logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆಮ್ಲ
(ರ) ಸಾಮಾನ್ಯವಾಗಿ ಇದು ೧. ನೀರಿನಲ್ಲಿ ವಿಲೀನವಾಗಿ ಹೈಡ್ರೊಜನ್ ಅಯಾನುಗಳನ್ನು ಉತ್ಪಾದಿಸುತ್ತದೆ. ೨. ಲೋಹ ಗಳನ್ನು ವಿಲೀನಿಸಿ ಹೈಡ್ರೊಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ ಅಥವಾ ೩. ಪ್ರತ್ಯಾಮ್ಲದ ಜೊತೆ ವರ್ತಿಸಿ ಲವಣವನ್ನು ಕೊಡುತ್ತದೆ; ಸರ್ವಸಾಮಾನ್ಯವಾಗಿ, ಪ್ರೋಟಾನನ್ನು ಕಳೆದು ಕೊಳ್ಳುವ ಅಥವಾ ಎಲೆಕ್ಟ್ರಾನ್ ಜೋಡಿಯನ್ನು ಸ್ವೀಕರಿಸುವ ಪ್ರವೃತ್ತಿ ಪ್ರದರ್ಶಿಸುತ್ತದೆ
acid

ಆಮ್ಲ ಅನ್‌ಹೈಡ್ರೈಡ್
(ರ) ಆಮ್ಲದ ಅಣುವಿನಿಂದ/ಅಣುಗಳಿಂದ ನೀರಿನ ಅಣುವನ್ನು ರಾಸಾಯನಿಕವಾಗಿ ಪ್ರತ್ಯೇಕಿಸಿದಾಗ ದೊರೆಯುವ ಸಂಯುಕ್ತ. ಇದು ನೀರಿನೊಂದಿಗೆ ವರ್ತಿಸಿ ಆಮ್ಲ ಉಂಟುಮಾಡುತ್ತದೆ. ಉದಾ: ಕಾರ್ಬನ್ ಡೈಆಕ್ಸೈಡ್ ನೀರಿನೊಂದಿಗೆ ವರ್ತಿಸಿ ಕಾರ್ಬಾನಿಕ್ ಆಮ್ಲ ಉಂಟುಮಾಡುತ್ತದೆ. CO2+H2OO H2CO3
acid anhydride

ಆಮ್ಲ ನಿಕ್ಷೇಪನ
(ಪವಿ) ಆಮ್ಲ ಮಳೆಯಿಂದ ಭೂಮಿಯ ಮೇಲೆ ಶೇಖರವಾಗುವ ಆಮ್ಲ. ಹಿಮಪಾತ ದಿಂದಲೂ ನಿಕ್ಷೇಪಗೊಳ್ಳುತ್ತದೆ. ಗಂಧಕ, ಕಲ್ಲಿದ್ದಲು, ತೈಲಗಳ ದಹನದಿಂದ ಗಂಧಕದ ಡೈಆಕ್ಸೈಡ್ ಮತ್ತು ನೈಟ್ರೊಜನ್ ಡೈ ಆಕ್ಸೈಡ್‌ಗಳು ಅಧಿಕ ಪ್ರಮಾಣದಲ್ಲಿ ವಾತಾವರಣ ಸೇರುವು ದರಿಂದ ಆಮ್ಲ ಶೇಖರವಾಗುತ್ತದೆ. ನೀರಾವಿ ವರ್ತಿಸಿ ಗಂಧಕ ಮತ್ತು ನೈಟ್ರಿಕ್ ಆಮ್ಲಗಳು ಉತ್ಪಾದನೆಯಾಗಿ ಭೂಮಿಯ ಮೇಲೆ ಮತ್ತು ಮರಗಳ ಮೇಲೂ ಮಳೆಯಾಗಿ ಬೀಳುತ್ತದೆ. ಇದು ಸರೋವರದ ಜಲಚರಗಳಿಗೆ ಅತ್ಯಂತ ಮಾರಕ
acid deposition

ಆಮ್ಲ ಮಾಪನ
(ರ) ದತ್ತ ದ್ರಾವಣದಲ್ಲಿರುವ ಆಮ್ಲಾಂಶವನ್ನು ನಿರ್ಧರಿಸಲು ಅದನ್ನು ಶಿಷ್ಟ ಕ್ಷಾರ ದ್ರಾವಣದ ಜೊತೆ ಅನುಮಾಪನ (ಟೈಟ್ರೀಕರಣ) ಮಾಡುವುದು
acidimetry

