(ಸ) ದ್ವಿದಳೀ/ಶಿಂಬೆ ಸಸ್ಯಗಳ ಒಂದು ಜಾತಿ. (ವೈ) ಕಾಲು ಹರಡಿನ ಮೂಳೆ. ಗುಲ್ಫಾಸ್ಥಿ
astragalus
ಅಸ್ತರಿ
(ತಂ) ೧. ನಾಲೆಗಳಲ್ಲಿ ಪಕ್ಕಗಳಿಂದ ನೀರು ಸೋರಿ ಹೋಗದಂತೆ ಜೇಡಿ ಅಥವಾ ಸಿಮೆಂಟಿನಿಂದ ಬದಿಗಳನ್ನು ನೊರೆಯುವುದು. ೨. ಪುಸ್ತಕದ ರಟ್ಟು ಕಟ್ಟಿದ ಮೇಲೆ ಅದು ಹರಿಯದಂತೆ ಗಟ್ಟಿ ಕಾಗದವನ್ನು ಹಿಂಬದಿಗೆ ಅಂಟಿಸುವ ಕ್ರಿಯೆ
lining
ಅಸ್ತವ್ಯಸ್ತತೆ
(ಭೌ) ಪ್ರಾರಂಭ ಸ್ಥಿತಿಯ ವ್ಯತ್ಯಯಗಳಿಗೆ ಅತ್ಯಂತ ಸಂವೇದನಾಶೀಲವಾಗಿರುವ ವ್ಯವಸ್ಥೆಯೊಂದರಲ್ಲಿ ಆವರ್ತನಶೀಲ ಅಲ್ಲದ ಮತ್ತು ಮುನ್ಸೂಚಿಸಲು ಸಾಧ್ಯವಾಗದ ವರ್ತನೆ. ದ್ರವ-ಅನಿಲಗಳ ಪ್ರಕ್ಷುಬ್ದ ಹರಿವು, ದೀರ್ಘವ್ಯಾಪ್ತಿಯ ಹವಾಮಾನ, ಹೃದಯ ಬಡಿತದ ಕ್ರಮರಹಿತ ಲಯ - ಇವು ಅಸ್ತವ್ಯಸ್ತತೆಯನ್ನು ಪ್ರದರ್ಶಿಸುವ ಕೆಲವು ವಿದ್ಯಮಾನಗಳು. ಈ ಸಿದ್ಧಾಂತವನ್ನು ವಿಜ್ಞಾನದ ಶಾಖೆಗಳಲ್ಲಿನ ಪ್ರಕ್ರಿಯೆಗಳಿಗೂ ಗ್ರಹಗತಿ ವಿಜ್ಞಾನ, ಭೌತವಿಜ್ಞಾನ ದಲ್ಲಿ ವಿದ್ಯುತ್ ಆಂದೋಲನ ಇತ್ಯಾದಿಗಳಿಗೂ ವಿಸ್ತರಿಸಲಾಗಿದೆ
chaos
ಅಸ್ತಿತ್ವ ಪ್ರಮೇಯ
(ಗ) ನಿರ್ದಿಷ್ಟ ಬಗೆಯ ಒಂದು ವಸ್ತುವಾದರೂ ಇದೆಯೆಂಬ ವಾದ. ಉದಾ: ೧. ಮಿಶ್ರ ಸಹಾಂಕಗಳಿರುವ ಮತ್ತು ಕನಿಷ್ಠ ೧ ಡಿಗ್ರಿಯದಾದ ಯಾವುದೇ ಬಹುಪದಿ P ಕುರಿತಂತೆ P(z) = 0 ಆಗುವಂತೆ ಕನಿಷ್ಠ ಒಂದು ಮಿಶ್ರಸಂಖ್ಯೆಯಾದರೂ ಅಸ್ತಿತ್ವದಲ್ಲಿದೆ. ೨. n ಅeತಗಳಲ್ಲಿರುವ
existence theorem
ಅಸ್ಥಾನಿಕ
(ವೈ) ಅಂಗವನ್ನು ಕುರಿತು ಬಳಸುವ ಪದ. ಹುಟ್ಟಿನಿಂದ ಅಥವಾ ಬೇರಾವುದೇ ಕಾರಣದಿಂದ ಅಂಗ ತನ್ನ ಸಹಜ ಸ್ಥಾನದಿಂದ ವಿಚಲಿತವಾಗಿರುವುದು
ectopia
ಅಸ್ಥಾಯಿ
(ಭೌ) ನಿರ್ದಿಷ್ಟ ಸ್ಥಾನ ಅಥವಾ ದಿಶೆ ತಳೆಯುವ ಅಥವಾ ಆಯುವ ಪ್ರವೃತ್ತಿ ಇಲ್ಲದಿರುವುದು
astatic
ಅಸ್ಥಾಯಿ
(ರ) ಸುಲಭವಾಗಿ ಬದಲಿಸಲು ಅಥವಾ ಪಲ್ಲಟಿಸಲು ಸಾಧ್ಯವಿರುವ ಪರಮಾಣು ಅಥವಾ ಪರಮಾಣು ಗುಂಪು ಇರುವ ರಾಸಾಯನಿಕ ಸಂಯುಕ್ತ. ಪರಿವರ್ತಿ
labile
ಅಸ್ಥಾಯಿ ಗ್ಯಾಲ್ವನೊಮೀಟರ್
(ಭೌ) ಭೂಕಾಂತಕ್ಷೇತ್ರದ ಪರಿಣಾಮ ರದ್ದುಗೊಳ್ಳುವಂತೆ ಎರಡು ಚಲನಶೀಲ ಕಾಂತ ಇರುವ ಸಂವೇದನಾಶೀಲ ಉಪಕರಣ
astatic galvanometer
ಅಸ್ಥಿ ಅನ್ವೇಷಕ
(ರ) ಕ್ಯಾಲ್ಸಿಯಂ ಸದೃಶ ವಿಕಿರಣಪಟು ಧಾತು: ಸ್ಟ್ರಾನ್ಷಿಯಮ್, ರೇಡಿಯಮ್, ಪ್ಲೂಟೋನಿಯಮ್. ಇದು ಮೂಳೆಯೊಳಹೊಕ್ಕು ಅಲ್ಲಿಂದಲೂ ವಿಕಿರಣ ಬೀರಬಲ್ಲದು
bone seeker
ಅಸ್ಥಿ ವಿಜ್ಞಾನ
(ವೈ) ಮೂಳೆಗಳ ರಚನೆ ಕುರಿತು ಅಧ್ಯಯನ ಮಾಡುವ ವೈದ್ಯ ವಿಜ್ಞಾನ ವಿಭಾಗ