(ಭೂವಿ) ಅಲ್ಯೂಮಿನ, ಸಿಲಿಕ ಮತ್ತು ಪ್ರತ್ಯಾಮ್ಲಗಳ ಸಂಯುಕ್ತಗಳು. ಉದಾ: ಜೇಡಿ, ಅಭ್ರಕ, ಜಿಯೊಲೈಟ್‌ಗಳು, ಗಾಜಿನ ಹಾಗೂ ಪಿಂಗಾಣಿಯ ಘಟಕಗಳು
alumino silicates
ಅವಋತುಸ್ರಾವ
(ವೈ) ಕಷ್ಟಕರವಾದ ಹಾಗೂ ನೋವಿನಿಂದ ಕೂಡಿದ ಋತುಸ್ರಾವ
dysmenorrhoea
ಅವಕಲ
(ಗ) ಯಾವುದೇ ಫಲನದಲ್ಲಿಯ ಚರವನ್ನು ಕುರಿತಂತೆ ಆ ಫಲನದ ತಾತ್‌ಕ್ಷಣಿಕ ವ್ಯತ್ಯಯ ದರ. x=a ಬಿಂದುವಿನಲ್ಲಿ f (x)ನ ಅವಕಲವನ್ನು f1(a) ಎಂದು ವ್ಯಾಖ್ಯಿಸುತ್ತೇವೆ. ನೋಡಿ: ಅನುಕಲ
derivative
ಅವಕಲ ಸಮೀಕರಣ
(ಗ) ಸ್ವತಂತ್ರ ಚರ x, ಅಧೀನ ಚರ y ಮತ್ತು x ಕುರಿತಂತೆ yಯ ಅವಕಲನಾಂಕ - ಇವುಗಳ ನಡುವೆ ಇರುವಂಥ ಸಂಬಂಧ. ಉದಾಹರಣೆಯಾಗಿ ಅವಕಲ ಸಮೀಕರಣದಲ್ಲಿರುವ ಗರಿಷ್ಠ ಅವಕಲನಾಂಕದ ದರ್ಜೆ ಮತ್ತು ಡಿಗ್ರಿ, ಅನುಕ್ರಮವಾಗಿ, ಸಮೀಕರಣದ ದರ್ಜೆ ಮತ್ತು ಡಿಗ್ರಿ. ಮೇಲಿನ ಉದಾಹರಣೆಗಳಲ್ಲಿ ಒಂದನೆಯದರ ದರ್ಜೆ ಮತ್ತು ಡಿಗ್ರಿ ತಲಾ ೧; ಎರಡನೆಯದರವು ೨,೧. ಅವಕಲ ಸಮೀಕರಣದ ಸಾರ್ವತ್ರಿಕ ಪರಿಹಾರ; ಇದು x ಮತ್ತು y ನಡುವಿನ ಒಂದು ಸಂಬಂಧ. ಅವಕಲ ಸಮೀಕರಣದಲ್ಲಿ ಅಧೀನ ಚರ yಗೆ x ಪದಗಳನ್ನು ಆದೇಶಿಸಿದಾಗ ಸರ್ವಸಮತ್ವ ಸಿದ್ಧಿಸುತ್ತದೆ. ಅವಕಲ ಸಮೀಕರಣದ ಪರಿಹಾರದಲ್ಲಿಯ ಸ್ವೇಚ್ಛಾ ನಿಯತಾಂಕಗಳ ಸಂಖ್ಯೆ ಆ ಸಮೀಕರಣದ ದರ್ಜೆಗೆ ಸಮ. ಸ್ವೇಚ್ಛಾ ನಿಯತಾಂಕಗಳಿಗೆ ನಿರ್ದಿಷ್ಟ ಬೆಲೆಗಳನ್ನು ಆದೇಶಿಸಿದಾಗ ನಿರ್ದಿಷ್ಟ ಪರಿಹಾರಗಳು ಲಭಿಸುತ್ತವೆ
differential equation
ಅವಕಲನ
(ಗ) ಫಲನದ ಅವಕಲವನ್ನು ಪಡೆಯುವ ಪ್ರಕ್ರಿಯೆ. ನೋಡಿ: ಅನುಕಲನ
differentiation
ಅವಕಲನಾಂಕ
(ಗ) ನೋಡಿ: ಅವಕಲ
differential coefficient
ಅವಕಲಿಸು
(ಗ) ನಿಷ್ಪನ್ನಿಸು. ವ್ಯುತ್ಪನ್ನಿಸು
derive
ಅವಕಾಶ
(ಸಾ) ವಸ್ತು ಮತ್ತು ಘಟನೆಗಳು ಅಸ್ತಿತ್ವ ಪಡೆಯುವ, ಅವುಗಳಿಗೆ ಸಾಪೇಕ್ಷ ನೆಲೆ ಮತ್ತು ದಿಶೆಗಳಿರುವ ಮತ್ತು ನಮ್ಮನ್ನು ಸುತ್ತಲೂ ಆವರಿಸಿರುವ ಮೂರು ಆಯಾಮಗಳ ವ್ಯಾಪ್ತಿ. ಆಕಾಶ. ದೇಶ
space
ಅವಕೆಂಪು
(ಭೌ) ರೋಹಿತದಲ್ಲಿ ಕೆಂಪು ಬಣ್ಣಕ್ಕಿಂತ ಅಧಿಕ ಅಲೆಯುದ್ದವಿರುವ. ಅತಿರಕ್ತ
infrared
ಅವಕೆಂಪು ಖಗೋಳವಿಜ್ಞಾನ
(ಖ) ೦.೭೫-೧೦೦೦ ಮೈಕ್ರೋಮೀಟರ್ ವ್ಯಾಪ್ತಿ ಅಲೆಯುದ್ದದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬರುವ ವಿಕಿರಣದ (ಶಕ್ತಿ ಮೂಲಗಳ) ಅಧ್ಯಯನ. ಅತಿರಕ್ತ ಖಗೋಳವಿಜ್ಞಾನ