logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆನೋಡೀಕರಿಸು
(ರ) ಅಲ್ಯೂಮಿನಿಯಮ್ ಇಲ್ಲವೇ ಲಘು ಮಿಶ್ರಲೋಹಗಳ ಮೇಲೆ ಗಡಸಾದ ಮತ್ತು ಸಂಕ್ಷಾರಣ ಶೀಲವಲ್ಲದ ಆಕ್ಸೈಡ್ ಪೊರೆಯನ್ನು ನಿಕ್ಷೇಪಿಸುವ ಪ್ರಕ್ರಿಯೆ; ಇಲ್ಲಿ ಅಲ್ಯೂಮಿನಿಯಮ್ಮೇ ಆನೋಡ್
anodizing

ಆಪತನ
(ಭೌ) ನೇರ ಗತಿಯಲ್ಲಿ ಚಲಿಸುತ್ತಿರುವ ವಸ್ತುವು (ಉದಾ: ಬೆಳಕಿನ ಕಿರಣ) ತಲದ ಮೇಲೆ ಬೀಳುವುದು. ಆಪಾತ
incidence

ಆಪಾತಕಿರಣ
(ಭೌ) ಆಕರದಿಂದ ಬರುವ ಬೆಳಕಿನ ಕಿರಣಕ್ಕೆ ಆಪಾತಕಿರಣವೆಂದೂ ವಸ್ತುವಿನಿಂದ (ಉದಾ: ಕನ್ನಡಿಯಿಂದ) ಹಿಂದಿರುಗಿಸಲ್ಪಟ್ಟ ಕಿರಣಕ್ಕೆ ಪ್ರತಿಫಲಿತ ಕಿರಣವೆಂದೂ ಹೆಸರು
incident ray

ಆಪಾತಕೋನ
(ಭೌ) ಸಮತಲದ ಮೇಲೆ ಬೀಳುವ ಕಿರಣಕ್ಕೂ ಸ್ಪರ್ಶ ಬಿಂದುವಿನಲ್ಲಿ ಆ ಸಮತಲಕ್ಕೆಳೆದ ಲಂಬಕ್ಕೂ ನಡುವಿನ ಕೋನ
angle of incidence

ಆಫ್‌ಸೆಟ್
(ತಂ) ೧. ಗೋಡೆ ಮೊದಲಾದವುಗಳಲ್ಲಿ ಮೇಲ್ಭಾಗದ ದಪ್ಪ ಕಡಿಮೆಯಾಗಲು ಆರಂಭ ಸ್ಥಳದಲ್ಲಿ ಮಾಡಿದ ಇಳಿಜಾರು ಅಂಚು. ೨. ನಾಳದ (ಕೊಳವೆಯ) ಮಾರ್ಗಕ್ಕೆ ಅಡ್ಡ ಬರುವ ತಡೆಯನ್ನು ದಾಟಿ ಹೋಗಲು ಅದರಲ್ಲಿ ಮಾಡಿದ ಬಾಗು
offset

ಆಫ್‌ಸೆಟ್ ಮುದ್ರಣ
(ತಂ) ರಬ್ಬರಿನ ಸಮತಲದ ಮೇಲೆ ಅಥವಾ ಉರುಳೆಯ ಮೇಲೆ ಚಿತ್ರವನ್ನೋ ನಕಾಸೆ ಯನ್ನೋ ಮೂಡಿಸಿ ತಕ್ಕಂತೆ ಒತ್ತಿ ಇದರ ಮೇಲೆ ರೂಪು ಗೊಂಡಂಥ ಚಿತ್ರ ಇತ್ಯಾದಿಗಳ ಪ್ರತಿಗಳನ್ನು ಅನಂತರ ಕಾಗದದ ಮೇಲೆ ಒತ್ತಿ ಪ್ರತಿ ಅಥವಾ ನಕಲು ತೆಗೆಯುವ ವಿಧಾನ
offset printing

ಆಮಶಂಕೆ
(ವೈ) ಕರುಳಿನ ಒಳಚರ್ಮವೂ ಅದರಲ್ಲಿಯ ಗ್ರಂಥಿಗಳೂ ಊತವೇರಿ ನುಲಿತು, ಆಮ ಮತ್ತು ರಕ್ತ ವಿಸರ್ಜನೆ ಯಾಗುವ ವ್ಯಾಧಿ. ಆಮಾತಿಸಾರ
dysentery

ಆಮೆ
(ಪ್ರಾ) ಕಿಲೋನಿಯ ಗಣ ಟೆಸ್ಟುಡಿನಿಡೀ ಕುಟುಂಬ, ಸರೀಸೃಪ ವಂಶಕ್ಕೆ ಸೇರಿದ ಉಭಯಚರಿ ಪ್ರಾಣಿ. ಟಾರ್ಟಿಸ್, ಟರ್‌ಟಲ್, ಟೆರ್ರಾಪಿನ್ ಪರ್ಯಾಯ ನಾಮಗಳು. ಟಾರ್ಟಿಸ್ ಭೂಚರ ಆಮೆ ಗಳಿಗೂ ಟರ್‌ಟಲ್ ಜಲಚರ ಆಮೆಗಳಿಗೂ ಅನ್ವಯ. ಆಮೆಗೆ ಹಲ್ಲಿಲ್ಲ. ಚೆನ್ನಾಗಿ ಬೆಳೆದ ಕಾಲುಗಳೂ ಮೂಳೆಯ ಹಲಗೆಗಳಿಂದ ನಿರ್ಮಿತವಾದ ಬೆನ್ನಿನ ಮತ್ತು ಹೊಟ್ಟೆಯ ಕಡೆ ಚಿಪ್ಪುಗಳೂ ದೊಡ್ಡದಾಗಿ ಅಲುಗಾಡದಂತೆ ಕುಳಿತ ಕ್ವಾಡ್ರೇಟ್ ಮೂಳೆಗಳೂ ಇವೆ. ಕೂರ್ಮ
tortoise

ಆಮ್ನಿಯೋಟ
(ಪ್ರಾ) ಗರ್ಭವೇಷ್ಟನದೊಳಗೆ ಭ್ರೂಣಾ ಭಿವರ್ಧನೆ ಆಗುವ ವ್ಯವಸ್ಥೆಯುಳ್ಳ ಉಚ್ಚ ಕಶೇರುಕಗಳು. ಉದಾ: ಸರೀಸೃಪಗಳು, ಪಕ್ಷಿಗಳು ಹಾಗೂ ಸ್ತನಿಗಳು
amniota

ಆಮ್ಮೀಟರ್
(ಭೌ) ವಿದ್ಯುನ್ಮಂಡಲದಲ್ಲಿಯ ಪ್ರವಾಹವನ್ನು ಅಳೆಯುವ ಸಾಧನ. ವಿದ್ಯುತ್‌ಪ್ರವಾಹ ಮಾಪಕ
ammeter


logo