(ಪ್ರಾ) ವಲ್ಕವಂತ ವರ್ಗದ ಅಲ್ಪಗಾತ್ರ ಪ್ರಾಣಿಗಳ ಗಣ; ಚಪ್ಪಟೆ ದೇಹ; ಗಡಸು ಹೊದಿಕೆ ಇಲ್ಲ; ಕೆಲವು ಜಲಚರಿ, ಕೆಲವು ಭೂವಾಸಿ, ಕೆಲವು ಪರೋಪಜೀವಿ
amphipoda
ಆಂಫಿಬೊಲೈಟ್
(ಭೂವಿ) ಆಂಫಿಬೋಲ್ ಅಗತ್ಯ ಘಟಕವಾಗಿದ್ದು, ಫೆಲ್ಡ್‌ಸ್ಪಾರ್ ಜೊತೆಗೆ ಅನೇಕ ವೇಳೆ ಗಾರ್ನೆಟ್ ಬೆರೆತಿರುವ, ಒರಟು ಕಣಗಳಿಂದಾದ ಸ್ಫಟಿಕಾತ್ಮಕ ಶಿಲೆ
amphibolite
ಆಂಫಿಬೋಲ್‌ಗಳು
(ಭೂವಿ) ಶಿಲಾರೂಪಣೆಗೆ ಕಾರಣವಾದ ಕಪ್ಪು ಬಣ್ಣದ ಸಿಲಿಕೇಟ್‌ಗಳ ಪ್ರಮುಖ ಗುಂಪು. ಉದಾ: ಹಾರ್ನ್‌ಬ್ಲೆಂಡ್
amphiboles
ಆಂಫಿಯಾಸ್ಟರ್
(ಪ್ರಾ) ಮಯಾಸಿಸ್‌ನಿಂದ/ಮೈಟೊಸಿಸ್‌ನಿಂದ ಕೋಶ ವಿಭಜನೆ ಆಗುವ ವೇಳೆ ಪ್ರಕಟವಾಗುವ ಎರಡು ನಕ್ಷತ್ರ ಸದೃಶ ಕಾಯಗಳು, ಇವನ್ನು ಜೋಡಿಸುವ ಕದಿರು
amphiaster
ಆಂಬರ್‌ಗ್ರಿಸ್
(ಪ್ರಾ) ವಿಶಿಷ್ಟ ಜಾತಿಯ ಮೃತ ತಿಮಿಂಗಲದ ಕರುಳಿನಿಂದ ಪಡೆಯುವ ಬೂದು ಬಿಳಿ ಬಣ್ಣದ ಸುಗಂಧಯುಕ್ತ ಕೊಬ್ಬು ಪದಾರ್ಥ. ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಸ್ಥಾಯಿಕಾರಿಯಾಗಿ ಬಳಕೆ. ಪನ್ನಂಬರ
ambergris
ಆಂಬ್ರೋಸಿಯ
(ಸ) ಕೆಲವು ಬಗೆಯ ಜೀರುಂಡೆಗಳು ತಮ್ಮ ಆಹಾರವಾಗಿ ಕೃಷಿ ಮಾಡುವ ಮಿಶ್ರ ಜಾತಿಯ ಶಿಲೀಂಧ್ರಗಳು. ಸಾಮಾಜಿಕ ಜೇನ್ನೊಣಗಳು ಮರಿ ಹುಳುಗಳಿಗೆ ಉಣಿಸಲೋಸುಗ ಸಂಗ್ರಹಿಸುವ ಪುಷ್ಪ ಪರಾಗ
ambrosia
ಆಂಶಿಕ
(ಸಾ) ಸಂಕೀರ್ಣ ನಾದದ ಏಕಾವೃತ್ತಿ ಘಟಕಗಳ ಪೈಕಿ ಯಾವುದೇ ಒಂದು. ಸಂಗೀತದ ಹೆಚ್ಚಿನ ಸಂಕೀರ್ಣ ನಾದಗಳಲ್ಲಿ ಆಂಶಿಕಗಳು ಆಧಾರ ಶ್ರುತಿಯೊಂದನ್ನು ಕುರಿತು ಸಂಗತಾ ವೃತ್ತಿಗಳಾಗಿರುತ್ತವೆ. ಭಾಗಶಃ
partial
ಆಂಶಿಕ ಅವಕಲನ
(ಗ) ಒಂದಕ್ಕಿಂತ ಹೆಚ್ಚು ಚರಗಳು ಇರುವ ಸಮೀಕರಣ ಅಥವಾ ಫಲನವನ್ನು ನಿರ್ದಿಷ್ಟ ಚರದ ಹೊರತು ಉಳಿದವನ್ನು ಸ್ಥಿರಗಳೆಂದು ಭಾವಿಸಿ ನಡೆಸುವ ಅವಕಲನ ಪ್ರಕ್ರಿಯೆ. ಉದಾ: f(x,y,z)= ax2+by2+cz2+2hxy+2gyz+2fzx+lx+my+ nz+k ಫಲನವನ್ನು xನ ಹೊರತು y ಮತ್ತು zಗಳನ್ನು ಸ್ಥಿರಗಳೆಂದು ಭಾವಿಸಿ xನ್ನು ಕುರಿತು ಆಂಶಿಕವಾಗಿ ಅವಕಲಿಸಿದರೆ ದೊರೆಯುವ ಫಲ. ಪ್ರತೀಕ xನ್ನು ಕುರಿತು ಆಂಶಿಕ ಅವಕಲನ ಎಂಬುದನ್ನು ಸೂಚಿಸುತ್ತದೆ
partial differentiation
ಆಂಶಿಕ ಗ್ರಹಣ
(ಖ) ಯಾವುದೇ ಆಕಾಶಕಾಯದ ಬೆಳಕು ಇನ್ನೊಂದು ಆಕಾಶಕಾಯ ಅಡ್ಡ ಬರುವುದರಿಂದಾಗಿ ಭಾಗಶಃವಷ್ಟೆ ಅಗೋಚರ ಅಥವಾ ಮಸುಕಾಗುವುದು. ಖಂಡಗ್ರಹಣ. ನೋಡಿ : ಗ್ರಹಣ
partial eclipse
ಆಂಶಿಕ ಭಿನ್ನರಾಶಿ
(ಗ) ಒಂದು ಬೀಜ ವಾಕ್ಯದಲ್ಲಿ ಅಂಶ ಹಾಗೂ ಛೇದಗಳಲ್ಲಿ ಬಹುಪದೋಕ್ತಿಗಳಿದ್ದು, ಆ ಬೀಜ ವಾಕ್ಯವು ಛೇದದ ಅಪವರ್ತನಗಳನ್ನು ಛೇದಗಳಾಗಿ