(ತಂ) ಆಕ್ಸಿಜನ್ ಮತ್ತು ಅಸಿಟಿಲಿನ್ (C2H2) ಮಿಶ್ರಣದ ದಹನದಿಂದ ಬರುವ ಜ್ವಾಲೆ. ಉಷ್ಣತೆ ಸುಮಾರು ೩೩೦೦0 ಸೆ. ಲೋಹಗಳಿಗೆ ಬೆಸುಗೆ ಹಾಕಲು ಅಥವಾ ಅವನ್ನು ಕತ್ತರಿಸಲು ಬಳಕೆ
oxyacetylene flame
ಆಕ್ಸಿಕ್ರೊಮ್ಯಾಟಿನ್
(ಸ) ಗಾಢ ಕಲೆ ತೋರದ ಮತ್ತು ಕಡಿಮೆ ಪ್ರಮಾಣದಲ್ಲಿ ನ್ಯೂಕ್ಲಿಯಿಕ್ ಆಮ್ಲ ಇರುವ ಕ್ರೊಮ್ಯಾಟಿನ್‌ನ ಒಂದು ರೂಪ
oxychromatin
ಆಕ್ಸಿಕ್ಲೋರೈಡ್
(ರ) ClO ಗುಂಪು ಇರುವ ಸಂಯುಕ್ತಗಳ ಸಾಮಾನ್ಯ ಹೆಸರು. ಯಾವುದೇ ರ‍್ಯಾಡಿಕಲ್ ಅಥವಾ ಧಾತುವಿನೊಡನೆ ಆಕ್ಸಿಜನ್ ಮತ್ತು ಕ್ಲೋರೀನ್‌ಗಳೆರಡೂ ಸೇರಿ ಉತ್ಪತ್ತಿ ಮಾಡುವ ಸಂಯುಕ್ತ. ಉದಾ: ಕಾರ್ಬನ್ ಆಕ್ಸಿಕ್ಲೋರೈಡ್
oxychloride
ಆಕ್ಸಿಜನ್
(ರ) ರಾಸಾಯನಿಕ ಪ್ರತೀಕ O. ಆವರ್ತ ಕೋಷ್ಟಕದ ೬ನೇ ಗುಂಪಿಗೆ ಸೇರಿದ ನಿರ್ವರ್ಣ, ನಿರ್ಗಂಧ ಅಲೋಹ ಅನಿಲಧಾತು. ಪಸಂ ೮, ಸಾಪರಾ ೧೫.೯೯೯೪, ವೇಲೆನ್ಸಿ ೨, ದ್ರಬಿಂ -೨೧೮.೪0 ಸೆ. ಕುಬಿಂ -೧೮೩0 ಸೆ. ದಹನ ಕ್ರಿಯೆಗೆ ಬೆಂಬಲ ನೀಡುತ್ತದೆ. ಜೀವಿಜಾತಿಗಳ ಉಸಿರಾಟಕ್ಕೆ ಅತ್ಯವಶ್ಯ. ಸಮೃದ್ಧವಾಗಿ ಲಭಿಸುವ ಧಾತು. ಗಾತ್ರರೀತ್ಯ ವಾತಾವರಣದಲ್ಲಿ ಶೇ. ೨೧ರಷ್ಟು. ತೂಕ ರೀತ್ಯ ನೀರಿನಲ್ಲಿ ಶೇ. ೮೯ ಹಾಗೂ ಭೂಮಿಯ ಹೊರಚಿಪ್ಪಿನ ಬಂಡೆಗಳಲ್ಲಿ ತೂಕರೀತ್ಯ ಶೇ. ಸುಮಾರು ೫೦ರಷ್ಟು ಇದೆ. ದ್ರವ ವಾಯುವಿನಿಂದ ಉತ್ಪಾದನೆ. ಹೆಚ್ಚಿನ ಇತರ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಅವುಗಳ ಆಕ್ಸೈಡ್‌ಗಳನ್ನು ರೂಪಿಸುತ್ತದೆ. ಶಾಖ ಬೆಸುಗೆ ಜ್ವಾಲೆಗಳಲ್ಲಿ, ಉಕ್ಕಿನ ತಯಾರಿಕೆಯಲ್ಲಿ, ವೈದ್ಯಕೀಯ ಚಿಕಿತ್ಸೆಯಲ್ಲಿ ಹಾಗೂ ಅರಿವಳಿಕಗಳಲ್ಲಿ ಬಳಕೆ. ದ್ರವ ಆಕ್ಸಿಜನ್ ರಾಕೆಟ್ ಇಂಧನವಾಗಿ ಬಳಕೆ. ಪ್ರೀಸ್ಟ್ಲೆ ೧೭೭೪ರಲ್ಲಿ ಆವಿಷ್ಕರಿಸಿದುದು. ಆಮ್ಲ ಉಂಟುಮಾಡುವ ಅನಿಲಧಾತುವೆಂದು -ಆಮ್ಲಜನಕ ಎಂದು ಒಮ್ಮೆ (ತಪ್ಪಾಗಿ) ಭಾವಿಸಲಾಗಿತ್ತು. ಆಕ್ಸಿಜನ್ ಇಲ್ಲದ ಆಮ್ಲಗಳೂ ಉಂಟು - ಉದಾ: ಹೈಡ್ರೊಕ್ಲೋರಿಕ್ ಆಮ್ಲ ಮುಂತಾದ ಹೈಡ್ರಾಸಿಲ್‌ಗಳು. ಪ್ರಾಣವಾಯು
