logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆವಿಷ್ಟ ಕಣ
(ಭೌ) ಋಣಾವೇಶ ಧರಿಸಿರುವ (ಋಣಾವಿಷ್ಟ) ಕಣವೇ ಎಲೆಕ್ಟ್ರಾನ್; ಧನಾವೇಶ ಧರಿಸಿರುವ (ಧನಾವಿಷ್ಟ) ಕಣವೇ ಪ್ರೋಟಾನ್
charged particle

ಆವಿಷ್ಕಾರ
(ಭೂವಿ) ಅಮೂಲ್ಯವಾದ ಖನಿಜ ನಿಕ್ಷೇಪ ವನ್ನು ಪತ್ತೆಮಾಡುವುದು (ಸಾ) ನಿಸರ್ಗದ ಯಾವುದೋ ರಹಸ್ಯ, ಗುಣ, ಸೂತ್ರ ಮುಂತಾದವನ್ನು ಮೊದಲ ಬಾರಿಗೆ ಪರಿಶೋಧಿಸಿ ವಿವರಿಸುವುದು. ನೋಡಿ: ಅನ್ವೇಷಣೆ, ಉಪe, ಸಂಶೋಧನೆ
discovery

ಆವೃತ ಬೀಜಸಸ್ಯಗಳು
(ಸ) ಅಂಡಕಗಳು ಶಲಾಕಾ ಕೋಶಗಳಿಂದ ಆವೃತವಾಗಿದ್ದು ಶಲಾಕಾಗ್ರದ ಮೇಲೆ ಪರಾಗಾಂಕುರಣ ನಡೆದು ಪರಾಗನಾಳ ಅಂಡಕದತ್ತ ಬೆಳೆಯುವ ಬೀಜಸಸ್ಯಗಳ ವಿಭಾಗ; ಏಕದಳಗಳು ಮತ್ತು ದ್ವಿದಳಗಳು ಇದರ ಎರಡು ವರ್ಗಗಳು
angiospermae

ಆವೃತಬೀಜಿ
(ಸ) ಸಂವೃತ ಅಂಡಾಶಯದೊಳಗೆ ಬೀಜಗಳಿರುವ ನಾಳ ಸಸ್ಯ. ಉದಾ: ಬತ್ತ, ಹುರಳಿ, ನೆಲಗಡಲೆ
angiosperm

ಆವೃತ್ತಿ
(ಭೌ) ಏಕಮಾನ ಕಾಲದಲ್ಲಿ (ಸಾಮಾನ್ಯವಾಗಿ ೧ ಸೆಕೆಂಡ್) ಆಂದೋಳನ ಅಥವಾ ಕಂಪನಗಳ ಸಂಖ್ಯೆ. ಪ್ರತೀಕ f ಅಥವಾ . ತರಂಗ ಚಲನೆಯಲ್ಲಿ ಇದು ಸಂಚರಣ ವೇಗ (V), ಅಲೆಯುದ್ದ (l) ಇವುಗಳ ನಡುವಿನ ನಿಷ್ಪತ್ತಿ. f ಅಥವಾ n = V/  
frequency

ಆವೆಮಣ್ಣು
(ಭೂವಿ) ಇಟ್ಟಿಗೆ ತಯಾರಿಕೆಗೆ ಅವಶ್ಯವಾದ ಕೊಜೆ ಅಥವಾ ಜಿಗುಟು ಮಣ್ಣು
brick earth

ಆವೇಗ
(ಭೌ) ಅತ್ಯಲ್ಪ ಕಾಲದಲ್ಲಿ ನಿರ್ದಿಷ್ಟ ಆಘಾತ ಸಂಭವಿಸುವಾಗ ಪ್ರಯೋಗಿಸಿದ ಸರಾಸರಿ ಬಲ ಮತ್ತು ಪ್ರಯೋಗ ಕಾಲಗಳ ಗುಣಲಬ್ಧ (ವೈ) ಸ್ನಾಯುವಿನಲ್ಲಿ ಕ್ರಿಯೆಯನ್ನೋ ತಾಟಸ್ಥ್ಯ ವನ್ನೋ ಉಂಟುಮಾಡುವಂತೆ ನರದಲ್ಲಾಗುವ ಉದ್ರೇಕದ ಅಲೆ
impulse

