(ಗ) p ಮತ್ತು q ಎರಡು ಉಕ್ತಿಗಳಾಗಿರಲಿ. “pಯು ಆಗಿದ್ದರೆ ಆಗ q"(p®q), ಈ ನಿರ್ಬಂಧಗಳು ಸಾಧುವಾಗಿರಲಿ. ಈ ಸಂದರ್ಭದಲ್ಲಿ “pಯು ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ q(p«q)". ಇಂಥ ಸನ್ನಿವೇಶದಲ್ಲಿ “qಯು pಗೆ ಅವಶ್ಯ ಮತ್ತು ಸಂತೃಪ್ತ ನಿರ್ಬಂಧ" ಎನ್ನುತ್ತೇವೆ. ಉದಾ: ಎರಡು ತ್ರಿಭುಜಗಳ ಭುಜಗಳು ಅನುಪಾತೀಯವಾಗಿದ್ದರೆ ಮತ್ತು ಆಗಿದ್ದರೆ ಮಾತ್ರ ಅವು ಸದೃಶ. ತ್ರಿಭುಜಗಳ ಸದೃಶತೆಗೆ ಇದು ಅವಶ್ಯ ಮತ್ತು ಸಂತೃಪ್ತ ನಿರ್ಬಂಧ. ಫಲನದ ಅವಕಲನೀಯತೆಗೆ ಅವಿಚ್ಛಿನ್ನತೆಯು ಅವಶ್ಯ ನಿರ್ಬಂಧ, ಆದರೆ ಸಂತೃಪ್ತವಲ್ಲ. ಅನಂತಶ್ರೇಣಿಯು ಅಭಿಸರಣೀಯವಾಗಿದ್ದರೆ ಆಗ . ಈ ನಿರ್ಬಂಧವು ಅನಂತ ಶ್ರೇಣಿಯ ಅಭಿಸರಣೆಗೆ ಅವಶ್ಯ. ಆದರೆ ಸಂತೃಪ್ತವಲ್ಲ. ಪರಂತು, ಯಾವುದೇ ಅನಂತಶ್ರೇಣಿಯಲ್ಲಿ ಆಗಿದ್ದರೆ ಅದು ಅಭಿಸರಣೀಯವಾಗಿರಬೇಕಾಗಿಲ್ಲ
necessary and sufficient condition
necessary and sufficient condition
">
ಅವಶ್ರವ್ಯ
(ಭೌ) ಕಿವಿಗೆ ಕೇಳಿಸದಷ್ಟು ಕಡಿಮೆ ಆವೃತ್ತಿಯ ಧ್ವನಿ ತರಂಗಗಳ/ಅವಕ್ಕೆ ಸಂಬಂಧಿಸಿದ. ನೋಡಿ: ಅವಸ್ವನ ವಿಜ್ಞಾನ
infrasonic
ಅವಸಾದನ
(ಭೂವಿ) ಶಿಲೆ ಶಿಥಿಲಗೊಂಡ ಬಳಿಕ ಗಾಳಿ, ನೀರು ಅಥವಾ ಹಿಮದಿಂದ ಒಯ್ಯಲ್ಪಟ್ಟು ಸಂಚಯಿಸಿದ ಹುಡಿ ಪದಾರ್ಥ. ಉದಾ: ಮರಳು, ಜೇಡಿ, ನುರುಜುಗಲ್ಲು , ಒತ್ತರ, ನೋಡಿ: ಜಲಜ /ಅವಸಾದನ ಶಿಲೆ
sediment
ಅವಸ್ವನ ವಿಜ್ಞಾನ
(ಭೌ) ಗಾಳಿಯಲ್ಲಿ ಶಬ್ದ ವೇಗಕ್ಕಿಂತ (ಮ್ಯಾಕ್ ಸಂಖ್ಯೆ ೧) ಕಡಿಮೆ ವೇಗದಲ್ಲಿ ಚಲಿಸುವ ವಸ್ತು ಅಥವಾ ಪ್ರವಾಹದ ಅಧ್ಯಯನ. ಸಬ್‌ಸಾನಿಕ್ಸ್
subsonics
ಅವಳಿಗಳು
(ಸ) ಒಂದೇ ನಿಷೇಚಿತ ಅಂಡ ಇಬ್ಭಾಗವಾಗಿ ಒಂದೊಂದರಿಂದಲೂ ಪ್ರತ್ಯೇಕವಾಗಿ ಬೆಳೆದ ಸದೃಶರೂಪದ ಜೀವಿ ಗಳು. ಸ್ತನಿಗಳಲ್ಲಿ ಏಕ ಕಾಲದಲ್ಲಿ ನಿಷೇಚಿತ ಗೊಂಡ ಎರಡು ಅಥವಾ ಹೆಚ್ಚು ಅಂಡಗಳಿಂದಲೂ ಜೀವಿಗಳು ಜನ್ಮ ತಾಳಬಹುದು. ಇವು ಸದೃಶವಾಗಿರಬೇಕು ಎಂದೇನೂ ಇಲ್ಲ. ಯಮಳ
twins
ಅವಾಂಛಿತ
(ತಂ) ಯಾವುದೇ ವಿದ್ಯುತ್ ಅಥವಾ ಕಾಂತೀಯ ಸಾಧನಗಳಲ್ಲಿ ನಿರೀಕ್ಷಿತ ಪರಿಣಾಮಗಳ ಜೊತೆಗೆ ಉಂಟಾಗುವ ಅನಪೇಕ್ಷಿತ ಪರಿಣಾಮಗಳು
(ವೈ) ಆಕ್ಸಿಜನ್ ಇಲ್ಲದೆಯೂ ಬದುಕಬಲ್ಲ. ಅಂಥ ಸೂಕ್ಷ್ಮಜೀವಿಗೆ ಸಂಬಂಧಿಸಿದ
anaerobic
ಅವಾಯವಿಕ ಉಸಿರಾಟ
(ಜೀ) ಕೋಶ ಮಟ್ಟದಲ್ಲಿ ಜರುಗುವ ಎರಡು ಪ್ರಧಾನ ಉಸಿರಾಟಗಳ ಪೈಕಿ ಒಂದು. ಇದರಲ್ಲಿ ಆಕ್ಸಿಜನ್ ಇರಬೇಕಾಗಿಲ್ಲ. ಕೆಲವು ಯೀಸ್ಟ್, ಬ್ಯಾಕ್ಟೀರಿಯಾ ಮತ್ತು ಸ್ನಾಯುಊತಕಗಳಲ್ಲಿ ಅವಾಯವಿಕ ಉಸಿರಾಟ ಕಂಡುಬರುತ್ತದೆ. ಇನ್ನೊಂದು (ನೋಡಿ) ವಾಯವಿಕ ಉಸಿರಾಟ
anaerobic respiration
ಅವಾಯುಜೀವಿ
(ಜೀ) ಆಕ್ಸಿಜನ್ ಇಲ್ಲದಲ್ಲೂ ಅಥವಾ ಅದರ ತೀವ್ರ ಕೊರತೆಯಲ್ಲೂ ಬೆಳೆಯಬಲ್ಲ ಸೂಕ್ಷ್ಮಜೀವಿ