ಆಮ್ಲಮೌಲ್ಯ
(ರ) ಸಸ್ಯಮೂಲ (ವನಸ್ಪತಿ) ತೈಲ, ರಾಳ ಮುಂತಾದವುಗಳಲ್ಲಿ ಆಮ್ಲ ಎಷ್ಟಿದೆ ಎಂಬುದರ ಅಳತೆ. ಇಂಥ ಒಂದು ಆಮ್ಲದ ೧ ಗ್ರಾಮ್‌ಅನ್ನು ತಟಸ್ಥೀಕರಿಸಲು ಎಷ್ಟು ಮಿಲಿಗ್ರಾಮ್ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ (koh) ಅವಶ್ಯ ಎಂಬುದರಿಂದ ಸೂಚಿತ
acid value

ಆಮ್ಲರಸ
(ವೈ) ನಾವು ಸೇವಿಸುವ ಆಹಾರವನ್ನು ಜಠರದ ಸ್ನಾಯುಗಳು, ಜಠರಾಮ್ಲದ ನೆರವಿನಿಂದ ಚೆನ್ನಾಗಿ ಕಿವಿಚಿ ಆಮ್ಲ ರಸವನ್ನು ರೂಪಿಸುತ್ತವೆ. ಈ ರಸ ಜಠರದಿಂದ ಸಣ್ಣ ಕರುಳಿನ ಮೊದಲನೆಯ ಭಾಗವಾದ ದ್ವಾದಶಾಂತ್ರ (ಡುಯೋಡಿನಂ)ವನ್ನು ಪ್ರವೇಶಿಸುತ್ತದೆ. ಅನ್ನರಸ, ಆಮ್ಲಪಿಷ್ಟ
chyme

ಆಮ್ಲರೋಧಕಗಳು
(ರ) ಅಗ್ನಿಮಾಂದ್ಯ ಚಿಕಿತ್ಸೆಯಲ್ಲಿ ಬಳಸುವ ಸಂಯುಕ್ತಗಳು. ಮೆಗ್ನೀಸಿಯಮ್ ಟ್ರೈಸಿಲಿಕೇಟ್ ಹಾಗೂ ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್ ಹೆಚ್ಚು ಬಳಕೆಯಲ್ಲಿವೆ.
antacids

ಆಮ್ಲ ಲವಣ
(ರ) ಆಮ್ಲದಲ್ಲಿ ಪ್ರತಿಸ್ಥಾಪಿಸಬಹುದಾದ ಹೈಡ್ರೊಜನ್‌ಅನ್ನು ಭಾಗಶಃ ಪ್ರತಿಸ್ಥಾಪಿಸಿದಾಗ ದೊರೆಯುವ ಲವಣ. ಉದಾ: ಕಾರ್ಬಾನಿಕ್ ಆಮ್ಲ H2CO3ರಲ್ಲಿ ಒಂದು ಹೈಡ್ರೊಜನ್ ಪರಮಾಣುವನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ ಒಂದು ಸೋಡಿಯಮ್ ಪರಮಾಣುವನ್ನು ಸೇರಿಸಿದಾಗ ದೊರೆ ಯುವ ಸೋಡಿಯಮ್ ಹೈಡ್ರೊಜನ್ ಕಾರ್ಬನೇಟ್ NaHCO3
acid salt

ಆಮ್ಲವೃಷ್ಟಿ
(ಪ) ಅಸಹಜವಾದ ಆಮ್ಲತೆಯಿಂದ (pH ೩ರಿಂದ ೫.೫) ಕೂಡಿರುವ ಮಳೆ. ಕಲ್ಲಿದ್ದಲನ್ನೂ ತೈಲವನ್ನೂ ಅತಿಯಾಗಿ ಉರಿಸುವುದರಿಂದ ವಾಯುಮಂಡಲಕ್ಕೆ ಅಧಿಕ ಪ್ರಮಾಣದಲ್ಲಿ ಸೇರುವ ನೈಟ್ರೊಜನ್ನಿನ ಹಾಗೂ ಸಲ್ಫರ್‌ನ ಆಕ್ಸೈಡ್‌ಗಳು ಮಳೆ ನೀರಿನೊಡನೆ ವರ್ತಿಸುವುದರ ಪರಿಣಾಮ
acid rain

ಆಮ್ಲಶಿಲೆ
(ಭೂವಿ) ಶೇಕಡಾ ೧೦ಕ್ಕಿಂತ ಅಧಿಕ ಕ್ವಾರ್ಟ್ಸ್ ಇರುವ ಅಗ್ನಿಶಿಲೆ
acid rock


logo