(ತಂ) ಉಪಕರಣವನ್ನು - ಉದಾಹರಣೆಗೆ, ದೂರದರ್ಶಕ - ಜೋಡಿಸಿರುವ ದೃಗೇತರ ಭಾಗಗಳಿರುವ ನೆಲೆಗಟ್ಟು
mounting
ಆಧಾರ ರೇಖೆ
(ಭೂ) ಮೋಜಣಿಯಲ್ಲಿ (ಸರ್ವೇಕ್ಷಣೆ) ಸೂಕ್ಷ್ಮವಿಧಾನಗಳಿಂದ ಅತಿ ನಿಷ್ಕೃಷ್ಟವಾಗಿ ಅಳೆದು ಉದ್ದವನ್ನು ನಿರ್ಧರಿಸಲಾದ ರೇಖೆ. ತರುವಾಯದ ತ್ರಿಕೋನೀಕರಣಕ್ಕೆ (ಪ್ರದೇಶವನ್ನು ತ್ರಿಕೋನಗಳಾಗಿ ವಿಂಗಡಿಸಿ ಉದ್ದಳತೆಗಳನ್ನು ನಿರ್ಧರಿಸುವುದಕ್ಕೆ) ಇದೇ ಆಧಾರ
base line
ಆಧಾರಶಿಲೆ
(ಭೂವಿ) ಖನಿಜ ನಿಕ್ಷೇಪಗಳ ತಳದಲ್ಲಿಯ ಶಿಲಾಸ್ತರ; ತಳಗಲ್ಲು
bedrock
ಆಧಾರ ಸದಿಶಗಳು
(ಗ) ನಿರ್ದೇಶಕಾಕ್ಷಗಳ ಧನ ದಿಶೆಯಲ್ಲಿ ಆಯ್ದ ಏಕಮಾನ ಸದಿಶಗಳು. ಯಾವುದೇ ಸದಿಶವನ್ನು ಈ ಆಧಾರ ಸದಿಶಗಳ ರೇಖೀಯ ಸಂಯೋಗವಾಗಿ ನಿರೂಪಿಸ ಬಹುದು. ಮೂರು ಆಯಾಮಗಳಲ್ಲಿ ಪ್ರತೀಕ, i, j, k
base vectors
ಆಧುನಿಕ ಭೌತವಿಜ್ಞಾನ
(ಭೌ) ೧೮೯೫-೧೯೦೫ರ ನಡುವಿನ ಅವಧಿಯಲ್ಲಿ ನಡೆದ ಎಕ್ಸ್-ಕಿರಣ, ವಿಕಿರಣಪಟುತ್ವ, ಎಲೆಕ್ಟ್ರಾನ್‌ಗಳ ಆವಿಷ್ಕಾರಗಳಿಂದಲೂ ಕ್ವಾಂಟಮ್ (ಶಕಲ) ಸಿದ್ಧಾಂತ, ಸಾಪೇಕ್ಷತಾ ಸಿದ್ಧಾಂತಗಳ ಮಂಡನೆಯಿಂದಲೂ ರೂಪುಗೊಂಡು ಮುಂದುವರಿದ ಭೌತವಿಜ್ಞಾನ. ಈ ಅವಧಿಗಿಂತ ಹಿಂದಿನದು ‘ಅಭಿಜಾತ ಭೌತವಿಜ್ಞಾನ’
modern physics
ಆಧುನಿಕ ವಿಜ್ಞಾನ
(ಸಾ) ಹಿಂದಿನವರ ಕಲ್ಪನೆ ಗಳನ್ನು ಪ್ರಶ್ನಿಸುವ, ಅಧ್ಯಯನಗಳಲ್ಲಿ ಮಾಪನಗಳನ್ನು ಬಳಸುವ, ಪ್ರಯೋಗಗಳನ್ನು ನಡೆಸಿ ಸಿದ್ಧಾಂತಗಳನ್ನು ದೃಢೀಕರಿಸುವ ಅಥವಾ ಹೊಸ ಹೊಳವುಗಳನ್ನು ಪಡೆಯುವ ವಿಧಾನಗಳನ್ನು ರೂಢಿಸಿಕೊಂಡ ವಿಜ್ಞಾನ. ೧೬ನೇ ಶತಮಾನದಲ್ಲಿ ಕೊಪರ್ನಿಕಸ್‌ನಿಂದ ಪ್ರಾರಂಭವಾದ ಈ ಪ್ರವೃತ್ತಿಯನ್ನು ವೆಸೇಲಿಯಸ್, ವಿಲಿಯಂ ಹಾರ್ವೆ, ಗೆಲಿಲಿಯೊ ಮುಂದುವರೆಸಿದರು. ವೀಕ್ಷಣೆ, ವೀಕ್ಷಣೆಗಳ ವರ್ಗೀಕರಣ, ಮಾಪನ ಮತ್ತು ವಿಶ್ಲೇಷಣೆ, ಅನುಮಾನ ಅಥವಾ ವಿವರಣೆ, ಸಿದ್ಧಾಂತ, ಪ್ರಯೋಗ, ಸೂಚಿತ ಸಿದ್ಧಾಂತದ ದೃಢೀಕರಣ, ಸಿದ್ಧಾಂತದಿಂದ ಹೊಮ್ಮುವ ಇತರ ಪರಿಣಾಮಗಳ ನಿರ್ಗಮನ - ಇವೆಲ್ಲ ಆಧುನಿಕ ವೈಜ್ಞಾನಿಕ ವಿಧಾನದ ಹೆಜ್ಜೆಗಳಾದುವು
modern science
ಆನಕೊಂಡ
(ಪ್ರಾ) ಬೋವಿಡೀ ಕುಟುಂಬಕ್ಕೆ ಸೇರಿದ ಹೆಬ್ಬಾವು. ಯೂನೆಕ್ಟಿಸ್ ಮುರಿನಸ್ ವೈಜ್ಞಾನಿಕ ನಾಮ. ಅಮೆಜಾನ್ ನದೀ ತೀರದ ಕಾಡುಗಳಲ್ಲಿ ಕಾಣಬರುತ್ತದೆ. ವಿಷರಹಿತ ಹಾವು. ನೀರಿನಲ್ಲೂ ಮರದ ಮೇಲೂ ವಾಸಿಸುತ್ತದೆ
anaconda
ಆನತ
(ಗ) ನೋಡಿ: ಬಾಗು
inclination
ಆನಯಾನ್
(ಭೌ) ಋಣ ಅಯಾನ್. ವಿದ್ಯುದ್ವಿಭಾಜ್ಯದಲ್ಲಿ ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್‌ಗಳನ್ನು ಗಳಿಸಿ ಆ ಕಾರಣ ದಿಂದಾಗಿ ಆನೋಡ್ (ಧನ ವಿದ್ಯುದ್ವಾರ) ಕಡೆಗೆ ಆಕರ್ಷಿತ ವಾಗುವ ಪರಮಾಣು ಅಥವಾ ಅಣು
anion
ಆನಿಕ್ಸ್
(ಭೂವಿ) ಬೇರೆ ಬೇರೆ ಬಣ್ಣಗಳ ಪದರುಗಳುಳ್ಳ ಸಿಲಿಕದ ಒಂದು ಗುಪ್ತ ಸ್ಫಟಿಕೀಯ ಬಗೆ. ಬಿಳಿ, ಕಂದು ಹಾಗೂ ಕಪ್ಪು ಬಣ್ಣಗಳ ಪದರಗಳು ಈ ಪ್ರಶಸ್ತ ಖನಿಜದಲ್ಲಿ ಪರ್ಯಾಯವಾಗಿ ಕಂಡುಬರುತ್ತವೆ. ಕಲ್ಲುಬ್ಬು ಕೆತ್ತನೆಗಳಲ್ಲಿ ಬಳಕೆ. ಬಿಳಿ ಬಣ್ಣದ ಮೇಲ್ಪದರದಲ್ಲಿ ಉಬ್ಬು ಚಿತ್ರ ಅಥವಾ ಉಬ್ಬು ಪ್ರತಿಮೆ ಕೆತ್ತಿ ಕೆಳಗಿನ ಕಂದು, ಕಪ್ಪು ಪದರಗಳನ್ನು ಹಿನ್ನೆಲೆಯಾಗಿ ಬಿಡಲಾಗುತ್ತದೆ