(ರ) ಮುಕ್ತ ಸ್ಥಿತಿಯಲ್ಲಿ ಅಲ್ಲದೇ ಹಲವಾರು ಖನಿಜಗಳೊಡನೆ ಸೇರಿ ಸಂಯುಕ್ತ ರೂಪದಲ್ಲೂ ಲಭಿಸುವ ಧಾತು; ಘೋರ ವಿಷ; ಬೂದಿ ಬಣ್ಣದ ಘನ. As ಪಸಂ ೩೩; ಸಾಪರಾ ೭೪.೯೨೧೬; ದ್ರಬಿಂ ೮೧೪0 ಸೆ (೩೬ ವಾಯುಭಾರ) ಕುಬಿಂ ೬೧೫0 ಸೆ (ಉತ್ಪತನವಾಗುತ್ತದೆ); ಸಾಸಾಂ ೫.೭೩ (೧೫0 ಸೆ ಯಲ್ಲಿ). ಹಳದಿ ಮತ್ತು ಕಪ್ಪು ಭಿನ್ನರೂಪಗಳುಂಟು. ಭಿದುರ. ಕಾಸಿದರೆ ಉತ್ಪತನಿಸಿ ಬೆಳ್ಳುಳ್ಳಿ ವಾಸನೆಯ ಆವಿಯಾಗಿ ಹೋಗುತ್ತದೆ. ಅರೆವಾಹಕಗಳಲ್ಲಿ ಮತ್ತು ಮಿಶ್ರಲೋಹಗಳಲ್ಲಿ ಬಳಕೆ. ಗೌರೀ ಪಾಷಾಣ. ಶಂಖ ಪಾಷಾಣ. ಇಲಿ ಪಾಷಾಣ
arsenic
ಆರ್ಸೆನಿಕ್ ಆಮ್ಲ
(ರ) H3AsO4 1/2 H2O. ಆರ್ಸೆನಿಕ್ ಮೇಲೆ ಬಿಸಿ ಸಾರರಿಕ್ತ ನೈಟ್ರಿಕ್ ಆಮ್ಲದ ಕ್ರಿಯೆಯಿಂದ ಇಲ್ಲವೇ ಆರ್ಸೆನಿಕ್ (III-ಟ್ರೈ) ಆಕ್ಸೈಡನ್ನು ನೈಟ್ರಿಕ್ ಆಮ್ಲದ
arsenic acid
ಆರ್ಸೆನೈಡ್
(ರ) ಹೆಚ್ಚಿನ ಲೋಹಗಳ ಜೊತೆ ಸಂಯೋಜಿಸಿ ಆರ್ಸೆನಿಕ್ ಆಯಾ ಆರ್ಸೆನೈಡುಗಳನ್ನು ಕೊಡುತ್ತದೆ. ಉದಾ : ಕಬ್ಬಿಣದೊಂದಿಗೆ FeAs2. ನೀರಿನಲ್ಲಿ ಇಲ್ಲವೇ ಸಾರರಿಕ್ತ ಆಮ್ಲಗಳಲ್ಲಿ ವಿಘಟಿಸಿ ಹೈಡ್ರೈಡ್ ಆರ್ಸೈನನ್ನು ರೂಪಿಸುತ್ತದೆ
arsenide
ಆಲಿಗೊಕ್ಲೇಸ್
(ಭೂವಿ) ಕ್ಯಾಲ್ಸಿಯಮ್, ಸೋಡಿಯಮ್ ಹಾಗೂ ಅಲ್ಯೂಮಿನಿಯಮ್ ಸಿಲಿಕೇಟ್‌ಗಳಿಂದ ರೂಪುಗೊಂಡ ಒಂದು ಬಗೆಯ ಫೆಲ್ಡ್‌ಸ್ಪಾರ್ ಖನಿಜ. ಪ್ಲೇಜಿಯೊಕ್ಲೇಸ್ ಸಮರೂಪ ಸರಣಿಗೆ ಸೇರಿದ್ದು. ಇದರ ಸಂಯೋಜನೆ Ab90An10ರಿಂದ Ab70An30ರವರೆಗೂ ವ್ಯಾಪಿಸಿದೆ. ಇಲ್ಲಿ Ab (ಆಲ್ಬೈಟ್) = NaAlSi3O8 ಹಾಗೂ An (ಅನಾರ್ಥೈಟ್) = CaAl2O8. ಈ ಖನಿಜ ಸಮೃದ್ಧ ಸಿಲಿಕಾಂಶವುಳ್ಳ ಅಗ್ನಿಶಿಲೆ ಹಾಗೂ ರೂಪಾಂತರಿತ ಶಿಲೆಗಳಲ್ಲಿ ಮುಖ್ಯವಾಗಿ ಲಭ್ಯ
oligoclase
ಆಲಿಗೊಟ್ರಾಫಿಕ್
(ಸಾ) ಕಡಿದಾದ ಕಲ್ಲು ದಡ ಹಾಗೂ ವಿರಳವಾಗಿ ಬೆಳೆದ ಸಸ್ಯಗಳಿಂದ ಕೂಡಿದ, ಅಧಿಕ ಪ್ರಮಾಣದಲ್ಲಿ ಆಕ್ಸಿಜನ್ ವಿಲೀನವಾದ ನೀರಿರುವ ಸರೋವರ. ಎಂದೇ ತಂಪು ಕೆಳ ಸ್ತರಗಳಲ್ಲಿ ಬೇಸಿಗೆಯಲ್ಲೂ ಆಕ್ಸಿಜನ್ ಕೊರತೆ ಇರದು. ದ್ಯುತಿ ಸಂಶ್ಲೇಷಣೆಯಿಂದಾಗಿ ಸಾವಯವ (ಆರ್ಗ್ಯಾನಿಕ್ -ಕಾರ್ಬನಿಕ) ಪದಾರ್ಥಗಳು ರೂಪುಗೊಳ್ಳುವುದೂ ಕಡಿಮೆ
aligotrophic
ಆಲಿಗೊಮೆರಸ್
(ಸ) ಇತರ ದಳ ಸುರುಳಿಗಳಿಗಿಂತ ಕಡಿಮೆ ಭಾಗಗಳುಳ್ಳ. ಒಂದೋ ಎರಡೋ ದಳ ಸುರುಳಿಗಳುಳ್ಳ (ಪುಷ್ಪ) (ರ) ಪಾಲಿಮರ್‌ನಲ್ಲಿ ನಾಲ್ಕೋ, ಐದೋ ಅಣುಗಳಿರುವ
oligomerous
ಆಲಿಗ್ಯಾಮಿಯ
(ವೈ) ಶರೀರದಲ್ಲಿ ರಕ್ತ ಪ್ರಮಾಣ ಕಡಿಮೆಯಾಗಿರುವ ಸ್ಥಿತಿ
oligaemia
ಆಲಿಟ್ರಂಕ್
(ಪ್ರಾ) ಕೀಟಗಳಲ್ಲಿ ರೆಕ್ಕೆಗಳಿಗೆ ಆಧಾರ ವಾಗಿರುವ ವಕ್ಷಭಾಗ
alitrunk
ಆಲಿಡೇಡ್
(ತಂ) ದೃಗ್ಯಂತ್ರ ಮುಂತಾದ ಮೋಜಣಿ ಸಾಧನ ಗಳಲ್ಲಿ ವಸ್ತುಗಳ ದಿಕ್ಕಿನ ನಿಷ್ಕೃಷ್ಟ ಮಾಪನೆಗಾಗಿ ಅಳವಡಿಸಿದ ಭಾಗ. ದಿಕ್ಸೂಚಕ