logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆಯುರ್ನಿರೀಕ್ಷೆ
(ವೈ) ಯಾವುದೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ ಅಲ್ಲಿಂದ ಮುಂದೆ ಎಷ್ಟು ಕಾಲ ಬದುಕಿರಬಹುದು ಎಂಬುದರ ಅಂದಾಜು
life expectancy

ಆಯುಷ್ಯ ಕೋಷ್ಟಕ
(ಸಾ) ಮೊದಲು ಜೀವವಿಮಾ ಕಂಪನಿಗಳು ಯೋಜಿಸಿ ಈಗ ಪರಿಸರ ವಿಜ್ಞಾನಿಗಳು ವನ್ಯಜೀವಿ ಅಧ್ಯಯನದಲ್ಲಿ ಬಳಸುತ್ತಿರುವ ಜನಾಯುರ್ಮಾನ ಪಟ್ಟಿ. ಸರಾಸರಿ ಆಯುಷ್ಯದ ಗಣನಪಟ್ಟಿ. ಆಯುರ್ದಾಯ ಕೋಷ್ಟಕ
life table

ಆರಂಭಕಾರಿ
(ರ) ಸರಣಿ ಕ್ರಿಯೆಯನ್ನು ಪ್ರಾರಂಭಿಸುವ (ಅಭಿಕಾರಕವಲ್ಲದ) ವಸ್ತು ಅಥವಾ ಅಣು. ಪಾಲಿಮರೀಕರಣ (ಬಹುರೂಪೀಕರಣ)ದಲ್ಲಿರುವಂತೆ. ಅಸಿಟಿಲ್ ಪರಾಕ್ಸೈಡ್
initiator

ಆರಿಕ್ ಆಮ್ಲ
(ರ) Au2O3 ಆರಿಕ್ ಆಕ್ಸೈಡ್. ಚಿನ್ನದ ಕ್ಷಾರೀಯ ಮತ್ತು ಆಮ್ಲೀಯ ಗುಣಗಳೆರಡೂ ಇರುವ ತ್ಸಿವೇಲೆನ್ಸೀಯ ಆಕ್ಸೈಡ್
auric acid

ಆರೀನ್
(ರ) ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳ ಉದಾ: ಬೆನ್ಝೀನ್, ಟಾಲೀನ್, ನ್ಯಾಫ್ತಲೀನ್‌ಗಳ ಸಾರ್ವತ್ರಿಕ ನಾಮ
arene

ಆರೈಕೆ
(ವೈ) ರೋಗ ವಾಸಿಯಾದ ಬಳಿಕ ರೋಗಿಗೆ ನೀಡುವ ಶುಶ್ರೂಷೆ
aftercare

ಆರೈಲ್
(ರ) ಆರೊಮ್ಯಾಟಿಕ್ ಮಾನೊವೇಲೆಂಟ್ ಹೈಡ್ರೊ ಕಾರ್ಬನ್ ರ‍್ಯಾಡಿಕಲ್‌ಗಳನ್ನು ಸೂಚಿಸುವ ಪದ. C6H5Cl ಒಂದು ಆರೈಲ್ ಹ್ಯಾಲೈಡ್
aryl

ಆರೊಮ್ಯಾಟಿಕ್ ಸಂಯುಕ್ತ
(ರ) ತನ್ನ ಅಣುಗಳಲ್ಲಿ ಬೆನ್ಝೀನ್ ಉಂಗುರಗಳನ್ನು ಪಡೆದಿರುವ ಅಥವಾ ಬೆನ್ಝೀನ್‌ನಂಥದೇ ರಾಸಾಯನಿಕ ಗುಣಗಳನ್ನು ಪಡೆದಿರುವ ಕಾರ್ಬನಿಕ ಸಂಯುಕ್ತ
aromatic compound

ಆರೋಗ್ಯ ಧಾಮ
(ಸಾ) ರೋಗಿಗಳಿಗೂ ರೋಗಮುಕ್ತರಾದವರಿಗೂ ಆರೈಕೆ ನೀಡುವ ತಾಣ
convalescent home

ಆರೋಗ್ಯ ಭೌತವಿಜ್ಞಾನ
(ವೈ) ಅಯಾನೀಕಾರಕ ವಿಕಿರಣದ ಹಾನಿಕರ ಪರಿಣಾಮಗಳನ್ನೂ ಅವುಗಳಿಗೆ ಈಡಾಗದಂತೆ ವ್ಯಕ್ತಿಗಳ ಆರೋಗ್ಯವನ್ನು ಸಂರಕ್ಷಿಸುವ ವಿಧಾನಗಳನ್ನೂ ಅಭ್ಯಸಿಸುವ ವಿಕಿರಣ ವಿಜ್ಞಾನ ಶಾಖೆ
health physics


logo