(ಭೂವಿ) ಜರ್ಮೇನಿಯಮ್ ಮತ್ತು ಬೆಳ್ಳಿಯ ದ್ವಿ-ಸಲ್ಫೈಡ್; ಜರ್ಮೇನಿಯಮ್ ಧಾತುವನ್ನು ಮೊತ್ತ ಮೊದಲು ಈ ಖನಿಜದಲ್ಲಿ ಆವಿಷ್ಕರಿಸಲಾಯಿತು. Ag8 GeS6
argyrodite
ಆರ್ಜೆಂಟೈಟ್
(ಭೂವಿ) ಬೆಳ್ಳಿಯ ಪ್ರಮುಖ ಅದಿರು. Ag2S. ಘನ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ
argentite
ಆರ್ಟ್ ಕಾಗದ
(ತಂ) ಕಾಗದದ ಒಂದು/ಎರಡು ಪಾರ್ಶ್ವಗಳಿಗೆ ಚೈನಾ ಮಣ್ಣಿನಂಥ ಖನಿಜ ಪದಾರ್ಥದ ಅಂಟು ದ್ರಾವಣವನ್ನು ಹಲವಾರು ಸಲ ಸವರಿ ತಯಾರಿಸಿದ, ಉನ್ನತ ದರ್ಜೆಯ ಅತ್ಯುತ್ತಮವಾದ ನುಣುಪು, ಹೊಳಪಿನ ಕಾಗದ. ಇದನ್ನು ಸಾಮಾನ್ಯವಾಗಿ ಅತ್ಯಾಕರ್ಷಕವಾದ ವರ್ಣಚಿತ್ರ ಮುದ್ರಣದಲ್ಲಿ ಬಳಸಲಾಗುತ್ತದೆ
art paper
ಆರ್ಡೊಮೀಟರ್
(ಭೌ) ಅತ್ಯುಚ್ಚ ಉಷ್ಣತೆಗೆ ಕಾಸಿದ ವಸ್ತುವೊಂದು ಹೊರಹೊಮ್ಮಿಸುವ ಬೆಳಕಿನ ನೆರವಿನಿಂದ ಆ ವಸ್ತುವಿನ ಉಷ್ಣತೆಯನ್ನು ಅಳೆಯುವ ಸಲಕರಣೆ
ardometer
ಆರ್ತವಜನಕ
(ವೈ) ರಜಸ್ಸ್ರಾವವನ್ನು ಪ್ರೇರಿಸುವ ಇಲ್ಲವೇ ವರ್ಧಿಸುವ ಔಷಧಿ
emmanagogue
ಆರ್ತಾಲಜಿ
(ಸಾ) ಪದಗಳ ವಿವಿಧ ಮಿತಿಗಳನ್ನೂ ಅವುಗಳ ಸರಿಯಾದ ಬಳಕೆಯ ವಿಧಾನವನ್ನೂ ಸ್ಪಷ್ಟಗೊಳಿಸುವ ಉದ್ದೇಶ ದಿಂದ ಭಾಷಾ ಬಳಕೆಯನ್ನು ಕ್ರಮಬದ್ಧವಾಗಿ ಪರಿಶೀಲಿಸುವ ಶಾಸ್ತ್ರ
orthology
ಆರ್ತೊಕ್ಲಾಸ್ಟಿಕ್
(ಭೂವಿ) ಪರಸ್ಪರ ಲಂಬವಾಗಿರುವ ಸೀಳುಗಳಾಗಿ ಎರಡು ದಿಶೆಗಳಲ್ಲಿ ಸುಲಭವಾಗಿ ಒಡೆಯುವಂಥ ಲಕ್ಷಣವುಳ್ಳ (ಸ್ಫಟಿಕ)
orthoclastic
ಆರ್ತೊಕ್ಲೇಸ್
(ಭೂವಿ) ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ಪೊಟ್ಯಾಸಿಯಮ್ ಹಾಗೂ ಅಲ್ಯೂಮಿನಿಯಮ್‌ಗಳ ಸಿಲಿಕೇಟ್. ಗ್ರಾನೈಟ್ ಹಾಗೂ ಸಯನೈಟ್ ಶಿಲೆಗಳಲ್ಲಿ ಸಾರಭೂತ ಘಟಕವಾಗಿಯೂ ಇತರ ಅನೇಕ ಶಿಲಾ ಮಾದರಿಗಳಲ್ಲಿ ಉಪಘಟಕ ವಾಗಿಯೂ ಕಾಣಬರುತ್ತದೆ. ಪ್ರತೀಕ KAlSi3O8
orthoclase
ಆರ್ತೊಗ್ನಾತಸ್
(ಪ್ರಾ) ೧. ನಿಗುರು ದವಡೆ ಗಳುಳ್ಳ. ೨. ತಲೆಯ ನೀಳಾಕ್ಷ ಶರೀರದ ಅಕ್ಷಕ್ಕೆ ಲಂಬವಾಗಿ ಇರುವುದು ಮತ್ತು ಬಾಯಿ ಅಧೋಮುಖವಾಗಿರುವುದು. ಮುಖದ ತಳಭಾಗಗಳು ಮುಂಚಾಚಿಕೊಂಡಿಲ್ಲದಿರುವುದು
orthognathous
ಆರ್ತೊನೈಸ್
(ಭೂವಿ) ಅಗ್ನಿಶಿಲೆಯ ಮೂಲದಿಂದ ಬಂದ ಮತ್ತು ಕ್ವಾರ್ಟ್ಸ್, ಫೆಲ್ಡ್‌ಸ್ಪಾರ್ ಮತ್ತು ಅಭ್ರಕಗಳಿಂದ ಕೂಡಿದ ಒಂದು ಬಗೆಯ ಪದರ ಪದರಾದ ರೂಪಾಂತರಿತ ಶಿಲೆ (ನೈಸ್ ಶಿಲೆ)