(ರ) ವಿರಳಾನಿಲಗಳ ಪೈಕಿ ಒಂದು; ಗೊತ್ತಿರುವ ಯಾವುದೇ ಸಂಯುಕ್ತವನ್ನು ರೂಪಿಸದ ಧಾತು; ಜಡಾನಿಲ; ar. ಪಸಂ ೧೮; ದ್ರಬಿಂ-೧೮೨.೨0 ಸೆ; ಕುಬಿಂ -೧೮೫.೭0 ಸೆ; ಸಾಂದ್ರತೆ ಶಿಷ್ಟ ಉಷ್ಣತೆ ಒತ್ತಡಗಳಲ್ಲಿ ೧.೭೮೩೭ g/dm3. ಗಾತ್ರ ರೀತ್ಯ ಆರ್ಗಾನ್ ವಾಯುಮಂಡಲದ ಸುಮಾರು ಶೇ. ೧ರಷ್ಟಿದೆ. ದ್ರವ ವಾಯುವಿನ ಆಂಶೀಕರಣದ ಮೂಲಕ ಪಡೆಯಲಾಗುತ್ತದೆ. ಅನಿಲ ತುಂಬಿದ ವಿದ್ಯುದ್ದೀಪಗಳಲ್ಲೂ ರೇಡಿಯೇಷನ್ ಕೌಂಟರ್‌ಗಳಲ್ಲೂ ಫ್ಲೂರಸೆಂಟ್ (ಪ್ರತಿದೀಪ್ತ) ನಳಿಗೆಗಳಲ್ಲೂ ಬಳಕೆ
argon
ಆರ್ಗ್ಯಾನಿಕ್
(ರ) ಕಾರ್ಬನ್ ಉಂಗುರ ಅಥವಾ ಸರಪಳಿಗಳ ಆಧಾರದ ಮೇಲೆ ರೂಪುಗೊಂಡ ಹಾಗೂ ಹೈಡ್ರೊಜನ್ನನ್ನು ಒಳಗೊಂಡ ರಾಸಾಯನಿಕ ಸಂಯುಕ್ತಗಳಿಗೆ ಸಂಬಂಧಿಸಿದ. ಇವುಗಳಲ್ಲಿ ಆಕ್ಸಿಜನ್, ನೈಟ್ರೊಜನ್ ಮತ್ತಿತರ ಧಾತುಗಳು ಇರಬಹುದು, ಇಲ್ಲದಿರಬಹುದು. ಕಾರ್ಬನ್ ಯುಕ್ತ. ಕಾರ್ಬನಿಕ, ಸಾವಯವ. ನೋಡಿ: ಇನಾರ್ಗ್ಯಾನಿಕ್
organic
ಆರ್ಗ್ಯಾನಿಕ್ ರಸಾಯನ ವಿಜ್ಞಾನ
(ರ) ಕಾರ್ಬನ್ ಉಂಗುರ ಅಥವಾ ಕಾರ್ಬನ್ ಸರಪಳಿಗಳ ಆಧಾರದ ಮೇಲೆ ರೂಪುಗೊಂಡ ಸಂಯುಕ್ತಗಳ ಅಥವಾ ಅವುಗಳ ಮಿಶ್ರಣಗಳ ರಾಸಾಯನಿಕ ರಚನೆ, ಕ್ರಿಯೆ ಹಾಗೂ ಗುಣಗಳನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗ. ಕಾರ್ಬನಿಕ ರಸಾಯನ ವಿಜ್ಞಾನ. ಕಾರ್ಬನಿಕ ಸಂಯುಕ್ತಗಳು ಇತರ ಧಾತುಗಳ ಸಂಯುಕ್ತ ಗಳಿಗಿಂತ ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದು ಜೈವಿಕ ಪದಾರ್ಥಗಳಿಗೆ ಆಧಾರವಾದ್ದರಿಂದ ಈ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ
organic chemistry
ಆರ್ಗ್ಯಾನಿಕ್ ಸಂಯುಕ್ತಗಳು
