(ರ) ಫೀನೈಲ್ ಮೀಥೈಲ್ ಈಥರ್; ಪ್ರತೀಕ C6H5.O.CH3. ನಿರ್ವರ್ಣ ದ್ರವ. ಕುಬಿಂ ೧೫೫0 ಸೆ, ಸುಗಂಧ ತಯಾರಿಕೆಯಲ್ಲಿ ಬಳಕೆ. ಇದೊಂದು ಜಂತುನಾಶಕ
anisole
ಆನುವಂಶಿಕ ತಪಾಸಣೆ
(ಜೀ) ಗಂಡು- ಹೆಣ್ಣುಗಳಲ್ಲಿ ರಕ್ತ ಪರೀಕ್ಷೆ, ಊತಕ ಕೃಷಿ ಇತ್ಯಾದಿ ವಿಧಾನಗಳಿಂದ ಆನುವಂಶೀಯ ಕಾಯಿಲೆಗಳನ್ನು ಪರೀಕ್ಷಿಸುವ ಕ್ರಮ. ಇದರಿಂದ ಅಪ್ರಭಾವಿ ಜೀನ್‌ಅನ್ನು ಉದಾ: ಆಫ್ರಿಕ ಜನಾಂಗಗಳಲ್ಲಿ ವ್ಯಾಪಕ ವಾಗಿ ಕಂಡುಬರುವ ಸಿಕಲ್-ಸೆಲ್ ಅನೀಮಿಯಗೆ ಕಾರಣವಾದ ಜೀನ್‌ಅನ್ನು, ಪತ್ತೆ ಹಚ್ಚಬಹುದು
genetic screening
ಆನುವಂಶಿಕತೆ
(ವೈ) ಸ್ವಭಾವ ಮತ್ತು ಶಾರೀರಿಕ ಲಕ್ಷಣಗಳು ತಂದೆ ತಾಯಿಯರಿಂದ ಮುಂದಿನ ಸಂತತಿಗೆ ಸಾಗುವ ಗುಣ. ಪ್ರಾಣಿಯಲ್ಲಿ, ಸಸ್ಯದಲ್ಲಿ ಆನುವಂಶಿಕವಾಗಿ ಬಂದ ಗುಣಲಕ್ಷಣಗಳು
heredity
ಆನುವಂಶಿಕ ಪರಿವರ್ತನೆ
(ಜೀ) ಒಂದು ಬ್ಯಾಕ್ಟೀರಿಯ/ಜೀವಕೋಶದ ಡಿಎನ್‌ಎ ತುಣುಕು ಮತ್ತೊಂದು ಬ್ಯಾಕ್ಟೀರಿಯ / ಜೀವಕೋಶದೊಳಕ್ಕೆ ಸೇರಿ ಆನುವಂಶಿಕವಾಗಿ ಜೀವಿ ಅಥವಾ ಕೋಶದಲ್ಲಿ ಪರಿವರ್ತನೆ ಉಂಟುಮಾಡುವುದು
genetic transformation
ಆನುವಂಶಿಕ ವರ್ಗಾವಣೆ
(ಜೀ) ಒಂದು ಬ್ಯಾಕ್ಟೀರಿಯದ ಆನುವಂಶಿಕ ಗುಣಗಳನ್ನು ಬ್ಯಾಕ್ಟೀರಿಯೋ ಫೇಜ್ ಎಂಬ ವೈರಸ್‌ಗಳು ಮತ್ತೊಂದು ಬ್ಯಾಕ್ಟೀರಿಯಾಗೆ ವರ್ಗಾಯಿಸುವ ವಿಧಾನ. ಈ ವಿಧಾನದಲ್ಲಿ ಬ್ಯಾಕ್ಟೀರಿಯೋ ಫೇಜ್‌ಗಳು ಮಧ್ಯವರ್ತಿಗಳಂತೆ ಅಥವಾ ವಾಹಕಗಳಂತೆ ಕಾರ್ಯನಿರ್ವಹಿಸುತ್ತವೆ
genetic transduction
ಆನುವಂಶಿಕ ಸಲಹೆ
