(ಜೀ) ಪ್ರಾಣಿಗಳ ಅಥವಾ ಸಸ್ಯಗಳ ಅಂಗಗಳ ಬಗೆಗೆ ವಿಶೇಷ ಅಧ್ಯಯನ ಮಾಡುವ ವಿಜ್ಞಾನ ವಿಭಾಗ
organology
ಅವರೋಹಣ ಸಂಪಾತ
(ಖ) ಭೂಮಿಯನ್ನು ಪರಿಭ್ರಮಿಸುತ್ತಿರುವ ಯಾವುದೇ ಉಪಗ್ರಹ ವಿಷುವದ್ ವೃತ್ತವನ್ನು ಉತ್ತರದಿಂದ ದಕ್ಷಿಣಕ್ಕೆ ದಾಟುವ ಬಿಂದು. ನೀಚ ಸಂಪಾತ. ಕೇತು. ನೋಡಿ: ಆರೋಹಣ ಸಂಪಾತ
descending node
ಅವರೋಹಿ ಕ್ರಮ
(ಗ) ಇಳಿಕ್ರಮದಲ್ಲಿರುವ ಸಂಖ್ಯಾಶ್ರೇಣಿ. (ವೈ) ಶರೀರದ ಮುಂಭಾಗದಿಂದ ಹಿಂಭಾಗದ ಕಡೆಗೆ ಅಥವಾ ತಲೆಭಾಗದಿಂದ ಬಾಲ ಭಾಗದ ಕಡೆಗೆ ಹಾಯುವ. ಅವರೋಹಣ ಕ್ರಮ
descending order
ಅವರ್ಣಕ ಅಶ್ರಗ
(ಭೌ) ಕನಿಷ್ಠ ಪ್ರಸರಣವೂ ಗರಿಷ್ಠ ವಿಚಲನೆಯೂ ಇರುವ ಅಶ್ರಗ. ಬೆಳಕಿನ ಕಿರಣವನ್ನು ರೋಹಿತದ ವರ್ಣಗಳಾಗಿ ವಿಭಜಿಸದೆ ಅದನ್ನು ದಿಕ್ಚ್ಯುತಿ ಗೊಳಿಸುವಂತೆ ವಿವಿಧ ವಕ್ರೀಭವನಾಂಕಗಳ ಗಾಜುಗಳ ಎರಡು ಅಥವಾ ಹೆಚ್ಚು ಅಶ್ರಗಗಳನ್ನು ಒಟ್ಟುಗೂಡಿಸಿ ರಚಿಸಿದ ಅಶ್ರಗ
achromatic prism
ಅವರ್ಣಕ ಮಸೂರ
(ಭೌ) ವರ್ಣ ವಿಪಥನ ಕನಿಷ್ಠ ಮಟ್ಟದಲ್ಲಿರುವಂತೆ ವಿಭಿನ್ನ ರೀತಿಯ ಗಾಜುಗಳಿಂದ ತಯಾರಿಸಲಾದ ವಿಭಿನ್ನ ನಾಭಿ ದೂರಗಳ ಎರಡು ಘಟಕ - ಮಸೂರಗಳನ್ನು (ಒಂದು ಅಭಿಸರಣ, ಇನ್ನೊಂದು ಅಪಸರಣ) ಒಟ್ಟುಗೂಡಿಸಿ ರಚಿಸಿದ ಮಸೂರ
achromatic lens
ಅವಶಿಷ್ಟ
(ಭೂವಿ) ಭೂಮಿಯ ಮೇಲೆ ಪರಿಸ್ಥಿತಿಗಳು ತುಂಬ ಭಿನ್ನ ವಾಗಿದ್ದಾಗ ಹುಟ್ಟಿ ತಮ್ಮ ಜೊತೆ- ಪ್ರಭೇದಗಳು ಅಸ್ತಿತ್ವ ಕಳೆದು ಕೊಂಡರೂ ತಾವು ಮಾತ್ರ ಇಂದೂ ಜೀವಂತವಾಗಿರುವ ಪ್ರಾಣಿ, ಸಸ್ಯರಾಶಿ
