(ಭೌ) ಯಾವುದೇ ವ್ಯವಸ್ಥೆಗೆ ಸಂಬಂಧಿಸಿದಂತೆ ಸತತವಾಗಿ ಹಾಗೂ ಸದೃಶವಾಗಿ ಪುನರಾವರ್ತಿಸುವ ಚಲನೆ
periodic motion
ಅವಧಿಯುತತೆ
(ಭೌ) ಆವರ್ತನೀಯತೆ, ಆವರ್ತಕತೆ. ನೋಡಿ: ಆವೃತ್ತಿ. (ರ) ಆವರ್ತಕೋಷ್ಟಕದಲ್ಲಿ ಧಾತುವಿನ ಸ್ಥಾನ
periodicity
ಅವನತ ಕೋನ
(ಗ) ವೀಕ್ಷಕ ತನ್ನ ಕ್ಷಿತಿಜೀಯದಿಂದ ಎಷ್ಟು ಕೆಳಕ್ಕೆ ನೋಡಿದರೆ ವೀಕ್ಷಿತ ವಸ್ತು ಕಾಣುತ್ತದೆ ಎಂಬುದರ ಅಳತೆ. ಒಂದು ವಸ್ತುವು P ಎಂಬ ಬಿಂದುವಿನಲ್ಲಿದ್ದು ಅದು OA ಎಂಬ ಕ್ಷಿತಿಜ ರೇಖೆಗಿಂತ ಕೆಳಗಿದ್ದರೆ ಆಗ AôP ಎಂಬ ಕೋನವನ್ನು P ಬಿಂದುವಿನ ಅವನತ ಕೋನ ಎನ್ನುತ್ತೇವೆ. ನೋಡಿ : ಉನ್ನತ ಕೋನ
angle of depression
ಅವನತಿ
(ರ) ರಾಸಾಯನಿಕ ಸಂಯುಕ್ತದ ಸಂಕೀರ್ಣತೆ ಯನ್ನು ಕಡಿಮೆಗೊಳಿಸುವುದು. (ಭೂವಿ) ಶಿಥಿಲೀಕರಣದಿಂದಾಗಿ ಶಿಲೆಗಳ ಸವೆತ. (ಭೌ) ಯಾವುದೇ ಪ್ರಕ್ರಿಯೆಯ ಕಾರಣವಾಗಿ ಲಭ್ಯ ಉಪಯುಕ್ತ ಶಕ್ತಿಯ ಮೊತ್ತ ಕಡಿಮೆಯಾಗುವುದು. ಉದಾ: ಅಂತರ್ದಹನ ಎಂಜಿನ್‌ನಲ್ಲಿ ಉಷ್ಣಹ್ರಾಸದ ಕಾರಣವಾಗಿ ಲಭ್ಯವಾಗುವ ಉಪಯುಕ್ತ ಶಕ್ತಿ ಕಡಿಮೆಯಾಗುವುದು
degrade
ಅವನತಿ ದರ
(ಪವಿ) ವಾಯುಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣತೆ ಕಡಿಮೆಯಾಗುವ ದರ. ಲೋಪ ದರ. ಚ್ಯುತಿ ದರ. ಸ್ಖಾಲಿತ್ಯ ದರ
lapse rate
ಅವನಮನಿ
(ಪ್ರಾ) ಶರೀರದ ಒಂದು ಭಾಗ ಅಥವಾ ಅಂಗವನ್ನು ತನ್ನ ಕ್ರಿಯೆಯಿಂದ ಕೆಳಕ್ಕೆಳೆಯುವ ಸ್ನಾಯು.
depressor
ಅವನಾದ
(ಭೌ) ಸಂಕೀರ್ಣ ಸ್ವರದಲ್ಲಿ ಮೂಲಸ್ವರದ ಆವೃತ್ತಿಗಿಂತ ನಿಮ್ನ ಆವೃತ್ತಿಯ ಯಾವುದೇ ಸ್ವರ. ನೀಚಸ್ಥಾಯಿ
undertone
ಅವಪತನ
(ಪವಿ) ತೇವಾಂಶದಿಂದ ಕೂಡಿರುವ ದಟ್ಟ ಮೋಡಗಳಿಂದ ಭೂಮಿಯ ಮೇಲೆ ಮಳೆ, ಆಲಿಕಲ್ಲು ಅಥವಾ ಇಬ್ಬನಿ ಬೀಳುವುದು