ಆವೇಶ
(ಭೌ) ವಸ್ತುವಿನಲ್ಲಿಯ ಅಸಮತೋಲಿತ ವಿದ್ಯುತ್ತಿನ ಮೊತ್ತ. ಎಲೆಕ್ಟ್ರಾನ್‌ಗಳ ಆಧಿಕ್ಯ ಅಥವಾ ರಿಕ್ತತೆ. ಮೊದಲ ಸಂದರ್ಭದಲ್ಲಿ ವಸ್ತು ಋಣಾವಿಷ್ಟ. ಎರಡನೆಯದರಲ್ಲಿ ಧನಾವಿಷ್ಟ. ಆವೇಶಪೂರಣ ಮಾಡು. ಆವೇಶಿಸು
charge

ಆಶ್ಲೇಷೀ ಬಿಂದು
(ಗ) ವಕ್ರರೇಖೆಯ ಈ ಬಿಂದುವಿನಲ್ಲಿ ಸಂಧಿಸುವ ಅದರ ಎರಡು ಶಾಖೆಗಳಿಗೆ ಸಾಮಾನ್ಯ ಸ್ಪರ್ಶಕವಿದ್ದು ಪ್ರತಿಯೊಂದು ಶಾಖೆಯೂ ಸ್ಪರ್ಶಕದ ಉಭಯ ದಿಶೆಗಳತ್ತ ವಿಸ್ತರಿಸಿರುವುದು. ಉದಾ: y2 = x4 (1-x2) ವಕ್ರರೇಖೆಗೆ ಮೂಲಬಿಂದುವೇ ಆಶ್ಲೇಷೀ ಬಿಂದು ಮತ್ತು x-ಅಕ್ಷ ಸಾಮಾನ್ಯ ಸ್ಪರ್ಶಕ. ಟ್ಯಾಕ್ನೋಡ್, ದ್ವಿ-ಉಭಯಾಗ್ರ
point of osculation

ಆಸಂಜನ
(ಭೌ) ಪರಸ್ಪರ ಸ್ಪರ್ಶದಲ್ಲಿರುವ ಎರಡು ವಿಭಿನ್ನ ವಸ್ತುಗಳನ್ನು ಹಿಡಿದಿಡಲು ಕಾರಣವಾದ ಆಕರ್ಷಣ ಬಲ. ಉದಾ: ಗಾಜಿಗೆ ಅಂಟಿರುವ ನೀರು, ಇಂಥ ಸ್ಥಿತಿಯಲ್ಲಿ ಇರುವ ಎರಡು ಕಾಂತೀಯ ವಸ್ತುಗಳ ನಡುವಿನ ಬಲ. (ಸ) ಸಾಮಾನ್ಯ ವಾಗಿ ಎರಡು ವಿಭಿನ್ನ ಗುಂಪುಗಳಲ್ಲಿರುವ ಸಸ್ಯ ಭಾಗಗಳು ಬೆಳವಣಿಗೆಯ ವೇಳೆ ಒಂದಾಗುವುದು. (ವೈ) ಸಾಮಾನ್ಯವಾಗಿ ಪ್ರತ್ಯೇಕವಾಗಿರುವ ಎರಡು ತಲಗಳ ನಡುವೆ ಊತದ ಕಾರಣವಾಗಿ ಹೊಸ ಊತಕ ಅಭಿವರ್ಧಿಸಿ ಅವನ್ನು ಸಂಯೋಜಿಸುವುದು
adhesion


logo