(ತಂ) ಯಾವುದೇ ಹೊಸ ವಿನ್ಯಾಸದ ಯಂತ್ರಗಳಲ್ಲಿ ಮೊದಲನೆಯದು. ಕಾರ್ಯದಕ್ಷತೆ, ವಿಶ್ವಾಸಾರ್ಹತೆ, ಮಿತವ್ಯಯ ಹಾಗೂ ಸುರಕ್ಷಿತತೆ ಬಗ್ಗೆ ಮೊದಲ ಯಂತ್ರವನ್ನು ಪರೀಕ್ಷಿಸಿ, ಆನಂತರ ಅಗತ್ಯ ಬದಲಾವಣೆಗಳನ್ನು ಮಾಡಿ ದೊಡ್ಡ ಪ್ರಮಾಣದಲ್ಲಿ ಯಂತ್ರಗಳ ಉತ್ಪಾದನೆ ಪ್ರಾರಂಭಿಸಲಾಗುತ್ತದೆ. ಮಾತೃಕೆ. ಆದಿಮ ಪ್ರರೂಪ
prototype
ಆದಿಮ ವಕ್ರ
(ಗ) ಇತರ ವಕ್ರರೇಖೆಗಳನ್ನು ಉಂಟುಮಾಡುವ ಮೂಲ ವಕ್ರರೇಖೆ
primitive curve
ಆದಿಶಿಲಾ ಆಯುಧ
(ಸಾ) ಆದಿಮಾನವ ಉಪಯೋಗಿಸುತ್ತಿದ್ದ ಅತ್ಯಂತ ಪುರಾತನ ಶಿಲಾ ಆಯುಧಗಳು, ತುಂಬ ಒರಟು ಆಗಿರುವುದರಿಂದ ಇವು ಮಾನವ ನಿರ್ಮಿತವಲ್ಲ ಪ್ರಕೃತಿ ಸಹಜವಾಗಿ ರೂಪುಗೊಂಡವು ಎಂದು ಕೆಲವು ಪರಿಣಿತರು ಅಭಿಪ್ರಾಯಪಡುತ್ತಾರೆ
eolith
ಆದೇಶ
(ಗ) ಒಂದು ಚರದ ಬದಲಾಗಿ ಇನ್ನೊಂದು ಚರದ ಸ್ಥಾಪನೆ. (ರ) ಅಣುವೊಂದರಲ್ಲಿ ಯಾವುದೇ ಪರಮಾಣು ಮುಖ್ಯವಾಗಿ ಹೈಡ್ರೊಜನ್ ಪರಮಾಣು ಅಥವಾ ಪರಮಾಣು ಗುಚ್ಛವನ್ನು ತೆಗೆದು ಅದರ ಸ್ಥಾನದಲ್ಲಿ ಬೇರೊಂದು ಪರಮಾಣು ಅಥವಾ ಪರಮಾಣು ಗುಚ್ಛವನ್ನು ಆದೇಶಿಸುವುದು
substitution
ಆದೇಶ ಭಾಷೆ
(ಕಂ) ಕಂಪ್ಯೂಟರ್‌ಗಳಲ್ಲಿ ಪರಿಕರ್ಮ ವ್ಯವಸ್ಥೆಯ ಜೊತೆ ವ್ಯವಹರಿಸಲು ಬಳಸುವ ಭಾಷೆ
command language
ಆದೇಶ ಸಂಪುಟ
(ತಂ) ವ್ಯೋಮ ಯಾತ್ರಿ ಗಳನ್ನೂ ಪ್ರಧಾನ ನಿಯಂತ್ರಣ ಸಾಧನಗಳನ್ನೂ ಒಳಗೊಂಡ ಗಗನ ನೌಕೆಯ ಸಂಪುಟ, ಕೋಶ ಅಥವಾ ವಿಭಾಗ
command module
ಆದ್ಯುಕ್ತಿ
(ಸಾ) ನೋಡಿ: ಅಭಿಗೃಹೀತ
assumption
ಆದ್ಯುಕ್ತಿ
(ಗ) ವಾದವನ್ನು ಆರಂಭಿಸುವ ಮೊದಲು ಅಥವಾ ತರ್ಕಕ್ಕೆ ಪೀಠಿಕೆ ಹಾಕುವ ಮೊದಲು ನಿಜವೆಂದು ಅಂಗೀಕರಿಸುವ ಹೇಳಿಕೆ. ನೋಡಿ : ಅಭಿಗೃಹೀತ
axiom
ಆಧಾರ
(ಗ) ಜ್ಯಾಮಿತೀಯ ಆಕೃತಿಗೆ (ತ್ರಿಭುಜ, ಚತುಷ್ಫಲಕ, ವೃತ್ತ, ಗೋಳ ಇತ್ಯಾದಿ) ‘ಆಧಾರ’ವಿದ್ದರೆ ಅದಕ್ಕೆ ಲಂಬ ಎಳೆಯುವುದು ಸಾಧ್ಯ. ಸಂಖ್ಯೆಗಳ ದಶಮಾನ ವ್ಯವಸ್ಥೆಯಲ್ಲಿ ಆಧಾರ ಸಂಖ್ಯೆ ೧೦; ಕಂಪ್ಯೂಟರ್‌ನ ಪರಿಭಾಷೆಯಾದ ದ್ವಿಮಾನ ವ್ಯವಸ್ಥೆಯಲ್ಲಿ ೨; ದ್ವಾದಶಮಾನ ವ್ಯವಸ್ಥೆಯಲ್ಲಿ ೧೨. ಈ ಆಧಾರ ಸಂಖ್ಯಾನುಸಾರವಾಗಿ ಅಂಕಗಳಿಗೆ (ಪ್ರತೀಕಗಳಿಗೆ) ಸ್ಥಾನ ಮೌಲ್ಯ ನಿಗದಿ ಆಗುವುದು. ದಶಮಾನ ವ್ಯವಸ್ಥೆಯಲ್ಲಿ 5439 = 9x100+3x101+4x102+5x103. ಇದೇ ಸಂಖ್ಯೆ ದ್ವಾದಶಮಾನ ವ್ಯವಸ್ಥೆಯಲ್ಲಿ 9x120+3x121+4x122 +5x123. logb aಯಲ್ಲಿ bಯನ್ನು ಆಧಾರವೆನ್ನುತ್ತೇವೆ
base
ಆಧಾರ
(ತಂ) ಕಡೆತದ ಯಂತ್ರದಲ್ಲಿ ಉಪಕರಣ ಗ್ರಾಹಿ. ಯಂತ್ರಮುಟ್ಟನ್ನು ಜೋಡಿಸಿರುವ ಸಾಧನ ಅಥವಾ ಮುಟ್ಟು ಹಿಡಿಕೆ