(ವೈ) ಕ್ಯಾಂಡಿಡಾ ಆಲ್ಬಿಕ್ಯಾನ್ಸ್ ಎಂಬ ಶಿಲೀಂಧ್ರದಿಂದ ಉಂಟಾದ ರೋಗ. ಮಕ್ಕಳ ನಾಲಗೆಯ ಮೇಲೆ ಬಿಳಿ ಮಚ್ಚೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬಾಯಿಹುಣ್ಣು. ಬಿಳಿ ಹಕ್ಕಳೆ ರೋಗ
thrush
ಆಸರೆಕಂಬ
(ತಂ) ಪಕ್ಕಪಕ್ಕದ ಎರಡು ಸೇತುವೆ ಕಮಾನುಗಳ ಮಧ್ಯದ ಆಸರೆ. ತೀರದಿಂದ ಸಾಗರದೊಳಕ್ಕೆ ಚಾಚಿಕೊಂಡಿರುವ ಮರದ ಅಥವಾ ಉಕ್ಕಿನ ಕಟ್ಟಣೆ. ನೌಕೆಗಳನ್ನು ಲಂಗರು ಹಾಕಲು, ಸರಕು ಸಾಗಿಸಲು ಬಳಕೆ. ಬಾಗಿಲು, ಕಿಟಕಿಗಳ ನಡುವಣ ಗಟ್ಟಿ ಕಟ್ಟಡ
pier
ಆಸವನ
(ರ) ನೋಡಿ : ಬಟ್ಟೀಕರಣ
distillation
ಆಸ್ಕಸ್
(ಸ) ಶಿಲೀಂಧ್ರದಲ್ಲಿ ಬೀಜಕಗಳು ಮೈದಳೆಯುವ ಕೊಳವಿಸದೃಶ ಕೋಶ
ascus
ಆಸ್ಕಾರ್ಬಿಕ್ ಆಮ್ಲ
(ರ) C6H8O6. ದ್ರಬಿಂ. ೧೯೨0 ಸೆ. ಅನೇಕ ಸಸ್ಯ ಪದಾರ್ಥಗಳಲ್ಲಿ, ವಿಶೇಷವಾಗಿ ಸಿಟ್ರಸ್ ಹಣ್ಣಿನಲ್ಲಿ ಲಭ್ಯವಿರುವ ಬಿಳಿ, ಸ್ಫಟಿಕೀಯ, ಜಲವಿಲೇಯ ವೈಟಮಿನ್. ವೈಟಮಿನ್ ‘ಸಿ’. ಇದರ ಕೊರತೆ ಸ್ಕರ್ವಿ ರೋಗಕ್ಕೆ ಕಾರಣವಾಗುತ್ತದೆ
ascorbic acid
ಆಸ್ಟಟೀನ್
(ರ) ಅತ್ಯಧಿಕ ಭಾರದ ಹ್ಯಾಲೋಜನ್; ವಿಕಿರಣಪಟು ಧಾತು; At; ಪಸಂ ೮೫; ರಾಶಿ ಸಂಖ್ಯೆಗಳು ೨೦೨- ೨೧೨, ೨೧೪-೨೧೯; ಅರ್ಧಾಯುಗಳು ೨´೧೦-೬ ಸೆಕೆಂಡ್‌ನಿಂದ ೮ ಗಂಟೆಗಳ ತನಕ. ಇದರ ಸಮಸ್ಥಾನಿಗಳು ಆಕ್ಟಿನಿಯಮ್, ಯುರೇನಿಯಮ್/ನೆಪ್ಚೂನಿಯಮ್ ಶ್ರೇಣಿ ಸದಸ್ಯಗಳಾಗಿ ಸಹಜ ಲಭ್ಯ, ಇಲ್ಲವೇ ಬಿಸ್ಮತ್‌ನ a ತಾಡನದಿಂದ ಉತ್ಪಾದಿತ
astatine
ಆಸ್ಟರ್
(ಸ) ನಕ್ಷತ್ರ ಕಿರಣಗಳಂತೆ ಕಾಣುವ ಎಸಳುಗಳುಳ್ಳ ಹೂ ಬಿಡುವ ಸಸ್ಯಜಾತಿ. ಬಹುಜನಪ್ರಿಯವೂ ರಮ್ಯವೂ ಆದ ಈ ವಾರ್ಷಿಕ ಸಸ್ಯವನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸು ತ್ತಾರೆ. ಸೇವಂತಿಗೆ ಹೂವಿನಂತೆ ಇರುವ ಇದರ ಹೂಗಳನ್ನು ಮಂಜರಿ ಕಟ್ಟಲು ಮತ್ತು ಮುಡಿಯಲು ಬಳಸುತ್ತಾರೆ. ಮೂಲತಃ ಚೀನದಿಂದ ತಂದ ಏಕದಳ ಪುಷ್ಪ ಕ್ರಮಕ್ರಮವಾಗಿ ವಿಕಾಸಗೊಂಡು ಇಂದಿನ ರೂಪ ತಾಳಿದೆ
aster
ಆಸ್ಟಿಯೋಪತಿ
(ವೈ) ೧. ಅಸ್ಥಿವ್ಯಾಧಿ. ಮೂಳೆಗಳಿಗೆ ಬರುವ ಯಾವುದೇ ರೋಗ ಸೂಚಿಸಲು ಬಳಸಬಹುದಾದ ಪದ. ೨. ಅಲೋಪತಿ, ಹೋಮಿಯೋಪತಿಗಳಂತೆ ಬಳಕೆಯಲ್ಲಿರುವ ಆಸ್ಟಿಯೋಪತಿ ಒಂದು ವಿಶೇಷವಾದ ಚಿಕಿತ್ಸಾ ಕ್ರಮ. ದೇಹವು ತನ್ನ ಸಹಜ ಸ್ಥಿತಿಯಲ್ಲಿ, ಅದರಲ್ಲಿ ತಲೆದೋರುವ ಸೋಂಕು ಹಾಗೂ ಮೂಡುವ ವಿಷಪದಾರ್ಥಗಳನ್ನು ಅದು ಸ್ವಯಂ ನಿವಾರಿಸಿ ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂಬ ಪ್ರಕಲ್ಪನೆ ಈ ಚಿಕಿತ್ಸಾ ವಿಧಾನದ ತಿರುಳು. ದೇಹದಲ್ಲಿರುವ ಮೂಳೆ ಮತ್ತು ಸ್ನಾಯುಗಳು ತೊಂದರೆಗೆ ಒಳಗಾದಾಗ ಅದರ ಪ್ರಭಾವ ನರ ಹಾಗೂ ರಕ್ತಪರಿಚಲನೆಯ ಮೇಲೂ ಆಗುತ್ತದೆ ಎಂಬ ಸಿದ್ಧಾಂತದ ಮೇಲೆ ಶರೀರದ ಭಾಗಗಳನ್ನು ಮರ್ದಿಸಿ ತೀಡಿ, ತಿರುಚಿ, ಉಜ್ಜಿ, ಎಳೆದು ಸರಿಪಡಿಸುವ ಚಿಕಿತ್ಸಾ ಕ್ರಮ. ಅಸ್ಥಿಚಿಕಿತ್ಸೆ