(ಗ) ಸಾಮಾನ್ಯ ಕೇಂದ್ರದಿಂದ ಹೊರಹೊಮ್ಮುವ ಯಾವುದೇ ರೇಖೆ ಅಥವಾ ಕಿರಣ
radial
ಅರೀಯ ಸಮಮಿತಿ
(ಜೀ) ಕೇಂದ್ರೀಯ ಅಕ್ಷದ ಸುತ್ತ ಸಾಮಾನ್ಯವಾಗಿ ಸದೃಶವಾದ ಭಾಗಗಳು ಕ್ರಮಬದ್ಧ ವಿನ್ಯಾಸದಲ್ಲಿ ವ್ಯವಸ್ಥೆಗೊಂಡಿರುವುದು. ಈ ರಚನೆಯ ಮಧ್ಯದಲ್ಲಿ ಕತ್ತರಿಸಿದಾಗ ದೊರಕುವ ಎರಡರ್ಧಗಳು ಪರಸ್ಪರ ಕನ್ನಡಿ ಪ್ರತಿಬಿಂಬಗಳಂತಿರುತ್ತವೆ. ಸಸ್ಯಕಾಂಡಗಳೂ ಬೇರುಗಳೂ ಸಾಮಾನ್ಯ ವಾಗಿ ಅರೀಯ ಸಮಮಿತಿ ಪ್ರದರ್ಶಿಸುತ್ತವೆ. ಸೀಲೆಂಟಿರೇಟ ವಿಭಾಗಕ್ಕೆ ಸೇರಿದ (ಉದಾ: ಜೆಲ್ಲಿ ಮೀನು) ಮತ್ತು ಎಕೈನೊ ಡರ್ಮೆಟ ವಿಭಾಗಕ್ಕೆ ಸೇರಿದ (ಉದಾ: ನಕ್ಷತ್ರ ಮೀನು) ಎಲ್ಲ ಪ್ರಾಣಿಗಳಿಗೂ ಈ ಲಕ್ಷಣವಿದೆ. ನೋಡಿ: ದ್ವಿಪಾರ್ಶ್ವೀಯ ಸಮಮಿತಿ
radial symmetry
ಅರುಳುಮರುಳು
(ವೈ) ವೃದ್ಧಾಪ್ಯದಿಂದಾಗಿ ಬರುವ ಮರೆವು ಅಥವಾ ಮಿದುಳಿನ ಕ್ಷೀಣತೆಯ ಸ್ಥಿತಿ
senility
ಅರೆ
(ತಂ) ಬಲು ಗಟ್ಟಿ ಪದಾರ್ಥದ ಮೇಲೆ ಉಜ್ಜಿ ಅಥವಾ ಅಂಥವೇ ಎರಡು ಪದಾರ್ಥಗಳ ನಡುವೆ (ಉದಾ: ಎರಡು ಕಲ್ಲುಗಳು) ಇಟ್ಟು, ನೆಗ್ಗಿ, ವಸ್ತುವನ್ನು ಪುಡಿ ಮಾಡು. ಯಾವುದೇ ಪದಾರ್ಥದ ನಿರ್ದಿಷ್ಟ ಭಾಗವನ್ನು ಉಜ್ಜಿ ಅದಕ್ಕೆ ಅಪೇಕ್ಷಿತ ರೂಪ ವನ್ನು ವಿಶೇಷವಾಗಿ ಚೂಪುತುದಿ ಅಥವಾ ಅಂಚನ್ನು ತರುವುದು
grind
ಅರೆ
(ವೈ) ಆಹಾರವನ್ನು ಬಾಯಿಯೊಳಗೆ ಹಾಕಿಕೊಂಡು ನುಂಗಲು ಸುಲಭವಾಗುವಂತೆ ಹಾಗೂ ಚೆನ್ನಾಗಿ ಜೀರ್ಣವಾಗುವಂತೆ, ಜೊಲ್ಲಿನೊಡನೆ ಬೆರೆಸಿ ನುಣ್ಣಗೆ ಅರೆಯುವಿಕೆ. ಅಗಿ, ಜಗಿ. (ತಂ) ಇತರ ವಸ್ತುಗಳೊಂದಿಗೆ ಬೆರೆಸುವ ಮುನ್ನ ರಬ್ಬರನ್ನು ಮ್ಯಾಸ್ಟಿಕೇಟರ್ ಯಂತ್ರದಲ್ಲಿ ಹಾಕಿ ಹೆಚ್ಚು ಮೃದುವೂ, ಸುನಮ್ಯವೂ ಆಗುವಂತೆ ಮಾಡುವುದು
