logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆಲಿವ್ ಮರ
(ಸ) ಸ್ಕ್ರಾಫುಲಾರಿಯೇಲೀಸ್ ಗಣದ, ಓಲಿಯೆಸೀ ಕುಟುಂಬಕ್ಕೆ ಸೇರಿದ ನಿತ್ಯಹಸುರಿನ ಮರ. ಓಲಿಯ ಯೂರೋಪಿಯ ವೈಜ್ಞಾನಿಕ ನಾಮ. ಯೂರೋಪಿನ ಮೆಡಿಟರೇನಿಯನ್ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆ ಯುತ್ತದೆ. ಓಟೆ ಹಣ್ಣಿಗಾಗಿ ಪ್ರಸಿದ್ಧಿ. ದುರ್ಬಲ NaOHನಿಂದ ಸಂಸ್ಕರಿಸಿ ಕಹಿ ಗ್ಲೂಕೊಸೈಡ್ ಅಂಶವನ್ನು ತಟಸ್ಥ ಗೊಳಿಸಿದ ಬಳಿಕ ಕಾಯಿಯನ್ನು ಎಣ್ಣೆ ತೆಗೆಯಲೂ ಉಪ್ಪಿನಕಾಯಿ ಹಾಕಲೂ ಬಳಸಲಾಗುತ್ತದೆ
olive

ಆಲಿವೀನ್
(ಭೂವಿ) ಕಬ್ಬಿಣ ಹಾಗೂ ಮೆಗ್ನೀಸಿಯಮ್‌ಗಳ ಸಾಮಾನ್ಯ ನೈಸರ್ಗಿಕ ಸಿಲಿಕೇಟ್. (MgFe2)SiO4. ನಸು ಹಸುರು ಬಣ್ಣದ ಶಿಲಾರೂಪಕ ಖನಿಜ. ಆರ್ಥೊರಾಂಬಿಕ್ ಸಮ ಚತುರ್ಭುಜ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ. ಕಾಠಿಣ್ಯಾಂಕ ೬.೫-೭. ಸಾಸಾಂ ೩.೨೭-೩.೩೭. ಪಾರಕ ಸ್ಫಟಿಕಗಳನ್ನು ರತ್ನಗಳಾಗಿ ಬಳಸಲಾಗುತ್ತದೆ
olivine

ಆಲಿಸುವಿಕೆ
(ವೈ) ಕಿವಿಗೊಟ್ಟು ಕೇಳುವಿಕೆ. ಸಾಮಾನ್ಯ ವಾಗಿ ಸ್ಟೆತಸ್ಕೋಪಿನ ಮೂಲಕ ಹೃದಯ, ಶ್ವಾಸಕೋಶ ಅಥವಾ ಉದರದಲ್ಲಿ ಕೇಳಿಬರುವ ಸಹಜ ಅಥವಾ ಅಸಹಜ ಶಬ್ದಗಳನ್ನು ಆಲಿಸಿ ಅವುಗಳ ಕಾರ್ಯಸ್ಥಿತಿಯನ್ನು ತಿಳಿಯುವಿಕೆ. ಆಕರ್ಣನ
ausculation

ಆಲಿಸೈಕ್ಲಿಕ್
(ರ) ಆರೊಮ್ಯಾಟಿಕ್ ಗುಂಪುಗಳನ್ನು ಒಳಗೊಂಡಿರದ ಒಂದು ಉಂಗುರ ಸಂಯುಕ್ತ. ಉದಾ: ಸೈಕ್ಲೊಆಲೈನ್‌ಗಳು ಅಥವಾ ಪಾಲಿಮೆಥಿಲೀನ್‌ಗಳು
alicyclic

ಆಲೂಗೆಡ್ಡೆ
(ಸ) ಸೋಲನೇಸೀ ಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ವೈಜ್ಞಾನಿಕ ನಾಮ ಸೊಲೇನಮ್ ಟ್ಯೂಬರೋಸಮ್. ಮೂಲ ದಕ್ಷಿಣ ಅಮೆರಿಕ. ಸಸ್ಯದ ಕಾಂಡವೇ ಭೂಮಿಯ ಒಳಗೆ ಖಾದ್ಯ ಯೋಗ್ಯವಾದ ಗೆಡ್ಡೆಯಾಗಿ ಬೆಳೆಯುತ್ತದೆ. ತರಕಾರಿಯಾಗಿ ಮತ್ತು ಉದ್ದಿಮೆಗಳಲ್ಲಿ ಕಚ್ಚಾ ವಸ್ತುವಾಗಿ ಬಳಕೆ. ಪಿಷ್ಟದ ಅಂಶ ಹೆಚ್ಚಿರು ವುದರಿಂದ ಅಕ್ಕಿ, ಗೋದಿಗಳಿಗೆ ಬದಲಾಗಿ ಬಳಸಲಾಗುತ್ತದೆ. ಬಟಾಟೆ
potato

