logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಷ್ಟಿಫಲ
(ಸ) ಸಿಹಿ ತಿರುಳು, ಅದರೊಳಗೆ ತುಸು ಚಪ್ಪಟೆ ಮೊನಚು ಓಟೆ ಇರುವ ಒಂದು ಬಗೆಯ ದುಂಡು ಹಣ್ಣು. ಉದಾ: ಪ್ಲಮ್, ಮಾವು, ಆಲಿವ್, ಪೀಚ್
drupe

ಅಸಂಗ ಜನನ
(ಜೀ) ಲೈಂಗಿಕ ಸಮ್ಮಿಲನವಿಲ್ಲದೇ ರೂಪಿತವಾದ ಬೀಜಗಳಿಂದ ಸಂತಾನೋತ್ಪತ್ತಿ. ಕಾಯಕ ಪ್ರಸಾರವನ್ನೂ ಒಳಗೊಂಡಂತೆ ಯಾವುದೇ ರೂಪದ ಅಲೈಂಗಿಕ ಸಂತಾನೋತ್ಪತ್ತಿ. ಅಲೈಂಗಿಕೋತ್ಪತ್ತಿ
apomixis

ಅಸಂಗತ
(ಸಾ) ಯಾವುದೇ ದೋಲನ ವ್ಯವಸ್ಥೆ ಯಲ್ಲಿ ಪುನರ್‌ಸ್ಥಾಪಕ ಬಲವು ವಿಸ್ಥಾಪನೆಯೊಂದಿಗೆ ಅರೇಖೀಯ ವಾಗಿದ್ದು ಚಲನೆಯು ಸರಳ ಸಂಗತವಾಗಿಲ್ಲದೆ ಇರುವುದು
anharmonic

ಅಸಂಗತ ಪ್ರಸರಣ
(ಭೌ) ಪ್ರಬಲ ಅವಶೋಷಣ ಪಟ್ಟೆ ಇದ್ದು ವಕ್ರೀಭವನಾಂಕದ ಮೌಲ್ಯ ಪಟ್ಟೆಯ ದೀರ್ಘ ತರಂಗ ಭಾಗದಲ್ಲಿ ಅಸಾಮಾನ್ಯವಾಗಿ ಉಚ್ಚವೂ ಹ್ರಸ್ವ ತರಂಗ ಭಾಗದಲ್ಲಿ ಅಸಾಮಾನ್ಯವಾಗಿ ನಿಮ್ನವೂ ಆಗಿರುವ ಒಂದು ಮಾಧ್ಯಮ ಪ್ರದರ್ಶಿಸುವ ಪ್ರಸರಣ ಬಗೆ; ಎಂದೇ ಇಂಥ ಒಂದು ಪದಾರ್ಥದಿಂದ ತಯಾರಿಸಿದ ಅಶ್ರಗ ಮೂಡಿಸುವ ರೋಹಿತದಲ್ಲಿ ಬಣ್ಣಗಳು ಅವುಗಳ ಎಂದಿನ ಕ್ರಮದಲ್ಲಿರುವುದಿಲ್ಲ
anomalous dispersion

ಅಸಂಗತತೆ
(ಸಾ) ನಿರ್ಧಾರಿತ ಮೌಲ್ಯದಿಂದ ಚ್ಯುತಿಗೊಂಡ ಮೌಲ್ಯ. ಅಸಾಂಗತ್ಯ
anomaly

ಅಸಂಪೀಡನಶೀಲತೆ
(ಭೌ) ಒತ್ತಡ ಹೆಚ್ಚಿದಾಗಲೂ ವಸ್ತು ತನ್ನ ಮೂಲ ಗಾತ್ರ ಉಳಿಸಿಕೊಂಡಿರುವ ಗುಣ. ಅಸಂಕೋಚ್ಯತೆ, ಅಸಂಪೀಡ್ಯತೆ
incompressibility

ಅಸಮಂಜಸ
(ವೈ) ಎರಡು ಅಥವಾ ಹೆಚ್ಚಿನ ವಸ್ತುಗಳನ್ನು ಒಟ್ಟಿಗೆ ಇರಿಸಿದಾಗ ಒಂದು ಇನ್ನೊಂದರ ಜೊತೆ ವರ್ತಿಸಿ ಅನಪೇಕ್ಷಿತ ಪರಿಣಾಮ ಉಂಟುಮಾಡಬಹುದು ಅಥವಾ ಒಂದರ ಪರಿಣಾಮವನ್ನು ಮತ್ತೊಂದು ತೊಡೆದುಹಾಕಬಹುದು. ಉದಾ : ಎ ಗುಂಪಿನ ರಕ್ತವನ್ನು ಬಿ ಗುಂಪಿನವರಿಗೆ ನೀಡಿದಾಗ, ಎರಡರ ನಡುವೆ ಅಪಾಯಕಾರೀ ರಾಸಾಯನಿಕ ಕ್ರಿಯೆ ನಡೆದು ಮಾರಕ ಪರಿಣಾಮವನ್ನು ಬೀರಬಹುದು. ೨. ಆತಂಕ ಹಾಗೂ ಸಂಘರ್ಷಗಳಿಗೆ ಅವಕಾಶ ಕೊಡದೆ ಒಟ್ಟಿಗೆ ಇರಲಾಗದ ಸ್ಥಿತಿ
incompatible

ಅಸಮಂಜಸತೆ
(ಗ) ನೋಡಿ: ವಿರೋಧ, ವ್ಯಾಘಾತ
contradiction

ಅಸಮಕರ್ಷಕ
(ರ, ವೈ) ನೋಡಿ: ಸಮಕರ್ಷಕ
anisotonic

ಅಸಮಕಾಲೀಯ
(ಸಾ) ಪರಸ್ಪರ ಲಯ ಹೊಂದದ, ಏಕಕಾಲಿಕವಲ್ಲದ. ಭಿನ್ನಕಾಲಿಕವಾದ
asynchronous


logo