oxygen
ಆಕ್ಸಿಜನ್‌ಶೂನ್ಯ ಉಕ್ಕು
(ರ) ಎರಕ ಹೊಯ್ಯುವುದಕ್ಕೆ ಮುನ್ನ ಮ್ಯಾಂಗನೀಸ್, ಸಿಲಿಕಾನ್ ಮತ್ತು ಕೆಲವು ವೇಳೆ ಅಲ್ಯೂಮಿನಿಯಮ್ ಸೇರಿಸುವ ಮೂಲಕ ಸಂಪೂರ್ಣವಾಗಿ ಆಕ್ಸಿಜನ್ ಶೂನ್ಯಗೊಳಿಸಿದ ಉಕ್ಕು. ಘನೀಕರಣ ಸಮಯದಲ್ಲಿ ಕಾರ್ಬನ್ ಹಾಗೂ ಕಬ್ಬಿಣದ ಆಕ್ಸೈಡ್‌ಗಳ ನಡುವಿನ ಕ್ರಿಯೆಯಿಂದ ಅನಿಲ ಎಷ್ಟು ಮಾತ್ರವೂ ಉತ್ಪತ್ತಿಯಾಗುವುದಿಲ್ಲ. ಇದರಿಂದ ಸುಸ್ಥಿತಿಯ ಲೋಹದ ಗಟ್ಟಿ ದೊರೆಯುತ್ತದೆ
killed steel
ಆಕ್ಸಿಟೋಸಿನ್
(ವೈ) ಪಿಟ್ಯುಟರಿ ಗ್ರಂಥಿಯ ಹಿಂಬದಿ ಹಾಲೆಯಿಂದ ಸ್ರಾವವಾಗುವ ಎರಡು ಹಾರ್ಮೋನ್‌ಗಳ ಪೈಕಿ ಒಂದು. ಇದು ಪ್ರಸವ ಕಾಲದಲ್ಲಿ ಗರ್ಭಾಶಯದ ಸ್ನಾಯುಗಳನ್ನು ಸಂಕುಚಿಸಿ ಸುಲಭ ಪ್ರಸವಕ್ಕೆ ಕಾರಣವಾಗುತ್ತದೆ. ಅಲ್ಲದೆ ಸ್ತನ್ಯ ಸ್ರವನಕ್ಕೂ ನೆರವಾಗುತ್ತದೆ. ಪ್ರಸವೋತ್ಕರ್ಷಕ ಹಾರ್ಮೋನು
oxytocin
ಆಕ್ಸಿಟ್ರಾಪಿಸಮ್
(ಸ) ಆಕ್ಸಿಜನ್‌ಗೆ ಪ್ರತಿಕ್ರಿಯೆಯಾಗಿ ಸಸ್ಯವೊಂದು ಸಾಮಾನ್ಯವಾಗಿ ಆಕ್ಸಿಜನ್ನಿನ ದಿಶೆಯಲ್ಲಿ, ತನ್ನ ಬೆಳವಣಿಗೆಯನ್ನು ರೂಪಿಸಿಕೊಳ್ಳುವುದು
oxytropism
ಆಕ್ಸಿಡಂಟ್
(ರ) ಉತ್ಕರ್ಷಣ ಕ್ರಿಯೆಯಲ್ಲಿ ಆಕ್ಸಿಜನ್‌ಪೂರಕ ವಸ್ತು. ಸಾಮಾನ್ಯವಾಗಿ ದಹನ ಪ್ರಕ್ರಿಯೆಯಲ್ಲಿ ವಿಶೇಷವಾಗಿ ರಾಕೆಟ್ಟಿನಲ್ಲಿ, ಆಕ್ಸಿಜನ್ ಒದಗಿಸುವ ವಸ್ತು ಕುರಿತಂತೆ ಈ ಪದ ಬಳಕೆಯಲ್ಲಿದೆ. ರಾಕೆಟ್‌ಗಳಲ್ಲಿ ಬಳಸುವ ಆಕ್ಸಿಡಂಟ್ ಸಾಮಾನ್ಯವಾಗಿ ದ್ರವ ಆಕ್ಸಿಜನ್, ಹೈಡ್ರೊಜನ್ ಪರಾಕ್ಸೈಡ್ ಅಥವಾ ನೈಟ್ರಿಕ್ ಆಮ್ಲಗಳ ಮಿಶ್ರಣ. ಇದಕ್ಕೆ ಆಕ್ಸಿಡೀಕಾರಕ ಎಂಬ ಹೆಸರೂ ಉಂಟು
oxidant
ಆಕ್ಸಿಡೇಸ್
(ಜೀ) ಸಸ್ಯಗಳ ಹಾಗೂ ಪ್ರಾಣಿಗಳ ಜೀವಕೋಶ ಗಳಲ್ಲಿ ಕಾಣಬರುವ, ಉತ್ಕರ್ಷಣೆಗೆ ಉತ್ತೇಜನ ನೀಡುವ ಕಿಣ್ವಗಳ ಪೈಕಿ ಒಂದು
oxidase
ಆಕ್ಸಿನ್
(ಸ) ಸಸ್ಯ ಬೆಳವಣಿಗೆಯನ್ನು ಪ್ರೇರಿಸಬಲ್ಲ ಆರ್ಗ್ಯಾನಿಕ್ ಪದಾರ್ಥಗಳು. ಇವುಗಳಲ್ಲಿ ಕೆಲವು ಸಸ್ಯಗಳಲ್ಲೇ ನೈಸರ್ಗಿಕವಾಗಿ ಉತ್ಪಾದಿತವಾಗುತ್ತವೆ. ಇತರ ಕೆಲವನ್ನು ಮಾನವ ರಾಸಾಯನಿಕ ವಾಗಿ ತಯಾರಿಸುತ್ತಾನೆ. ಸಸ್ಯ ಹಾರ್ಮೋನ್