(ರ) ಎಥಿಲೀನ್ ಶ್ರೇಣಿಯ ಅಪರ್ಯಾಪ್ತ ಹೈಡ್ರೊಕಾರ್ಬನ್‌ಗಳ ಸಾರ್ವತ್ರಿಕ ನಾಮ. ಸಾರ್ವತ್ರಿಕ ಸೂತ್ರ CnH2n. ಓಲೆಫಿನ್
alkene
ಆಲ್ಕೇನ್
(ರ) ಮೀಥೇನ್ ಶ್ರೇಣಿಯ ಹೈಡ್ರೊಕಾರ್ಬನ್‌ಗಳ ಸಾರ್ವತ್ರಿಕ ನಾಮ. ರಾಸಾಯನಿಕವಾಗಿ ಜಡ, ಸ್ಥಿರ ಹಾಗೂ ಜ್ವಲನೀಯ. ಸರಣಿಯ ಮೊದಲ ನಾಲ್ಕು (ಮೀಥೇನ್, ಈಥೇನ್, ಪ್ರೊಪೇನ್, ಬ್ಯೂಟೇನ್) ಸಾಮಾನ್ಯ ಉಷ್ಣತೆಗಳಲ್ಲಿ ಅನಿಲಗಳು; ಮುಂದಿನ ಹನ್ನೊಂದು ದ್ರವರೂಪದವು (ಪ್ಯಾರಫಿನ್ ತೈಲದ ಮುಖ್ಯ ಘಟಕಗಳು); ಇನ್ನೂ ಮೇಲಿನವು ಘನ ಪದಾರ್ಥಗಳು (ಪ್ಯಾರಫಿನ್ ಮೇಣದಲ್ಲಿರುತ್ತವೆ). ಸಾರ್ವತ್ರಿಕ ಸೂತ್ರ CnH2n+2
alkane
ಆಲ್ಕೈನ್
(ರ) ತ್ರಿಬಂಧವಿರುವ ಅಸಿಟಲೀನ್ ಶ್ರೇಣಿಯ ಅಪರ್ಯಾಪ್ತ ಹೈಡ್ರೊಕಾರ್ಬನ್‌ಗಳ ಸಾರ್ವತ್ರಿಕ ನಾಮ. ಸಾರ್ವತ್ರಿಕ ಸೂತ್ರ CnH2n-2
alkyne
ಆಲ್ಗಾರಿತಮ್
(ಕಂ) ಸಮಸ್ಯಾ ಪರಿಹಾರ ಕುರಿತಂತೆ ಅನುಸರಿಸಬೇಕಾದ ಕ್ರಿಯಾನುಕ್ರಮ ಸೂಚಿಸುವ ನಿಯಮ ಸಂಹಿತೆ. ಒಂದೊಂದೂ ನಿಯಮ ನಿಷ್ಕೃಷ್ಟವಾಗಿ ಅಸಂದಿಗ್ಧವಾಗಿ ನಿರೂಪಿತ ವಾಗಿದ್ದು ಅದನ್ನು ಯಂತ್ರವೂ ನಿರ್ವಹಿಸಬಲ್ಲದು
algorithm
ಆಲ್ಜಿನಿಕ್ ಆಮ್ಲ
(ರ) (C6H8O6)n. ಶರ್ಕರ ಪಿಷ್ಟಾದಿಗಳಿಗೆ ಸಂಬಂಧಿಸಿದ ಸಂಕೀರ್ಣ ಸಂಯುಕ್ತ. ಕೆಲವು ಬಗೆಯ ಸಮುದ್ರ ಜೊಂಡುಗಳಲ್ಲಿ ಲಭ್ಯ
alginic acid
ಆಲ್ಟಿಮೀಟರ್
(ಖ) ನೋಡಿ : ಉನ್ನತಿಮಾಪಕ
altimeter
ಆಲ್ಟ್ರಿಸೆಸ್
(ಪ್ರಾ) ಮೊಟ್ಟೆಯೊಡೆದು ಹೊರಬಂದ ನಂತರ ತಾಯಿ ತಂದೆಯರ ಪೋಷಣೆ ಬೇಕಾಗುವ ಹಕ್ಕಿಗಳ ಮರಿಗಳು. ನೋಡಿ : ಪ್ರಿಕೋಸೆಸ್
altrices
ಆಲ್ಡಾಲ್
(ರ) ಅಸಿಟಾಲ್ಡಿಹೈಡ್‌ನ ಸಂಕಲನೋತ್ಪನ್ನ. ೨-ಹೈಡ್ರಾಕ್ಸಿ-ಬ್ಯೂಟನಾಲ್. H3C.CH(OH).CH2.CHO. ರಬ್ಬರ್‌ನ ವಲ್ಕನೀಕರಣದಲ್ಲಿ ಮತ್ತು ಪರಿಮಳ ದ್ರವ್ಯಗಳಲ್ಲಿ ಬಳಕೆ
aldol
ಆಲ್ಡಿಹೈಡ್
(ರ) --CHO ರ‍್ಯಾಡಿಕಲ್ ಇರುವ ಹೈಡ್ರೊಕಾರ್ಬನ್. ಉದಾ: ಅಸಿಟಾಲ್ಡಿಹೈಡ್
aldehyde
ಆಲ್ಡೋಸ್
(ರ) ಆಲ್ಡಿಹೈಡ್ ಗುಂಪನ್ನು ಒಳಗೊಂಡಿರುವ ಮಾನೊಸ್ಯಾಕರೈಡ್ (ಏಕಶರ್ಕರೀಯ), ಉದಾ: ಗ್ಲೂಕೋಸ್, ಗ್ಯಾಲಕ್ಟೋಸ್ ಇತ್ಯಾದಿ