logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಶ್ರು
(ಪ್ರಾ) ನೋಡಿ : ಕಂಬನಿ
tear

ಅಶ್ರು ಅನಿಲಗಳು
(ರ) ಕಣ್ಣೀರು ತರಿಸುವ ಅನಿಲಗಳು. ಕಡಿಮೆ ಸಾರತೆಯಲ್ಲೂ ಕಣ್ಣುಗಳಿಗೆ ಉರಿ ಉಂಟುಮಾಡಿ ಗೋಚರತೆಯನ್ನು ದುಸ್ಸಾಧ್ಯವಾಗಿಸುತ್ತವೆ. ಗಲಭೆ-ಗುಂಪು ಚದುರಿಸಲು ಸಾಮಾನ್ಯವಾಗಿ ಬಳಕೆ. ಅಶ್ರುವಾಯು
tear gases

ಅಶ್ರುನಾಳ
(ವೈ) ಉನ್ನತ ವರ್ಗದ ಪ್ರಾಣಿಗಳಲ್ಲಿ ಕಣ್ಣಿನ ಒಳಕೋನದಿಂದ ಮೂಗಿನ ಒಳಕ್ಕೆ ಹೋಗುವ ಮತ್ತು ಅಶ್ರುಗ್ರಂಥಿ ಉತ್ಪಾದಿಸುವ ದ್ರವವನ್ನು ಬಸಿಯುವ ನಾಳ
lachrymal duct

ಅಶ್ವ ಅಕ್ಷಾಂಶಗಳು
(ಪವಿ) ಸರಿಸುಮಾರು ೩೦0-೩೫0 ಉತ್ತರ ಹಾಗೂ ದಕ್ಷಿಣ ಸಾಗರಗಳ ಮೇಲಿನ ಅಕ್ಷಾಂಶಗಳ ಪಟ್ಟಿ. ಇಲ್ಲಿ ಮಾರುತ ಪ್ರವಾಹ ಬಲುಮಟ್ಟಿಗೆ ಪ್ರಶಾಂತ ಅಥವಾ ಅತ್ಯಂತ ಲಘು. ಹವೆ ಬಿಸಿ ಹಾಗೂ ಶುಷ್ಕ. ನೋಡಿ : ವಾಣಿಜ್ಯ ಮಾರುತ
horse latitudes

ಅಶ್ವ ಸಾಮರ್ಥ್ಯ
(ಭೌ) h.p. ಯಂತ್ರಶಾಸ್ತ್ರದಲ್ಲಿ ಸಾಮರ್ಥ್ಯದ ಬ್ರಿಟಿಷ್ ಏಕಮಾನ. ಸೆಕೆಂಡಿಗೆ ೫೫೦ ಅಡಿ-ಪೌಂಡ್. ೧ h.p.=೭೪೫.೭ ವಾಟ್
horse power

ಅಷ್ಟಕ
(ರ) ಜಡಾನಿಲವೊಂದರ ಪರಮಾಣುವಿನ ಬಾಹ್ಯ ಎಲೆಕ್ಟ್ರಾನ್ ಚಿಪ್ಪನ್ನು ರೂಪಿಸುವ ಎಂಟು ಎಲೆಕ್ಟ್ರಾನ್‌ಗಳ ಸ್ಥಿರ ಗುಂಪು. (ಹೀಲಿಯಮ್ ಇದಕ್ಕೆ ಅಪವಾದ. ಇದರ ಏಕೈಕ ಎಲೆಕ್ಟ್ರಾನ್ ಚಿಪ್ಪಿನಲ್ಲಿ ಎರಡು ಎಲೆಕ್ಟ್ರಾನ್‌ಗಳಷ್ಟೆ ಇವೆ). ಧಾತುಗಳ (ಹೈಡ್ರೊಜನ್ ಬಿಟ್ಟು) ಪರಮಾಣುಗಳು ಸಂಯುಕ್ತಗಳನ್ನು ರೂಪಿಸಲು ಜೊತೆಗೂಡಿದಾಗ ತಮ್ಮಲ್ಲಿರುವ ಎಲೆಕ್ಟ್ರಾನ್‌ಗಳನ್ನು ದಾನಮಾಡುವ ಅಥವಾ ಹಂಚಿಕೊಳ್ಳುವ ಮೂಲಕ ಹಾಗೆ ಮಾಡುತ್ತವೆ ಮತ್ತು ಜೊತೆಗೂಡಿದ ಒಂದೊಂದು ಪರಮಾಣುವೂ ತನ್ನ ಬಾಹ್ಯ ಚಿಪ್ಪಿನಲ್ಲಿ ಒಂದು ಪೂರ್ಣಗೊಂಡ ಅಷ್ಟಕದಿಂದ ಕೂಡಿರುವಂತೆ ಜೊತೆಗೂಡುತ್ತದೆ
octet

ಅಷ್ಟಭುಜ
(ಗ) ಸಮನಾದ ಎಂಟು ಕೋನಗಳೂ ಎಂಟು ಭುಜಗಳೂ ಇರುವ ಸಮತಲಾಕೃತಿ
octagon

ಅಷ್ಟಮಾನ ಪದ್ಧತಿ
(ಗ) ಸಂಖ್ಯೆ ೮ ಆಧಾರ ಸಂಖ್ಯೆಯಾಗಿರುವ ಗಣನ ಪದ್ಧತಿ. ಇದರಲ್ಲಿ ೦ಯಿಂದ ೭ರವರೆಗಿನ ಎಂಟು ಪ್ರತೀಕಗಳಿರುತ್ತವೆ. ೭ರ ಬಳಿಕ ೧೦, ೧೧,....೧೭, ೨೦, ೨೧...... ಈ ರೀತಿ ಸಾಗುತ್ತದೆ. ಈ ಸಂಖ್ಯೆಗಳನ್ನು ೧-೦, ೧-೧, ೨-೦, ೨-೧ ಇತ್ಯಾದಿಯಾಗಿ ಓದಬೇಕು
octal number system

ಅಷ್ಟಮುಖಿ
(ಗ) ಪ್ರತಿಯೊಂದು ಮುಖವೂ ಸಮಭುಜ ತ್ರಿಭುಜವಾಗಿದ್ದು ಎಂಟು ಮುಖಗಳುಳ್ಳ ಬಹುಫಲಕ
octahedron

ಅಷ್ಟಿ
(ಪ್ರಾ) ೧. ಹಕ್ಕಿ ಮೊಟ್ಟೆಯ ಚಿಪ್ಪಿನ ತೆಳು ಒಳಾವರಣ. ೨. ಮೇಲುವರ್ಗದ ಕಶೇರುಕಗಳಲ್ಲಿ ಪ್ರಮಸ್ತಿಷ್ಕದ ಅಂಡಾಕಾರ ಕೇಂದ್ರದ ಪಾರ್ಶ್ವಭಾಗ. (ಸ) ಮಾವಿನ ಹಣ್ಣಿನಲ್ಲಿರುವಂತೆ ಬೀಜದ ಸುತ್ತಲಿನ ಗಡಸು ಆವರಣ, ಓಟೆ
putamen


logo