logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆರೋಗ್ಯಶಾಸ್ತ್ರ
(ವೈ) ವ್ಯಕ್ತಿಗಳನ್ನೂ ಸ್ಥಳಗಳನ್ನೂ ವಸ್ತುಗಳನ್ನೂ ಸ್ವಚ್ಛವಾಗಿರಿಸುವುದು, ಸರಿಯಾದ ರೀತಿಯಲ್ಲಿ ಉಸಿರಾಡುವುದು, ಸ್ನಾಯುಗಳಿಗೆ ಸಾಕಷ್ಟು ಕೆಲಸ ಕೊಡುವುದು ಇತ್ಯಾದಿಗಳ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ರೀತಿನೀತಿಗಳನ್ನೂ ಅಭ್ಯಾಸಗಳನ್ನೂ ಅಧ್ಯಯನ ಮಾಡುವ ಶಾಸ್ತ್ರ
hygiene

ಆರೋಪಿತ ಬಲ
(ಗ) ಯಾವುದೇ ವ್ಯವಸ್ಥೆಗೆ ಅಥವಾ ಸಾಧನಕ್ಕೆ ಅನ್ವಯಿಸಿದ ಬಲ
impressed force

ಆರೋಹಣ ಸಂಪಾತ
(ಖ) ಭೂಮಿಯನ್ನು ಪರಿಭ್ರಮಿಸುತ್ತಿರುವ ಯಾವುದೇ ಉಪಗ್ರಹ ವಿಷುವದ್ ವೃತ್ತ ವನ್ನು (ಸಮಭಾಜಕ ವೃತ್ತದ ತಲವು ಖಗೋಳವನ್ನು ಛೇದಿಸುವ ಮಹಾವೃತ್ತ) ದಕ್ಷಿಣದಿಂದ ಉತ್ತರಕ್ಕೆ ದಾಟುವ ಬಿಂದು. ಉಚ್ಚಸಂಪಾತ. ರಾಹು. ನೋಡಿ: ಅವರೋಹಣ ಸಂಪಾತ
ascending node

ಆರ್ಕ್ ತ್ರಿಕೋಣಮಿತೀಯ ಫಲನಗಳು
(ಗ) ನೋಡಿ : ಪ್ರತಿಲೋಮ ತ್ರಿಕೋಣಮಿತೀಯ ಫಲನಗಳು
arc trigonometric functions

ಆರ್ಕ್ ಹೈಪರ್ಬಾಲಿಕ್ ಫಲನಗಳು
(ಗ) ನೋಡಿ : ಪ್ರತಿಲೋಮ ಹೈಪರ್ಬಾಲಿಕ್ ಫಲನಗಳು
arc hyperbolic functions

ಆರ್ಕಿಡ್
(ಸ) ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ. ಉಷ್ಣ ಹಾಗೂ ಸಮ ಶೀತೋಷ್ಣವಲಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕೆಲವು ಸೆಂ.ಮೀಗಳಿಂದ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಅಲಂಕಾರ ಕ್ಕಾಗಿ ಬೆಳೆಸುತ್ತಾರೆ. ಚಿತ್ರ ವಿಚಿತ್ರ ಹೂ ಬಿಡುತ್ತದೆ. ಸೀತೆ ಹೂವಿನ ಗಿಡ. ಸೀತಾಳಗೆಡ್ಡೆ
orchid

ಆರ್ಕಿಯಾಪ್ಟೆರಿಕ್ಸ್
(ಪ್ರಾ) ಸುಮಾರು ೧೮೧ ಮಿಲಿಯನ್ ವರ್ಷಗಳಷ್ಟು ಹಿಂದೆ ಇದ್ದ, ಉರುಗಗಳಿಗೂ ಹಕ್ಕಿಗಳಿಗೂ ನಡುವಣ ಸ್ಥಿತಿಯ, ಪಳೆ ಯುಳಿಕೆಗಳಲ್ಲಷ್ಟೇ ಕಾಣಬರುವ ಪ್ರಾಚೀನ ಕಾಲದ ಹಕ್ಕಿ. ಇದಕ್ಕೆ ಉದ್ದ ಬೆನ್ನೆಲುಬಿನ ಬಾಲವೂ ಹಲ್ಲುಗಳೂ ಇದ್ದವು. ಪಕ್ಷಿಗಳಿಗೂ ಸರೀಸೃಪಗಳಿಗೂ ಸಂಬಂಧ ಸೂಚಿಸುವ ಆಧಾರ ಪಕ್ಷಿ. ಪ್ರಾಕ್‌ಪಕ್ಷಿ
archaepterix

ಆರ್ಗನ್
(ತಂ) ತಿದಿಯೊತ್ತಿ ಕೀಲಿಕೈಗಳ ಮೂಲಕ ಪಿಳ್ಳಂಗೋವಿಗಳಲ್ಲಿ ಗಾಳಿ ಹರಿಸಿ ಸಂಗೀತ ನುಡಿಸುವ ಒಂದು ವಾದ್ಯ. (ವೈ) ದೇಹದ ಯಾವುದೇ ಭಾಗ. ಅಂಗ, ಅವಯವ
organ

ಆರ್ಗನೈಜರ್
(ಪ್ರಾ) ಭ್ರೂಣದಲ್ಲಿ ಇತರ ಭಾಗಗಳು ನಿರ್ದಿಷ್ಟ ರೀತಿಯಲ್ಲಿ ಅಭಿವರ್ಧಿಸಲು ಅವಶ್ಯವಾದ ವಸ್ತು ಗಳನ್ನು ತಲಪಿಸಿ ಅವುಗಳ ಬೆಳವಣಿಗೆಯನ್ನು ನಿಯಂತ್ರಿಸುವ ಯಾವುದೇ ಭಾಗ. ಉದಾ: ಪ್ರೈಮರಿ ಆರ್ಗನೈಜರ್ (ಬ್ಲಾಸ್ಟ್ರೊ ಪೋರ್‌ಲಿಪ್ ಅಥವಾ ಆರ್ಕೆಂಟರಾನ್ ರೂಫ್) ಗ್ಯಾಸ್ಟ್ರುಲಕ್ಕೆ ಪೂರ್ಣ ಜೀವಿಯಾಗಿ ಅಭಿವರ್ಧಿಸಲು ಕಾರಣವಾಗುತ್ತದೆ
organizer

ಆರ್ಗನೊಟ್ರೊಫಿಕ್
(ಜೀ) ಜೀವಿಯ ಅಂಗಗಳಿಗೆ ಅವಶ್ಯವಾದ ಆಹಾರವನ್ನು ರೂಪಿಸುವ ಹಾಗೂ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದ
organotrophic


logo