(ರ) ಕಾರ್ಬನ್ ಹೈಡ್ರೊಜನ್ನಿನೊಂದಿಗೆ ಮತ್ತು ಬಹುವೇಳೆ ಆಕ್ಸಿಜನ್, ನೈಟ್ರೊಜನ್ ಮತ್ತಿತರ ಧಾತುಗಳೊಂದಿಗೂ ಸಂಯೋಜನೆಗೊಂಡು ರೂಪಿತವಾದ ರಾಸಾಯನಿಕ ಸಂಯುಕ್ತಗಳು. ಇವುಗಳ ಅಣುಗಳು ಬಹುವೇಳೆ ತುಂಬ ಸಂಕೀರ್ಣವಾಗಿರುತ್ತವೆ, ಅಧಿಕ ಸಂಖ್ಯೆಯ ಪರಮಾಣುಗಳಿಂದ ಕೂಡಿರುತ್ತವೆ. ಇವು ದ್ರಾವಣದಲ್ಲಿ ಸಾಮಾನ್ಯವಾಗಿ ಅಯಾನೀಕರಣಗೊಳ್ಳುವುದಿಲ್ಲ ಮತ್ತು ಬಹುವೇಳೆ ಸಮಾಂಗತಾ ವಿದ್ಯಮಾನ ಪ್ರದರ್ಶಿಸುತ್ತವೆ. ಜೀವಂತ ವಸ್ತುಗಳ ಮೂಲಾಧಾರಗಳಿವು
organic compounds
ಆರ್ಗ್ಯುಮೆಂಟ್
(ಕಂ) ಕ್ರಮವಿಧಿಯೊಂದಕ್ಕೆ ಸಲ್ಲಿಸಿದ ಪ್ರದಾನ (ಇನ್‌ಪುಟ್) ಪ್ರಾಚಲ (ಪ್ಯಾರಾಮೀಟರ್)
argument
ಆರ್ಜಿತ ಕವಾಟ ಬೇನೆಗಳು
(ವೈ) ವಯಸ್ಸಾಗುತ್ತಿರುವ ಹಾಗೆ ಹೃದಯ ಕವಾಟಗಳಲ್ಲಿ ತಲೆದೋರುವ ಕವಾಟ ರೋಗಗಳು. ಉದಾಹರಣೆಗೆ, ರೋಗಕ್ರಿಮಿಗಳ ದಾಳಿಗೆ ತುತ್ತಾಗಿ ಕವಾಟಗಳು ಹಾಳಾಗಬಹುದು ಇಲ್ಲವೇ ಕ್ಯಾಲ್ಸಿಯಂ ಅಂಶ ಹೆಚ್ಚು ಸಂಗ್ರಹವಾಗಿ ಕವಾಟ ಪೆಡಸಾಗಬಹುದು
acquired valve diseases
ಆರ್ಜಿತ ರಕ್ಷೆ
(ವೈ) ದೇಹವನ್ನು ಪರ ಪದಾರ್ಥಗಳಿಗೆ/ಸೂಕ್ಷ್ಮಜೀವಿಗಳಿಗೆ ಒಡ್ಡುವುದರಿಂದ ಒದಗುವ ರಕ್ಷೆ; ಹುಟ್ಟಿನಿಂದ ಬರುವ ನೈಸರ್ಗಿಕ ರಕ್ಷೆಯಿಂದ ಭಿನ್ನವಾದದ್ದು. ಆರ್ಜಿತ ಪ್ರತಿರಕ್ಷೆ
acquired immunity
ಆರ್ಜಿತ ಲಕ್ಷಣ
(ಪ್ರಾ) ಪ್ರಾಣಿಯ ಜೀವಿತಾವಧಿಯಲ್ಲಿ ಅಂಗವೊಂದರ ಉಪಯೋಗ/ಅನುಪಯೋಗ ದಿಂದ ಆ ಅಂಗದಲ್ಲಿ ಕಂಡುಬರುವ ಬದಲಾವಣೆ. ಆನುವಂಶಿಕವಲ್ಲ
acquired character
ಆರ್ಜಿತ ವರ್ತನೆ
(ತ) ಪರಿಸರ ವ್ಯತ್ಯಾಸ ಗಳಿಗೆ ಹೊಂದಿಕೊಳ್ಳಲು ಜೀವಿಯ ಚರ್ಯೆ/ವರ್ತನೆ
acquired behaviour
ಆರ್ಜಿನೀನ್
(ರ) ಒಂದು ಅಗತ್ಯ ಅಮೀನೋ ಆಮ್ಲ; arg ೨-ಅಮೀನೊ-೫ಗ್ವಾನಿಡೋ ಪೆಂಟಾನೋಯಿಕ್ ಆಮ್ಲದ