logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆಮ್ಲೀಯತೆ
(ರ) ದ್ರಾವಣದಲ್ಲಿ ಹೈಡ್ರೊಜನ್ ಅಯಾನ್ ಮಟ್ಟ. (ವೈ) ಜಠರದಲ್ಲಿ ಆಮ್ಲದ ಆಧಿಕ್ಯ
acidity

ಆಯತ
(ಗ) ಪ್ರತಿಯೊಂದು ಕೋನವೂ ಲಂಬಕೋನ ವಾಗಿದ್ದು ಆಸನ್ನ ಭುಜಗಳು ಅಸಮವಾಗಿರುವ ಸಮತಲ ಚತುರ್ಭುಜ. ಈ ಚತುರ್ಭುಜ ದಲ್ಲಿ ಪ್ರತಿಯೊಂದು ಭುಜವೂ ಅದರ ಎದುರು ಭುಜಕ್ಕೆ ಸಮಾಂತರ ಮತ್ತು ಸಮವಾಗಿದ್ದು ಪ್ರತಿಯೊಂದು ಕೋನವೂ ೯೦0 ಆಗಿರುತ್ತದೆ. ಆಯ. ನೋಡಿ : ಚೌಕ. ಚತುರ್ಭುಜ
rectangle

ಆಯತ ಚಿತ್ರ
(ಸಂಕ) ಆಯತಗಳ ಮೂಲಕ ವಿತರಣ ಕ್ರಿಯೆಯನ್ನು ವ್ಯಕ್ತಪಡಿಸುವ ನಕ್ಷಾಚಿತ್ರ. ಸಾಲುಗೂಡಿದ ಆಯತ ಗಳಲ್ಲಿ ಒಂದೊಂದರ ಅಗಲ ಚಲ ಪರಿಮಾಣದ ವರ್ಗಾಂತರವನ್ನೂ ಒಂದೊಂದರ ವಿಸ್ತೀರ್ಣ ಆವೃತ್ತಿಯನ್ನೂ ವ್ಯಕ್ತಪಡಿಸುವಂತೆ ರಚಿಸಿದ ಆವೃತ್ತಿ ಹಂಚಿಕೆ ಚಿತ್ರ
histogram

ಆಯತವೃತ್ತ
(ಗ) ನೋಡಿ: ದೀರ್ಘವೃತ್ತ
ellipse

ಆಯತಾಗ್ರ
(ಜೀ, ಗ) ತುದಿಗಿಂತ ಬುಡ ಅಥವಾ ಸಂಧಿಸ್ಥಾನ ಕಿರಿದಾಗಿರುವ
obverse

ಆಯತಾಲೇಖ
(ಸಂಕ) ವಿವಿಧ ಮೌಲ್ಯಗಳ ಒಂದು ಗಣದಲ್ಲಿಯ ಆವೃತ್ತಿ ವಿತರಣೆಯನ್ನು ಸೂಚಿಸುವ ಆಯತಾಕಾರದ ಪಟ್ಟಿ. ಇದರಲ್ಲಿ ಗಣದ ಕನಿಷ್ಠ ಮತ್ತು ಗರಿಷ್ಠ ಮೌಲ್ಯಗಳ ಸಾಪೇಕ್ಷ ಸ್ಥಾನಗಳನ್ನೂ ಮಾಧ್ಯಕ ಹಾಗೂ ಚತುರ್ಥಕಗಳ ಸಾಪೇಕ್ಷ ಸ್ಥಾನಗಳನ್ನೂ ಗುರುತಿಸಲಾಗಿರುತ್ತದೆ
box plot