(ಜೀ) ತಲೆಮಾರುಗಳ ಆನುವಂಶಿಕ ನ್ಯೂನತೆಗಳ ವಿಶ್ಲೇಷಣೆಯಿಂದ ಮುಂಬರುವ ಪೀಳಿಗೆಗಳಲ್ಲಿ ಅಂತಹ ನ್ಯೂನತೆಗಳು ತಲೆದೋರದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುವುದು
genetic counselling
ಆನುಷಂಗಿಕ
(ಸಾ) ಅನುಭವ ನಿಂತ ಅನಂತರವೂ ಗೋಚರವಾಗುತ್ತಿರುವಂತೆ ಭಾಸವಾಗುವ ಗೌಣ ಭಾವನೆ. ಅಕಸ್ಮಾತ್ತಾಗಿ ಸಂಭವಿಸುವ ಅನುದ್ದಿಷ್ಟ ಘಟನೆ. ಅನುಗತ
incidental
ಆನೆ
(ಪ್ರಾ) ಎಲಿಫಿಂಟಿಡೀ ಕುಟುಂಬಕ್ಕೆ ಸೇರಿದ ಸಾಮಾನ್ಯವಾಗಿ ೯ ಅಡಿ ಎತ್ತರದ ೪ ಟನ್ ತೂಗುವ ಚತುಷ್ಪಾದಿ ಸ್ತನಿ. ಮೂಗು ಮತ್ತು ಮೇಲ್ದುಟಿ ಸೇರಿ ಸೊಂಡಿಲಾಗಿ ಮಾರ್ಪಟ್ಟಿರುತ್ತದೆ. ಭಾರತೀಯ ಆನೆಗಳಲ್ಲಿ ಹಣೆಯ ಬಳಿ ಹಳ್ಳ ಇರುತ್ತದೆ. ಆಫ್ರಿಕದ ಆನೆಗಳಲ್ಲಿ ಹಣೆ ಉಬ್ಬಾಗಿದ್ದು ಕಿವಿಗಳು ಅಗಲವಾಗಿರುತ್ತವೆ. ಅಲ್ಲದೆ ಅವುಗಳಲ್ಲಿ ಹೆಣ್ಣು ಮತ್ತು ಗಂಡು ಎರಡಕ್ಕೂ ದಂತ ಇರುತ್ತದೆ
elephant
ಆನೆಕಾಲು ರೋಗ
(ವೈ) ಸೊಳ್ಳೆಯ ಕಡಿತದ ಮೂಲಕ ವೊಚೆರಿಯ ಬ್ಯಾನ್ಕ್ರಾಫ್ಟೈ ಅಥವಾ ಬ್ರೂಗಿಯ ಮಲಾಯಿ ಎಂಬ ಜಂತುಗಳು (ಸಣ್ಣ ಕ್ರಿಮಿಗಳು) ಮಾನವನ ಒಡಲನ್ನು ಪ್ರವೇಶಿಸಿ ದುಗ್ಧನಾಳಗಳಲ್ಲಿ ರಕ್ತ ಮತ್ತು ದುಗ್ಧರಸ ಚಲನೆಗೆ ಅಡಚಣೆಯನ್ನುಂಟುಮಾಡಿದಾಗ ಅಡಚಣೆಯುಂಟಾದ ಭಾಗವು ಊದಿಕೊಂಡು ಆನೆಯ ಕಾಲಿನ ಹಾಗೆ ದಪ್ಪವಾಗಿ, ಚರ್ಮ ಒರಟಾಗುವ ರೋಗ
elephantiasis
ಆನೋಡ್
(ಭೌ) ಧನ ಎಲೆಕ್ಟ್ರೋಡ್, ವಿದ್ಯುದ್ವಿಭಜನೆಯಲ್ಲಿ ಆನಯಾನ್‌ಗಳು ಇದರತ್ತ ಆಕರ್ಷಿತವಾಗುತ್ತವೆ. ಧನ ವಿದ್ಯುದ್ದ್ವಾರ