(ರ) ರಾಸಾಯನಿಕ ಅಥವಾ ಭೌತಿಕ ಬದಲಾವಣೆಗಳ ಪರಿಣಾಮವಾಗಿ ದ್ರಾವಣದಿಂದ ಘನ ಕಣಗಳಾಗಿ ಪ್ರತ್ಯೇಕಗೊಳ್ಳುವ ವಸ್ತು. ಒತ್ತರ
precipitate
ಅವಕ್ಷೇಪಕ
(ರ) ದ್ರಾವಣದಲ್ಲಿ ವಿಲೀನವಾಗಿರುವ ಪದಾರ್ಥ ಒತ್ತರಿಸುವಂತೆ ಮಾಡುವ ರಾಸಾಯನಿಕ ವಸ್ತು
precipitant
ಅವಕ್ಷೇಪಣ
(ರ) ದ್ರಾವಣದಲ್ಲಿರುವ ಪದಾರ್ಥ ರಾಸಾಯನಿಕ ಕ್ರಿಯೆಯಿಂದ ಅವಿಲೇಯ ಘನ ಪದಾರ್ಥ ವಾಗುವುದು. ರಾಸಾಯನಿಕ ಸಂಸ್ಕರಣ ಮತ್ತು ವಿಶ್ಲೇಷಣೆಗಳಲ್ಲಿ ಪದಾರ್ಥಗಳನ್ನು ವಿಯೋಜಿಸಿ ಗುರುತಿಸಲು ಇದನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ
precipitation
ಅವಜನಕ
(ವೈ) ಸಂತತಿಯ ಮೇಲೆ ದುಷ್ಪರಿಣಾಮ ಬೀರುವ. ಸತ್ಸಂತಾನವಿಜ್ಞಾನಕ್ಕೆ ವಿರೋಧವಾದುದು. ನೋಡಿ: ಸುಜೀವನವಿಜ್ಞಾನ
dysgenic
ಅವತಾನನ
(ಪ್ರಾ) ಕೆಲವು ಉನ್ನತ ಕಶೇರುಕಗಳಲ್ಲಿ, ಮುಂಗೈಯಲ್ಲಿರುವ ಎರಡು ಉದ್ದೆಲುಬುಗಳು ಬೋರಲಾಗಿ ಅಂಗೈ ತಳಮುಖವಾಗಿರುವಂಥ ಸ್ಥಿತಿ. ಹೋಲಿಸಿ: ಉತ್ತಲನ
pronation
ಅವಧಿ
(ಖ) ಗ್ರಹ ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತುವುದಕ್ಕೆ ತೆಗೆದುಕೊಳ್ಳುವ ಕಾಲ. (ಭೌ) ಯಾವುದೇ ಕ್ರಿಯೆ ಪುನರಾವರ್ತಿಸಲು ತೆಗೆದುಕೊಳ್ಳುವ ಕಾಲ
period
ಅವಧಿ
(ಭೌ) ಎರಡು ಘಟನೆಗಳ ನಡುವಿನ ಕಾಲಾವಧಿ ಅಥವಾ ಎರಡು ವಸ್ತುಗಳ ನಡುವಿನ ಅಂತರ. ಸ್ವರ ಮಾಧುರ್ಯ ದಲ್ಲಾಗಲೀ ಸ್ವರಮೇಳದಲ್ಲಾಗಲೀ ಎರಡು ಧ್ವನಿಗಳ ಸ್ಥಾಯಿಯ ಅಂತರ
interval
ಅವಧಿಕ
(ಸಾ) ಸಂಧಿಸ್ಥ, ಕ್ರಾಂತಿ, ಸ್ಥಿತಿ ಬದಲಾವಣೆ ಹಂತ
critical
ಅವಧಿಪೂರ್ವ ಫಲನ
(ಸ) ದ್ವೈವಾರ್ಷಿಕ ಸಸ್ಯವೊಂದು ಅವಧಿಗೆ ಮೊದಲೇ, ಮೊದಲ ವರ್ಷದಲ್ಲೇ, ಹೂ ಬಿಟ್ಟು ಫಲವೀಯುವುದು