ಆಲೇಖ
(ಗ) ಎರಡು ಅಥವಾ ಹೆಚ್ಚು ಚರಗಳ (ಬದಲಾಗು ತ್ತಿರುವ ಪ್ರಮಾಣಗಳ) ನಡುವಿನ ಸಂಬಂಧ ಸೂಚಕ ಸಂಕೇತ ನಕ್ಷೆ. ಸಂಬಂಧ ಗಣಿತೀಯವಾಗಿ ತಿಳಿದಿರಬಹುದು. ಉದಾ: x2+y2=1 ಎಂಬ ಸಮೀಕರಣದ ನಕ್ಷೆ ಒಂದು ವೃತ್ತ ಅಥವಾ ತಿಳಿಯದಿರ ಬಹುದು. ಉದಾ: ಆಸ್ಪತ್ರೆಯಲ್ಲಿ ಕಾಲದೊಂದಿಗೆ ರೋಗಿಯ ಮೈ ಉಷ್ಣತೆಯಲ್ಲಿ ಆಗುವ ಏರುಪೇರಿನ ನಕ್ಷೆ
graph

ಆಲೊ
(ಸ) ನೆಟ್ಟಗೆ ನಿಂತಿರುವ ತೆನೆ ಯಂಥ ಹೂಗೊಂಚಲುಳ್ಳ, ಕಹಿ ರಸದ ಸಸ್ಯ ಜಾತಿ. ಲೋಳೀ ಸರ, ಕತ್ತಾಳೆ ಮೊದಲಾದವು
aloe

ಆಲ್ಕನಮೈಡ್‌ಗಳು
(ರ) ನೋಡಿ : ಅಮೈಡ್‌ಗಳು
alkanamides

ಆಲ್ಕಲಾಯ್ಡ್‌ಗಳು
(ರ) ಸಸ್ಯಗಳಲ್ಲಿ ದೊರೆಯುವ ನೈಸರ್ಗಿಕ ಆರ್ಗ್ಯಾನಿಕ್ (ಕಾರ್ಬನಿಕ) ಪ್ರತ್ಯಾಮ್ಲಗಳು; ಅಣುಗಳ ಉಂಗುರ ರಚನೆ ಕೊನೆಯ ಪಕ್ಷ ಒಂದು ನೈಟ್ರೊಜನ್ ಪರಮಾಣುವನ್ನಾದರೂ ಒಳಗೊಂಡಿರುತ್ತದೆ. ಅನೇಕ ಸಸ್ಯಗಳು ಇವನ್ನು ಕೀಟಬಾಧೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಳಸಿಕೊಳ್ಳುತ್ತವೆ. ಶರೀರದ ಮೇಲೆ ಇವುಗಳು ಉಪಯುಕ್ತವಾಗಿ ವರ್ತಿಸುವುದರಿಂದ ಔಷಧಿಗಳಲ್ಲಿ ಬಳಕೆ. ಉದಾ: ಕೊಕೈನ್, ನಿಕೊಟೈನ್, ಕ್ವಿನೈನ್ ಇತ್ಯಾದಿ
alkaloids

ಆಲ್ಕಹಾಲ್‌ಗಳು
(ರ) ಕಾರ್ಬನ್, ಹೈಡ್ರೊಜನ್, ಆಕ್ಸಿಜನ್ ಗಳಿಂದಾದ ಆರ್ಗ್ಯಾನಿಕ್ ಸಂಯುಕ್ತಗಳ ಒಂದು ವರ್ಗಕ್ಕೆ ಸೇರಿದವು; ಆಲ್ಕೇನ್‌ಗಳಲ್ಲಿ ಒಂದು/ಹೆಚ್ಚು ಹೈಡ್ರೊಜನ್‌ಅನ್ನು ಒಂದು ಅಥವಾ ಹೆಚ್ಚು ಹೈಡ್ರಾಕ್ಸಿಲ್ ಗುಂಪಿನಿಂದ ಪ್ರತಿಸ್ಥಾಪಿಸಿದಾಗ ಉತ್ಪನ್ನವಾಗುವ ಹೈಡ್ರೋಕಾರ್ಬನ್‌ಗಳ ಹೈಡ್ರಾಕ್ಸಿಲ್ ವ್ಯುತ್ಪನ್ನಗಳೆಂದು ಇವನ್ನು ಪರಿಗಣಿಸ ಬಹುದು. ದ್ರಾಕ್ಷಾಮದ್ಯದಿಂದ ಬಟ್ಟಿ ಇಳಿಸಿ ಪಡೆದ ಮದ್ಯಸಾರ
alcohols


logo