್ (- NH2) ಗುಂಪಿನಿಂದ ಪ್ರತಿಸ್ಥಾಪಿಸಿದಾಗ ದೊರೆಯುವ ಸಂಯುಕ್ತಗಳ ಗುಂಪು. ಆಲ್ಕನಮೈಡ್‌ಗಳು
amides
ಅಮೈಲ್ ಅಸೆಟೇಟ್
(ರ) ಬಾಳೆಹಣ್ಣಿನ ಎಣ್ಣೆ. CH2.CO.O.C5.H11 ಅಮೈನ್ ಆಲ್ಕಹಾಲ್ ಮತ್ತು ಅಸೆಟಿಕ್ ಆಮ್ಲಗಳ ಎಸ್ಟರ್. ನಿರ್ವರ್ಣ ದ್ರವ. ಕುಬಿಂ ೧೩೮0 ಸೆ. ದ್ರಾವಕ, ರುಚಿಕಾರಕ ಮತ್ತು ಪರಿಮಳಗಳ ತಯಾರಿಕೆಯಲ್ಲಿ ಬಳಕೆ
amyl acetate
ಅಮೈಲ್ ಆಲ್ಕಹಾಲ್
(ರ) ವಿಶಿಷ್ಟ ವಾಸನೆಯ ನಿರ್ವರ್ಣ ದ್ರವ. ಅನೇಕ ಸಮಾಂಗಿಗಳುಂಟು. ಮಾರುಕಟ್ಟೆಯ ಪದಾರ್ಥದಲ್ಲಿರುವುದು ಪ್ರಧಾನವಾಗಿ ಐಸೊ-ಅಮೈಲ್ ಆಲ್ಕ ಹಾಲ್. ಕುಬಿಂ ೧೩೧.೪0 ಸೆ. ಫ್ಯೂಸಲ್ ಎಣ್ಣೆಯಿಂದ ಲಭ್ಯ. ದ್ರಾವಕವಾಗಿ ಬಳಕೆ
amyl alcohol
ಅಮೈಲೇಸ್
(ಜೀ) ಪಿಷ್ಟದ ಆಂತರಿಕ ೧,೪- ಗ್ಲೈಕೊಸಿಡಿಕ್ ಬಂಧಗಳನ್ನು ಜಲವಿಭಜಿಸುವ ಕಿಣ್ವ. ಪಿಷ್ಟ ಜೀರ್ಣಕ. ಮನುಷ್ಯರ ಜೊಲ್ಲಿನಲ್ಲಿನ ಅಮೈಲೇಸ್‌ಗೆ ಟೈಅಲಿನ್ (ptyalin) ಎಂದು ಹೆಸರು