masticate
ಅರೆಚಕ್ರೀಯ
(ರ) ಸರಣಿ ಹಾಗೂ ಉಂಗುರ ಗಳಿಂದ ರೂಪಿತವಾದ ಸಂಯುಕ್ತಗಳ ವಿಷಯದಲ್ಲಿ ಅರ್ಧ ಅಥವಾ ಭಾಗಶಃ ಚಕ್ರೀಯವಾದ
semicyclic
ಅರೆತಲೆನೋವು
(ವೈ) ವಾಸ್ತವದಲ್ಲಿ ಇದೊಂದು ಲಕ್ಷಣಾವಳಿ. ತಲೆನೋವು ನಿಯಮಿತವಾಗಿ ಪುನರಾವರ್ತಿಸುತ್ತದೆ. ಸಾಮಾನ್ಯವಾಗಿ ತಲೆಯ ಯಾವುದಾದರೊಂದು ಅರ್ಧ ಭಾಗದಲ್ಲಿ ತೀವ್ರ ಸ್ವರೂಪದ ತಲೆನೋವು, ಇದರ ಜೊತೆಗೆ ತಲೆಸುತ್ತು , ವಾಕರಿಕೆ, ವಾಂತಿ, ಬೆಳಕಿನ ಅಸಹನೆ, ಕಣ್ಣ ಮುಂದೆ ಮಿಂಚಿನಂತಹ ಬೆಳಕು ಕಾಣಿಸಿಕೊಳ್ಳುವಿಕೆ ಇತ್ಯಾದಿ ಲಕ್ಷಣಗಳೆಲ್ಲ ಅಥವಾ ಕೆಲವು ಮಾತ್ರ ಕಾಣಿಸಿಕೊಳ್ಳಬಹುದು. ಇದರಲ್ಲಿ ಅನೇಕ ನಮೂನೆಗಳಿವೆ
migraine
ಅರೆಪಾರಗಮ್ಯ ಪೊರೆ
(ರ) ದ್ರಾವಕವನ್ನು ಹಾಯಗೊಡುವ ಆದರೆ ಕೆಲವು ವಿಲೀನಿತ ಹಾಗೂ ನಿಲಂಬಿತ ವಸ್ತುಗಳನ್ನು ಹಾಯಗೊಡದ ಪೊರೆ. ಉದಾ : ತಾಮ್ರದ ಫೆರೊಸಯನೈಡ್ ಪೊರೆ. Cu2fe(CN)6. ಇದು ನೀರನ್ನು ಹಾಯಗೊಡುತ್ತದೆ, ಆದರೆ ವಿಲೀನಿತ ವಸ್ತುಗಳನ್ನು ಅತ್ಯಲ್ಪ ಪ್ರಮಾಣಗಳಲ್ಲಷ್ಟೆ ಹಾಯಗೊಡುತ್ತದೆ
semipermeable membrane
ಅರೆಲಕ್ವ
(ವೈ) ಭಾಗಶಃ ಅಥವಾ ಅಪೂರ್ಣ ಪಾರ್ಶ್ವವಾಯು. ಲಘುವಾದ ಪಾರ್ಶ್ವವಾಯು. ಮಿದುಳಿನ ಸಿರೆಯಲ್ಲಿ ಯಾವು ದಾದರೂ ಅಡಚಣೆ ಏರ್ಪಟ್ಟು ಅಥವಾ ಸಿರೆ ಛಿದ್ರವಾಗಿ, ರಕ್ತ ಸರಬರಾಜಿಗೆ ಅಡ್ಡಿ ಆದಾಗ ತಲೆದೋರುವ ಸ್ಥಿತಿ
paresis
ಅರೇಖಿತ ಸ್ನಾಯು
(ಪ್ರಾ) ಮನಸ್ಸಿನ ನಿಯಂತ್ರಣಕ್ಕೆ ಅಧೀನವಾಗಿರದ ಮಾಂಸಖಂಡ. ಸಾಧಾರಣವಾಗಿ ನಯವಾದ ಮತ್ತು ಕದಿರು ರೂಪದ ಸ್ನಾಯು ಊತಕವನ್ನು ಒಳಗೊಂಡಿರುವುದು. ಅನೈಚ್ಛಿಕ ಮಾಂಸಖಂಡ