ಆಯಾಮ
(ಗ) ಯಾವುದೇ ನಿರ್ದಿಷ್ಟ ದಿಶೆಯಲ್ಲಿ ವಿಸ್ತರಣ ಸಾಧ್ಯತೆಯ ಸೂಚ್ಯಂಕ. ಚುಕ್ಕಿಗೆ ಇಂಥ ಸಾಧ್ಯತೆ ೦, ಸರಳರೇಖೆಗೆ ೧, ಸಮತಲಕ್ಕೆ ೨, ಘನಾಕೃತಿಗೆ ೩. ಎಂದೇ ಇವುಗಳ ಆಯಾಮಗಳು ಅನುಕ್ರಮವಾಗಿ ೦, ೧, ೨, ೩, ಮೂರರಿಂದ ಆಚೆಗೆ ಭೌತ ಆಯಾಮಗಳಿಲ್ಲ. ಕಾಲವನ್ನು ಸಾಧಾರಣವಾಗಿ ನಾಲ್ಕನೆಯ ಆಯಾಮವೆನ್ನುವುದುಂಟು
dimension

ಆಯಾಸ
(ವೈ) ಯಾವುದೇ ಒಂದು ದೈಹಿಕ ಅಥವಾ ಮಾನಸಿಕ ಚಟುವಟಿಕೆಯ ನಂತರ ಮತ್ತೆ ಮೊದಲಿನ ಪ್ರಮಾಣದಲ್ಲಿ ಚಟುವಟಿಕೆಯನ್ನು ಮಾಡಲಾಗದಂತಹ ಸ್ಥಿತಿ. ಈ ಸ್ಥಿತಿಯಲ್ಲಿ ನಿರುತ್ಸಾಹ, ಜೂಗರಿಕೆ, ಕಿರಿಕಿರಿಗಳು ಕಂಡುಬರಬಹುದು. ಬಳಕೆಯಾದ ಶಕ್ತಿ ಮತ್ತೆ ಕೂಡುವ ಮುನ್ನಿನ ಸ್ಥಿತಿ. ಉದಾ: ಕೆಲಸದ ನಂತರ ಸಾಕಷ್ಟು ಆಹಾರ, ನಿದ್ರೆಗಳು ದೊರೆಯುವುದಕ್ಕೂ ಮುನ್ನಿನ ಸ್ಥಿತಿ. ೨. ಸೂಕ್ತ ಪ್ರಚೋದನೆಯಿಲ್ಲದ ಕಾರಣ ಒಬ್ಬ ವ್ಯಕ್ತಿ ಅನುಭವಿಸಬಹುದಾದ ನಿರುತ್ಸಾಹದ, ಬೇಸರದ, ಏಕತಾನತೆಯ ಸ್ಥಿತಿ. ೩. ಆಯಾಸವು ಕೇವಲ ಒಂದು ಅಂಗಕ್ಕೆ ಮಾತ್ರ ಸೀಮಿತ ವಾಗಿರಬಹುದು. ಉದಾ: ಸತತವಾಗಿ ಕಣ್ಣೀರನ್ನು ಉತ್ಪಾದಿಸಿದ ನಂತರ ದಣಿದ ಅಶ್ರುಗ್ರಂಥಿ. (ತಂ) ಲೋಹಗಳು ಮತ್ತೆ ಮತ್ತೆ ಪೆಟ್ಟಿಗೆ ಸಿಕ್ಕಾಗ ಅದರಲ್ಲಿ ಉಂಟಾಗುವ ದೌರ್ಬಲ್ಯ. ಶ್ರಮಗೆಲಸ
fatigue

ಆಯುಧಶಾಲೆ
(ತಂ) ಪಿಸ್ತೂಲ್, ಬಂದೂಕ ಮೊದಲಾದ ಅಸ್ತ್ರಗಳನ್ನು ತಯಾರಿಸುವ ಸ್ಥಳ. ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡುವ ಸ್ಥಳ. ಆಯುಧಗಳ ಉಗ್ರಾಣ, ಶಸ್ತ್ರಾಗಾರ
armoury

ಆಯುರ್ನಿರೀಕ್ಷೆ
(ಸಂಕ) ದತ್ತಗುಂಪಿನ ಜೀವಿಗಳು ಯಾವುದೇ ವಯಸ್ಸು ತಲಪಿದ ಬಳಿಕ, ಮರಣ ಕೋಷ್ಟಕಾನುಸಾರ, ಬದುಕಿರಬಹುದಾದ ವರ್ಷಗಳ ಸರಾಸರಿ
expectation


logo