(ಭೌ) ಸೂಕ್ಷ್ಮದರ್ಶಕ ಅಥವಾ ದೂರದರ್ಶಕದ ಮೂಲಕವೂ ವಿವರಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲಾಗದ. ಭಾಗಗಳಾಗಿ ವಿಂಗಡಿಸಲಾಗದ
irresolvable
ಅವಿಲೇಯ
(ರ) ವಿಲೀನವಾಗದೇ ಇರುವುದು. ಬಹುತೇಕ ಅವಿಲೇಯ ಲವಣಗಳು ಸೀಮಿತವಾದರೂ ನಿರ್ದಿಷ್ಟ ವಿಲೇಯತೆಯ ಗುಣದಿಂದ ಕೂಡಿರುತ್ತವೆ
insoluble
ಅವ್ಯತ್ಯಸ್ತ
(ಗ) ಬೈಜಿಕ ಸಮೀಕರಣದಲ್ಲಿಯ ಸ್ಥಿರ ಸಹಾಂಕಗಳ ನಡುವಿನ ಒಂದು ವಿಶೇಷ ಗುಣ. ಅಕ್ಷಗಳ ಸರಳ/ಆವರ್ತನ ಚಲನೆಗಳಲ್ಲಿ ಇದು ವ್ಯತ್ಯಯವಾಗುವುದಿಲ್ಲ. ಉದಾ: ax2+bxy+cy2+dx+ey+f=0 ಸಮೀಕರಣ ಕುರಿತಂತೆ a+c ಮತ್ತು b2-4ac ಉಕ್ತಿಗಳ ಬೆಲೆಗಳು. ಎಂದೇ ಇವುಗಳಿಗೆ ಮೇಲಿನ ಸಾರ್ವತ್ರಿಕ ದ್ವಿಘಾತೀಯ ಸಮೀಕರಣದ ಅವ್ಯತ್ಯಸ್ತಗಳೆಂದು ಹೆಸರು. ಅಚರ. ನಿಶ್ಚರ
invariant
ಅವ್ಯಾಕೃತ ದ್ರವ್ಯ
(ರ) ರಾಸಾಯನಿಕ ಧಾತುಗಳು ಇದರಿಂದ ಏರ್ಪಟ್ಟಿರುವುವೆಂದು ಊಹಿಸುವ ಆದ್ಯ ವ್ಯತ್ಯಾಸ ರಹಿತ ದ್ರವ್ಯ
protyle
ಅಶುದ್ಧತೆ
(ರ) ಶುದ್ಧ ವಸ್ತುವಿನಲ್ಲಿ ಅನಪೇಕ್ಷಿತ ಪರಕೀಯ ಪದಾರ್ಥ ಸೇರಿರುವುದು. (ಭೌ) ಅಪೇಕ್ಷಿತ ಮಾದರಿಯ ವಾಹಕತೆಯನ್ನು ಪಡೆಯಲು ಅರೆವಾಹಕಕ್ಕೆ (ಸಿಲಿಕಾನ್ ಅಥವಾ ಜರ್ಮೇನಿಯಮ್) ಸಣ್ಣ ಪ್ರಮಾಣಗಳಲ್ಲಿ ಪರಕೀಯ ಪದಾರ್ಥ (ಇಂಡಿಯಮ್, ಆರ್ಸೆನಿಕ್, ಗ್ಯಾಲಿಯಮ್, ಸೀಸ, ಲಿಥಿಯಮ್, ತವರ ಇತ್ಯಾದಿ)ಗಳನ್ನು ವಿಸರಿಸಿರುವುದು. ಇದು ಅರೆವಾಹಕಕ್ಕೆ ಮುಕ್ತ ಎಲೆಕ್ಟ್ರಾನ್‌ಗಳನ್ನು ಒದಗಿಸುತ್ತದೆ ಅಥವಾ ಅದರಿಂದ ಎಲೆಕ್ಟ್ರಾನ್‌ಗಳನ್ನು ಸ್ವೀಕರಿಸುತ್ತದೆ
impurity
ಅಶೋಕ ವೃಕ್ಷ
