(ಭೂ) ನದೀ ಮುಖಜ ಭೂಮಿಯಲ್ಲಿ ನೆಲ ತಗ್ಗಾಗಿರುವುದರಿಂದಲೋ ಸಮುದ್ರಮಟ್ಟ ಎತ್ತರವಾಗಿ ಇರುವುದ ರಿಂದಲೋ ಸಮುದ್ರದ ನೀರು ನದೀ ಮುಖದ ಒಳಕ್ಕೆ ನುಗ್ಗಿ ಬರುತ್ತಿರುವ ಪ್ರದೇಶ. ಅನೇಕ ಅಳಿವೆಗಳಲ್ಲಿ ಉತ್ತಮ ರೇವು ಪಟ್ಟಣಗಳಿವೆ
estuary
ಆಂಕರೈಟ್
(ಭೂವಿ) ಕ್ಯಾಲ್ಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಕಬ್ಬಿಣದ ಕಾರ್ಬೊನೇಟ್. ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿರುವ ಬಿಳಿ, ಕೆಂಪು/ಬೂದು ಕಾರ್ಬೊನೇಟ್ ಖನಿಜ. ಸಾಸಾಂ ೨.೯೫-೩.೧ Ca (Fe, Mg, Mn) (CO3)2
ankerite
ಆಂಕೊಸೆರ್ಕಿಯಾಸಿಸ್
(ವೈ) ಪಶ್ಚಿಮ ಆಫ್ರಿಕದಲ್ಲಿ ಆಂಕೊಸರ್ಕವೊಲ್ವುಯಿಯಸ್ ಜಾತಿಯ ಜಂತುಹುಳುಗಳಿಂದ ಮಾನವನ ಚರ್ಮಕ್ಕೂ ಉಪಚರ್ಮದ ಊತಕಗಳಿಗೂ ತಗುಲುವ ಸೋಂಕು ರೋಗ
onchocerciasis
ಆಂಕೋಜೀನ್
(ಜೀ) ಕ್ಯಾನ್ಸರ್‌ಕಾರಕ ಜೀನ್. ಸೂಕ್ತ ಪರಿಸರದಲ್ಲಿ ಪ್ರಚೋದನೆಗೊಂಡು ಜೀವಕೋಶವೊಂದನ್ನು ಗಂತಿಕೋಶವಾಗಿ ಪರಿವರ್ತಿಸಬಲ್ಲ ರೋಗಕಾರಕ ಜೀನ್
oncogene
ಆಂಗ್ಯುಲೇಟ್
(ಸ) ಕೋನಗಳಿರುವ ಅಥವಾ ಚೂಪು ಮೂಲೆಗಳಿರುವ ಎಲೆಗಳನ್ನು ಕುರಿತ ಪದ
angulate
ಆಂಟಿಕ್ಯಾಥೋಡ್
(ಭೌ) ಎಕ್ಸ್-ಕಿರಣ ನಾಳದಲ್ಲಿ ಕ್ಯಾಥೋಡ್‌ನಿಂದ ಹರಿಯುವ ಎಲೆಕ್ಟ್ರಾನುಗಳ ಲೋಹಗುರಿ. ಇದರ ಮೇಲೆ ಕ್ಯಾಥೋಡ್ ಕಿರಣಗಳನ್ನು ನಾಭೀಕರಿಸಿದಾಗ ಎಕ್ಸ್-ಕಿರಣಗಳು ಹೊಮ್ಮುತ್ತವೆ
anticathode
ಆಂಟಿನ್ಯೂಟ್ರಾನ್
(ಭೌ) ನ್ಯೂಟ್ರಾನ್‌ನ ಗಿರಕಿ (ಸ್ಪಿನ್) ಹಾಗೂ ಕಾಂತೀಯ ಮಹತ್ತ್ವಗಳಿಗೆ ವಿರುದ್ಧವಾದುವನ್ನು ಪ್ರದರ್ಶಿಸುವ ಪ್ರತಿಕಣ
antineutron
ಆಂಟಿನ್ಯೂಟ್ರಿನೊ
(ಭೌ) ನ್ಯೂಟ್ರಿನೋದ ಪ್ರತಿಕಣ
antineutrino
ಆಂಟಿಪ್ರೋಟಾನ್
(ಭೌ) ಋಣಾವೇಶದ ಹೊರತಾಗಿ ಪ್ರೋಟಾನಿನ ತತ್ಪ್ರತಿಯಾಗಿರುವ ಮತ್ತು ಅರ್ಧಾಯು ೦.೦೫ sec ಇರುವ ಅಲ್ಪಾಯುಷಿ ಕಣ; ಸಹಜ ಪ್ರೋಟಾನ್ ಜೊತೆ ಅಂತರ ಕ್ರಿಯೆ ಜರಗಿಸಿ ಮಿಸಾನುಗಳನ್ನು ಹೊಮ್ಮಿಸುತ್ತದೆ