(ಸಾ) ಗ್ರೀಕ್ ವರ್ಣಮಾಲೆಯ ಮೊದಲನೆಯ ಅಕ್ಷರ (a). ಆಂಗ್ಲ ವರ್ಣಮಾಲೆಯ aಗೆ ಸಮನಾದುದು (ಖ) ಯಾವು ದಾದರೂ ನಕ್ಷತ್ರ ಪುಂಜದ ಮುಖ್ಯ ನಕ್ಷತ್ರ
alpha
ಆಲ್ಫ ಕಣ
(ಭೌ) ಹೀಲಿಯಮ್ ಪರಮಾಣು (ರಾಶಿ ಸಂಖ್ಯೆ ೪)ವಿನ ಬೀಜ; ಎರಡು ಪ್ರೋಟಾನ್ ಮತ್ತು
alpha particle
ಆಲ್ಫ ಕಿರಣಗಳು
(ಭೌ) ಆಲ್ಫ ಕಣಗಳ ಪ್ರವಾಹ. ತಾವು ಸಾಗುವ ಅನಿಲಗಳಲ್ಲಿ ಇವು ತೀವ್ರ ಅಯಾನೀಕರಣ ಉಂಟು ಮಾಡುತ್ತವೆ. ದ್ರವ್ಯದಿಂದ ಸುಲಭವಾಗಿ ಹೀರಲ್ಪಡುತ್ತವೆ ಮತ್ತು ಪ್ರತಿದೀಪ್ತ ತೆರೆಯ ಮೇಲೆ ಪ್ರತಿದೀಪ್ತಿ ಉಂಟುಮಾಡುತ್ತವೆ
alpha rays
ಆಲ್ಫ ಕ್ಷಯ
(ಭೌ) ವಿಕಿರಣಪಟು ವಿಘಟನೆಯ ಒಂದು ರೂಪ. ಇದರ ಫಲವಾಗಿ ನ್ಯೂಕ್ಲಿಯಸ್‌ನಿಂದ ಆಲ್ಫ ಕಣದ ಉತ್ಸರ್ಜನೆ ತಂತಾನೆ ಆಗುತ್ತದೆ
alpha decay
ಆಲ್ಫ ತರಂಗ
(ವೈ) ಮಾನವ ಮಿದುಳಿನಿಂದ ಉತ್ಪಾದನೆಗೊಂಡು ವಿದ್ಯುನ್ಮಸ್ತಿಷ್ಕ ಲೇಖವಾಗಿ (ನೋಡಿ: ಇಇಜಿ) ದಾಖಲಾಗುವ ತರಂಗ. ಇದು ಸುಮಾರು ೧೦ HZ ಆವೃತ್ತಿಯ ಪ್ರಧಾನ ನಿಧಾನ ತರಂಗವಾಗಿರುತ್ತದೆ
alpha wave
ಆಲ್ಫ ಲಯ
(ವೈ) ಎಚ್ಚರವಾಗಿದ್ದರೂ ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿರದ ವ್ಯಕ್ತಿಯಿಂದ ಪಡೆದ ಸುಮಾರು ೧೦ ಆವೃತ್ತಿಯ ನಿಯತ ವಿದ್ಯುನ್ಮಸ್ತಿಷ್ಕಲೇಖ (ನೋಡಿ : ಇಇಜಿ) ನಮೂನೆ. ನಿದ್ರೆ, ಚಿತ್ತೈಕಾಗ್ರತೆಗಳಂಥ ಮಾನಸಿಕ ಕ್ರಿಯೆಗಳು ಈ ನಮೂನೆಯನ್ನು ಭಂಗಗೊಳಿಸುತ್ತವೆ
alpha rhythm
ಆಲ್ಫಾಲ್ಫ
(ಸ) ಲೆಗ್ಯೂಮಿನೋಸೀ ಕುಟುಂಬ, ಪಾಪಿಲಿ ಯೊನೇಸೀ ವಿಭಾಗಕ್ಕೆ ಸೇರಿದ ಗಿಡ. ದನ, ಕುದುರೆಗಳ ಮೇವಿಗಾಗಿ ಹುಲ್ಲುಗಾವಲುಗಳಲ್ಲಿ ಬೆಳೆಸುತ್ತಾರೆ. ಲೂಸರ್ನ್. ಕುದುರೆ ಮಸಾಲೆ ಸೊಪ್ಪು
alfalfa
ಆಲ್ಬಟ್ರಾಸ್
(ಪ್ರಾ) ಡಯೊಮಿಡೈಡೀ ಕುಟುಂಬಕ್ಕೆ ಸೇರಿದ ಜಾಲಪಾದಿ ಬೃಹತ್ ಸಮುದ್ರ ಪಕ್ಷಿ. ಪೆಟ್ರಲ್‌ನ ಸಮೀಪ ಸಂಬಂಧಿ. ಈ ಕುಟುಂಬದಲ್ಲಿ ೧೩ ಪ್ರಭೇದಗಳಿವೆ. ದೊಡ್ಡ ತಲೆ, ದಪ್ಪ ದೇಹ, ಬಲು ಉದ್ದ ಮತ್ತು ಕಡಿಮೆ ಅಗಲದ ರೆಕ್ಕೆಗಳು ಇದರ ವೈಶಿಷ್ಟ್ಯ, ತೆರೆದ ದೊಡ್ಡ ರೆಕ್ಕೆಗಳಿಂದ ಗಂಟೆಗಟ್ಟಲೆ ಸಮುದ್ರಗಾಮಿ ಹಡಗನ್ನು ಹಿಂಬಾಲಿಸಬಲ್ಲ ಇದು ನಾವಿಕರ ಸಂಗಾತಿ. ಮೌನ ಸಹಗಾಮಿ, ಕಡಲಕೋಳಿ