relict
ಅವಶಿಷ್ಟ ಅನಿಲ
(ರ) ಪಂಪ್ ಮಾಡಿದ ಮೇಲೂ ನಿರ್ವಾತ ನಳಿಕೆಯಲ್ಲಿ ಉಳಿದಿರುವ ಸಣ್ಣ ಪ್ರಮಾಣದ ಅನಿಲ
residual gas
ಅವಶೇಷ
(ಜೀ) ಪೂರ್ವಿಕರಲ್ಲಿ ಅಥವಾ ಹಿಂದಿನ ಸಂತತಿ ಗಳಲ್ಲಿ, ಚೆನ್ನಾಗಿ ಅಭಿವೃದ್ಧಿಯಾಗಿದ್ದು ಈಗ ಅವನತಿ ಹೊಂದಿ ಯಾವ ಉಪಯೋಗವೂ ಇಲ್ಲದ ಅಂಗ, ಭಾಗ, ಕುರುಹು. ಉದಾ: ಕಿವಿಗಳಿಲ್ಲದ ತಳಿಗಳಲ್ಲಿ ಕಿವಿಯ ಕುರುಹು; ಮಾನವ ಅಪೆಂಡಿಕ್ಸ್ (ಅಂತ್ರಪುಚ್ಛ); ಆಸ್ಟ್ರಿಚ್ (ಉಷ್ಟ್ರ) ಪಕ್ಷಿಯ ರೆಕ್ಕೆಗಳು
vestige
ಅವಶೇಷ
(ಭೂವಿ) ಕ್ಷಯ ಅಥವಾ ವಿಘಟನೆಯ ತರುವಾಯವೂ ಶಿಥಿಲವಾಗದೆ ಉಳಿದ ಅಥವಾ ತನ್ನ ಬಹುಭಾಗ ಕಣ್ಮರೆಯಾದರೂ ಅಚ್ಚಳಿಯದೆ ಉಳಿದ ಭೂ ರಚನೆ. ಜಲಜಶಿಲೆ ಯಲ್ಲಿ ಜೀವ್ಯವಶೇಷದ ತುಣುಕಿನ ಗುರುತಿನಂಥ ಪಳೆಯುಳಿಕೆ
relic
ಅವಶೋಷಣ ರೇಖೆಗಳು
(ಖ) ನಕ್ಷತ್ರ ರೋಹಿತ ಗಳಲ್ಲಿ ಪ್ರಕಟವಾಗುವ ಕರಿಗೆರೆಗಳು. ನಕ್ಷತ್ರ ಗರ್ಭದಲ್ಲಿ ಉದ್ಭವಿಸಿದ ಬೆಳಕು ನಕ್ಷತ್ರದ ವಿವಿಧ ಸ್ತರಗಳ - ಆದ್ದರಿಂದ ವಿವಿಧ ಸಂಯೋಜನೆ ಗಳ - ಮೂಲಕ ಹಾಯ್ದು ಹೋಗುವಾಗ ವಿಶಿಷ್ಟ ಅಲೆಯುದ್ದಗಳ ಬೆಳಕು ಹೀರಲ್ಪಟ್ಟು ಅದರಲ್ಲಿ ನಿಹಿತವಾಗಿದ್ದ ಶಕ್ತಿಯಲ್ಲಿ ವ್ಯತ್ಯಯ ಗಳುಂಟಾಗುತ್ತವೆ. ತತ್ಪರಿಣಾಮವಾಗಿ ರೋಹಿತದಲ್ಲಿ ಕರಿಗೆರೆಗಳು ಮೈದಳೆಯುತ್ತವೆ. ನಕ್ಷತ್ರದಲ್ಲಿಯ ರಾಸಾಯನಿಕ ಹಾಗೂ ಭೌತಿಕ ಪರಿಸ್ಥಿತಿಗಳ ಬಗ್ಗೆ ಈ ಗೆರೆಗಳಿಂದ ಮಾಹಿತಿ ಪಡೆಯಬಹುದು