logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಆರ್ದ್ರತಾಮಾಪಕ
(ಭೌ) ವಾಯುಮಂಡಲದ ಅಥವಾ ಯಾವುದೇ ಅನಿಲದ ಸಾಪೇಕ್ಷ ಆರ್ದ್ರತೆ ಅಳೆಯುವ ಉಪಕರಣ
hygrometer

ಆರ್ದ್ರತಾವಿಜ್ಞಾನ
(ಪವಿ) ವಾತಾವರಣದಲ್ಲಿ ಇರುವ ತೇವಾಂಶವನ್ನು ಅಧ್ಯಯನ ಮಾಡುವ ಶಾಸ್ತ್ರ
hygrology

ಆರ್ದ್ರತೆ
(ಭೌ) ವಾಯುಮಂಡಲದಲ್ಲಿ ಇರುವ ತೇವಾಂಶ. ಸಾಪೇಕ್ಷ, ನಿರಪೇಕ್ಷ, ವಿಶಿಷ್ಟ ಇತ್ಯಾದಿ ಗುಣವಾಚಕ ಗಳೊಂದಿಗೆ ವ್ಯಕ್ತಗೊಳಿಸಲಾಗುತ್ತದೆ
humidity

ಆರ್ದ್ರೀಕರಣ
(ರ) ವಾಯುವಿನಲ್ಲಿಯ ತೇವವನ್ನು ಆಕರ್ಷಿಸಿ ಹೀರಿಕೊಳ್ಳುವ ಮೂಲಕ ಘನಪದಾರ್ಥ ಕ್ರಮೇಣ ಕರಗಿ ದ್ರವವಾಗುವ ಪ್ರಕ್ರಿಯೆ. ಉದಾ: NaOH, KOH, MgCl2. ಮಳೆಗಾಲದಲ್ಲಿ ಅಡುಗೆ ಉಪ್ಪು (NaCl) ಕರಗಿ ನೀರಾಗುವುದಕ್ಕೆ ಅದರಲ್ಲಿರುವ ಜಲಾಕರ್ಷಣ ಗುಣವೇ ಕಾರಣ
deliquescence

ಆರ್ನಿಕ
(ಸ) ಬೆಟ್ಟದ ಹೊಗೆಸೊಪ್ಪು ವರ್ಗಕ್ಕೆ ಸೇರಿದ ಔಷಧೀಯ ಸಸ್ಯ. ಕಾಡು ತಂಬಾಕು
arnica

ಆರ್ಬರ್
(ತಂ) ಒಂದು ಯಂತ್ರದ ಮುಖ್ಯಾಧಾರ; ಚಕ್ರ ತಿರುಗುವ ಇರಸು ಅಥವಾ ಅಚ್ಚು
arbor

ಆರ್ಮಡಿಲ್ಲೊ
(ಪ್ರಾ) ಡಾಸಿಪೊಡಿಡೀ ಕುಟುಂಬದ ದಂತರಹಿತ ಸ್ತನಿಗಳ ೨೧ ಪ್ರಭೇದಗಳಲ್ಲಿ ಯಾವುದೇ ಒಂದು. ಉದಾ: ಚಿಪ್ಪು ಹಂದಿ. ಸ್ಲಾತ್ ಪ್ರಾಣಿಯ ಗುಂಪಿಗೆ ಸೇರಿದೆ; ಅಸ್ಥಿ ಕವಚವಿದೆ; ಹಿಡಿದರೆ ಚೆಂಡಿನಂತೆ ಉಂಡೆಗಟ್ಟುತ್ತದೆ; ಹೆಗ್ಗಣದಂತೆ ಬಿಲ ಕೊರೆಯಬಲ್ಲದು. ಕವಚಧಾರಿ ಆವಂತಿ
armadillo

ಆರ್ಮೇಚರ್
(ಭೌ) ವಿದ್ಯುದ್ಯಂತ್ರದ ಅಥವಾ ಉಪಕರಣದ ಚರಭಾಗ; ಪ್ರವಾಹವನ್ನು ಉತ್ಪಾದಿಸಿ ಒಯ್ಯುವ ಮುಖ್ಯ ಸುತ್ತುಗಟ್ಟುಗಳನ್ನು ಒಳಗೊಂಡಿದೆ. ಏಕಮುಖ (ಡಿಸಿ) ಮೋಟರ್ ಅಥವಾ ವಿದ್ಯುಜ್ಜನಕದಲ್ಲಿ ಇದು ಆವರ್ತಿಸುವ ಭಾಗ (ರೋಟರ್)
armature

ಆರ್ಮೊಲೂ
(ರ) ತಾಮ್ರ (ಕನಿಷ್ಠ ಶೇ ೫೦), ಸತುವು ಮತ್ತು ತವರಗಳ ಮಿಶ್ರಣದಿಂದಾದ ಚಿನ್ನ ಬಣ್ಣದ ಮಿಶ್ರ ಲೋಹ. ಚಿನ್ನದ ಮುಲಾಮಿನಂತಿರುವ ಈ ಕಂದು ಕಂಚನ್ನು ಪೀಠೋಪಕರಣಗಳ ಅಲಂಕರಣಕ್ಕೆ ಬಳಸಲಾಗುತ್ತದೆ
armolu

ಆರ್ಸೀನ್
(ರ) ನವಜಾತ ಹೈಡ್ರೊಜನ್ನು ಆರ್ಸೆನಿಕ್ ಧಾತುವಿನ ದ್ರಾವಣಗಳ ಜೊತೆ, ಇಲ್ಲವೇ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವು ಸೋಡಿಯಮ್ ಅಥವಾ ಜಿಂಕ್ ಆರ್ಸೆನೈಡ್ ಜೊತೆ, ವರ್ತಿಸಿದಾಗ ದೊರೆಯುವ ನಿರ್ವರ್ಣ ವಾಯು; ಕೆಟ್ಟ ವಾಸನೆ; AsH3. ಆರ್ಸೆನಿಕ್ (III) ಹೈಡ್ರೈಡ್. ಉಗ್ರವಿಷ
arsine


logo