(ಜೀ) ನೀರಿನಲ್ಲಿ ವಿಲೀನವಾಗುವ (ಉಪ್ಪಿನಲ್ಲಿ ಆಗದ) ಪ್ರೋಟೀನ್‌ಗಳ ಸಾರ್ವತ್ರಿಕ ನಾಮ. ಉದಾ: ಮೊಟ್ಟೆಯ ಬಿಳಿಲೋಳೆಯಿಂದ ಪಡೆದ ಅಥವಾ ರಕ್ತವಸೆಯಿಂದ ಪಡೆದ ಆಲ್ಬುಮಿನ್‌ಗಳು
albumin
ಆಲ್ಬುಮಿನೂರಿಯ
(ವೈ) ರೋಗ ಸೂಚಕವಾಗಿ ಮೂತ್ರದಲ್ಲಿ ಆಲ್ಬುಮಿನ್ ಇರುವುದು. ಆಲ್ಬೂಮಿನ್ ಮೂತ್ರ
albuminuria
ಆಲ್ಬುಮೆನ್
(ಪ್ರಾ) ಮೊಟ್ಟೆಯೊಳಗಿನ ಬಂಡಾರವನ್ನು ಆವರಿಸಿರುವ ಬಿಳಿ ಲೋಳೆ ಪದಾರ್ಥ. ಅನೇಕ ವಿಲೇಯ ಪ್ರೋಟೀನ್‌ಗಳನ್ನು ಒಳಗೊಂಡಿರುತ್ತದೆ
albumen
ಆಲ್ಬೈಟ್
(ಭೂವಿ) ಅಗ್ನಿಶಿಲೆಗಳ ಸಾಮಾನ್ಯ ಅಂಶವಾಗಿರುವ ಒಂದು ಬಗೆಯ ಫೆಲ್ಡ್‌ಸ್ಪಾರ್. ಶುದ್ಧ ರೂಪದಲ್ಲಿ ಸೋಡಿಯಮ್ ಹಾಗೂ ಅಲ್ಯೂಮಿನಿಯಮ್‌ನ ಸಿಲಿಕೇಟ್. ಆದರೆ ಸಾಮಾನ್ಯವಾಗಿ ಪೊಟ್ಯಾಸಿಯಮ್ ಹಾಗೂ ಕ್ಯಾಲ್ಸಿಯಮ್ ಕೂಡ ಅಲ್ಪ ಪ್ರಮಾಣ ಗಳಲ್ಲಿರುತ್ತವೆ. ತ್ರಿನತಾಕ್ಷ ವ್ಯವಸ್ಥೆಯಲ್ಲಿ ಸ್ಫಟಿಕೀಕರಣ. NaAlSi3o8. ಆಲ್ಬೈಟ್ ಅನಾರ್ಥೈಟ್ ಸಮರೂಪ ಶ್ರೇಣಿಯ ಆರು ಖನಿಜಗಳ ಪೈಕಿ ಮೊದಲನೆಯದು. ನೋಡಿ : ಅನಾರ್ಥೈಟ್
albite
ಆವರಣ ಪ್ರಸ್ತರ
(ಭೂವಿ) ಆಧಾರ ಶಿಲೆಯ ಮೇಲಿರುವ ಶಿಲಾಚೂರುಗಳು, ಮಣ್ಣು, ಬೀಸು ಮರಳು, ಮೆಕ್ಕಲು ಮುಂತಾದವುಗಳ ಮುಕ್ತ, ಸಂಸಕ್ತವಾಗಿರದ, ಹೊದಿಕೆ. (ಖ) ಚಂದ್ರನ ಮೇಲೆ ಉಲ್ಕಾಪಿಂಡಗಳ ಪುನರಾವರ್ತಿತ ಸಂಘಟ್ಟನ ದಿಂದ ಉತ್ಪಾದಿತವಾದ ನುಣುಪಾದ ಪುಡಿ ಪದಾರ್ಥದ ಪದರ
regolith
ಆವರ್ತ
(ಸಾ) ಪುನರಾವರ್ತಕ ಘಟನೆಗಳ ಸರಮಾಲೆ, ಲಯ ಬದ್ಧವಾಗಿ ಸಂಭವಿಸುವ ವಿದ್ಯಮಾನಗಳ ಒಂದು ಸರಣಿ. ಚಕ್ರ
cycle
ಆವರ್ತ
(ರ) ಆವರ್ತಕೋಷ್ಟಕದಲ್ಲಿ ಅನುಕ್ರಮ ಪರಮಾಣು ಸಂಖ್ಯೆಯುಳ್ಳ ಮತ್ತು ನಿಕಟ ಗುಣಸಾಮ್ಯವುಳ್ಳ ಧಾತುಗಳ ಗುಂಪು. ಉದಾ: ಕ್ರೋಮಿಯಮ್‌ನಿಂದ ತಾಮ್ರದವರೆಗಿನ ಧಾತುಗಳ ಗುಂಪು
period
ಆವರ್ತಕತೆ
(ರ) ಆವರ್ತಕೋಷ್ಟಕದಲ್ಲಿ ನಿಗದಿಯಾದ ಧಾತುವಿನ ಸ್ಥಾನ
periodicity
ಆವರ್ತಕ ಪ್ರವಾಹ
(ಭೌ) ಏರಿಳಿವ ಕಾಂತಕ್ಷೇತ್ರದಲ್ಲಿ ಇಟ್ಟಿರುವ ಅಥವಾ ಸ್ಥಿರ ಕಾಂತಕ್ಷೇತ್ರದಲ್ಲಿ ಚಲಿಸುತ್ತಿರುವ ವಾಹಕದಲ್ಲಿ (ಲೋಹರಾಶಿಯಲ್ಲಿ) ಪ್ರೇರಿತವಾಗುವ ವಿದ್ಯುತ್ ಪ್ರವಾಹ. ಸುಳಿಪ್ರವಾಹ
eddy current
ಆವರ್ತ ಕೋಷ್ಟಕ
(ರ) ರಾಸಾಯನಿಕ ಗುಣಸಾಮ್ಯ ಇರುವ ಧಾತುಗಳು ಬೇರೆ ಬೇರೆಯಾಗಿ ಗುಂಪು ಕೂಡಿಕೊಳ್ಳುವಂತೆ ರಾಸಾಯನಿಕ ಧಾತುಗಳೆಲ್ಲವನ್ನೂ ಆರೋಹಣ ಕ್ರಮದಲ್ಲಿ ಕ್ರಮಬದ್ಧವಾಗಿ ಜೋಡಿಸಿ ರಷ್ಯನ್ ವಿಜ್ಞಾನಿ ಮೆಂದೆಲ್ಯೇವ್ (೧೮೩೪-೧೯೦೭) ತಯಾರಿಸಿದ ಕೋಷ್ಟಕ. ಮೆಂದೆಲ್ಯೇವ್ ಕೋಷ್ಟಕ. ಆವರ್ತ ನಿಯಮ. ನೋಡಿ : ಅನುಬಂಧ-೧