logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಸಮಕಾಲೀಯ ದತ್ತ ಪ್ರೇಷಣೆ
(ಕಂ) ಒಂದು ಪ್ರತೀಕದ ಪ್ರೇಷಣೆಯ ಅಂತ್ಯವು ಮುಂದಿನ ಪ್ರತೀಕದ ಪ್ರೇಷಣೆಯನ್ನು ಪ್ರವರ್ತಿಸುವಂತೆ ದತ್ತಗಳನ್ನು ಪ್ರೇಷಿಸುವುದು
asynchronous data transmission

ಅಸಮತೆ
(ಗ) ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳುವುದು. aಯು bಗಿಂತ ದೊಡ್ಡದು ಎನ್ನುವುದನ್ನು ಚಿಹ್ನೆಯ ಬಳಕೆಯಿಂದ ಹೀಗೆ ಬರೆಯಲಾಗುವುದು: a>b. ಹಾಗೆಯೇ bಯು aಗಿಂತ ಚಿಕ್ಕದು ಎನ್ನುವುದನ್ನು b
inequality

ಅಸಮತೋಲ
(ವೈ) ಕಣ್ಣಿನ ಸ್ನಾಯುಗಳ ನಡುವೆ ಅಥವಾ ಅಂತಃಸ್ರಾವಕ ಗ್ರಂಥಿ ಕ್ರಿಯೆಗಳ ನಡುವೆ ಅಥವಾ ಅನೈಚ್ಛಿಕ ನರಮಂಡಲ ಭಾಗಗಳ ನಡುವೆ ಸಮತೋಲ ಇಲ್ಲದಿರುವಿಕೆ
imbalance

ಅಸಮದೃಷ್ಟಿ
(ಭೌ) ವಕ್ರಾಕೃತಿ ದರ್ಪಣ, ಮಸೂರ ಅಥವಾ ಮಸೂರ ವ್ಯವಸ್ಥೆಯಲ್ಲಿಯ ದೋಷ: ಬಿಂದುವಿನ ಪ್ರತಿಬಿಂಬವಾಗಿ ಬಿಂದುವೇ ಕಾಣಬೇಕಾದಲ್ಲಿ ಎರಡು ಸಣ್ಣ ಗೆರೆಗಳು ಕಾಣುತ್ತವೆ. (ವೈ) ದೃಷ್ಟಿಪಟಲದ ವಕ್ರತೆಯಲ್ಲಿ ವ್ಯತ್ಯಯವಾಗಿದ್ದಾಗ ಬೆಳಕಿನ ಕಿರಣಗಳು ಏಕಕೇಂದ್ರದಲ್ಲಿ ಕೂಡದಿರುವ ದೋಷ. ಅಬಿಂದುಕತೆ, ಕೋಚುದೃಷ್ಟಿ
astigmatism

ಅಸಮದೃಷ್ಟಿರಹಿತ ಮಸೂರ
(ತಂ) ದೃಕ್ ಸಲಕರಣೆಗಳಲ್ಲಿ ಬಳಸುವ ವಿಶಿಷ್ಟ ವಸ್ತುಕಾಚ. ಇದರಲ್ಲಿ ಅಬಿಂದುಕತೆ ಯನ್ನೂ ಒಳಗೊಂಡಂತೆ ಎಲ್ಲ ವಿರೂಪನಗಳನ್ನೂ ಬಹುಮಟ್ಟಿಗೆ ಕಡಿಮೆ ಮಾಡಲಾಗಿರುತ್ತದೆ. (ವೈ) ಅಸಮ ದೃಷ್ಟಿದೋಷ ಸರಿಪಡಿಸು ವಂತೆ ರಚಿಸಿದ ಕನ್ನಡಕದ ಮಸೂರ. ಇದು ಲಂಬೀಯ ಹಾಗೂ ಕ್ಷಿತಿಜೀಯ ತಲಗಳಲ್ಲಿ ವಿಭಿನ್ನ ವಕ್ರತಾ ತ್ರಿಜ್ಯಗಳಿಂದ ಕೂಡಿರುತ್ತದೆ
anastigmatic lens

ಅಸಮನ್ವಯ
(ವೈ) ವ್ಯಕ್ತಿ ಯಾವುದೇ ಕ್ರಿಯೆ ಮಾಡುವಾಗ ವಿವಿಧ ಸ್ನಾಯುಗಳ ಚಲನೆಗಳನ್ನು ಯುಕ್ತವಾಗಿ ಸಂಯೋಜಿಸಲು ಅಸಮರ್ಥನಾಗಿರುವುದು. ಇದರಿಂದಾಗಿ ಸ್ನಾಯುವೃಂದಗಳು ಅನ್ಯೋನ್ಯವಾಗಿ ಕಾರ್ಯನಿರ್ವಹಿಸುವ ಬದಲು ಒಂದೊಂದೂ ಸ್ವತಂತ್ರವಾಗಿ ವರ್ತಿಸತೊಡಗಿ ಅಪೇಕ್ಷಿತ ಫಲಿತಾಂಶ ಒದಗದು
incoordination

ಅಸಮಪರ್ಣಿ
(ಸ) ಒಂದೇ ಕಾಂಡದಲ್ಲಿ ವಿಭಿನ್ನ ಅಳತೆ ಹಾಗೂ ಆಕಾರಗಳ ಎಲೆಗಳಿರುವ
anisophyllous

ಅಸಮಭಾಜ್ಯ ರಾಶಿಗಳು
(ಗ) ಏಕಭಾಜಕವಿರದ ಸಂಖ್ಯೆಗಳ ಗಣ. ಉದಾ : ೫, ೧೪, ೨೮, ೩೫. ಇವೆಲ್ಲವುಗಳಿಗೂ ಒಂದು ಸಾಮಾನ್ಯ ಅಪವರ್ತನ ಇಲ್ಲ. ಅನಪವರ್ತ್ಯ ರಾಶಿಗಳು. ನೋಡಿ: ಸಮಭಾಜ್ಯ ರಾಶಿಗಳು
incommensurable quantities

ಅಸಮಭುಜೀಯ ತ್ರಿಕೋನ
(ಗ) ಯಾವ ಎರಡು ಭುಜಗಳೂ ಸಮವಾಗಿರದ ತ್ರಿಕೋನಾಕೃತಿ
scalene triangle

ಅಸಮಮಾಪನೀಯ
(ಭೌ) ಎಲ್ಲ ದಿಶೆಗಳಲ್ಲಿಯೂ ಅಳತೆ ಒಂದೇ ಆಗಿರದ (ಮುಖ್ಯವಾಗಿ ಸ್ಫಟಿಕಗಳಲ್ಲಿ)
anisometric


logo