(ಸ) ಫ್ಯಾಬೇಸೀ ಕುಟುಂಬಕ್ಕೆ ಸೇರಿದ ಮರ. ಸರಕ ಅಶೋಕ ವೈಜ್ಞಾನಿಕ ನಾಮ. ಇದರ ತೊಗಟೆಯಲ್ಲಿ ಇರುವ ಗ್ಯಾಲಿಕ್‌ಆಮ್ಲ ಔಷಧಿಗಳಿಗೆ ಉಪಯುಕ್ತ. ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಈ ವೃಕ್ಷಕ್ಕೆ ಮುಖ್ಯ ಸ್ಥಾನವಿದೆ
saraca
ಅಶ್ಮರಿ
(ವೈ) ಕೆಲವು ವ್ಯಾಧಿಗಳ ಕಾರಣ ದೇಹದಲ್ಲಿ ರೂಪುಗೊಳ್ಳುವ, ಸಾಮಾನ್ಯವಾಗಿ ನಿರವಯವ ಪದಾರ್ಥಗಳ, ಹರಳು ಅಥವಾ ದೊಡ್ಡ ಕಣ. ಉದಾ: ಪಿತ್ತಕೋಶದಲ್ಲಿ ಮೈದಳೆಯುವ ಕಲ್ಲು. ಪಿತ್ತಾಶ್ಮರಿ
concretion
ಅಶ್ಮರೀಶಾಸ್ತ್ರ
(ವೈ) ಮೂತ್ರಪಿಂಡ ಹಾಗೂ ಮೂತ್ರಕೋಶ ಗಳಲ್ಲಿ ಹರಳುಗಳು ರೂಪುಗೊಳ್ಳುವ ಬಗೆಯನ್ನು ಅಧ್ಯಯನ ಮಾಡುವ ಶಾಸ್ತ್ರ. ಕಂಕರವಿಜ್ಞಾನ (ಭೂವಿ) ಕಲ್ಲುಬಂಡೆಗಳ ರಚನೆ, ರಾಸಾಯನಿಕ ಸಂಯೋಜನೆ ಮೊದಲಾದವನ್ನು ಕುರಿತ ಅಧ್ಯಯನ. ಶಿಲಾಶಾಸ್ತ್ರ
lithology
ಅಶ್ರಗ
(ಗ) ಎರಡು ಸಮಾಂತರ ಸರ್ವಸಮ ಬಹು ಭುಜಗಳು ಆಧಾರತಲಗಳಾಗಿದ್ದು ಎಲ್ಲ ಫಲಕಗಳೂ ಸಮಾಂತರ ಚತುರ್ಭುಜ ಗಳಾಗಿರುವ ಬಹುಫಲಕ. ಆಧಾರತಲಗಳು ತ್ರಿಭುಜ ಗಳಾದರೆ - ತ್ರಿಕೋಣೀಯ ಅಶ್ರಗ. ಪಟ್ಟಕ. (ಭೌ) ವಿಶೇಷವಾಗಿ ದ್ಯುತಿ ವಿಜ್ಞಾನ ದಲ್ಲಿ: ಸಾಧಾರಣವಾಗಿ ತ್ರಿಕೋಣೀಯ ಆಧಾರತಲ ಗಳಿರುವ ಗಾಜಿನ ಇಲ್ಲವೇ ಇತರ ಯಾವುದೇ ಪದಾರ್ಥದಿಂದ ತಯಾರಿಸಿದ ಗಟ್ಟಿ. ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಪ್ರಸರಿಸಲು ಅಥವಾ ತಲೆಕೆಳಗಾದ (ಪ್ರತೀಪಿತ/ಪ್ರತಿಲೋಮಿತ) ಪ್ರತಿಬಿಂಬ ಸ್ಥಾಪಿಸಲು ಬಳಕೆ. ನೋಡಿ: ನಿಕಲ್ ಅಶ್ರಗ
prism
ಅಶ್ರಗ ದಿಕ್ಸೂಚಿ
(ತಂ) ಮೋಜಣಿಯಲ್ಲಿ , ಒಂದು ವಸ್ತುವಿನ ಕೋನವನ್ನು ನೇರವಾಗಿ ಅಳೆಯುವ ಸಲಕರಣೆ. ಇದರಲ್ಲಿ ವಸ್ತು ದೃಷ್ಟಿಪಥದಲ್ಲಿರುವಾಗಲೇ ಅದರ ಕೋನಾಂತರದ ಅಳತೆಯ ಗುರುತನ್ನು ಓದಲು ಸಾಧ್ಯವಾಗುವಂತೆ ಅಶ್ರಗವನ್ನು ಅಳವಡಿಸಲಾಗಿರುತ್ತದೆ