logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅಲ್ಪದೃಶ್ಯತೆ
(ಭೌ) ಕಾಯದ, ಮಾಧ್ಯಮದ ಮೂಲಕ ಹಾದುಹೋಗುವಾಗ ಆಪಾತ ಬೆಳಕಿನಲ್ಲಿ ಅಥವಾ ವಿಕಿರಣದಲ್ಲಿ ಆಗುವ ನಷ್ಟದ ಪ್ರಮಾಣ. ಮಬ್ಬು, ಮುಸುಕು
obscuration

ಅಲ್ಪವೃತ್ತ
(ಖ) ಗೋಳಕೇಂದ್ರದ ಮೂಲಕ ಹೋಗದ ಸಮತಲವು ಗೋಳವನ್ನು ಛೇದಿಸಿದಾಗ ದೊರೆಯುವ ವೃತ್ತ. ಇದರ ಕೇಂದ್ರ ಗೋಳಕೇಂದ್ರಕ್ಕಿಂತ ಬೇರೆ ಮತ್ತು ತ್ರಿಜ್ಯವು ಗೋಳ ತ್ರಿಜ್ಯಕ್ಕಿಂತ ಕಡಿಮೆ. ನೋಡಿ: ಮಹಾವೃತ್ತ
small circle

ಅಲ್ಪಾಕ
(ಪ್ರಾ) ಆರ್ಟಿಯೊಡ್ಯಾಕ್ಟಿಲ ಗಣದ ಒಂಟೆ ಕುಟುಂಬಕ್ಕೆ ಸೇರಿದ ಸಮ ಗೊರಸಿನ ಮೆಲುಕು ಹಾಕುವ ಸ್ತನಿ. ದಕ್ಷಿಣ ಅಮೆರಿಕ (ಪೆರು) ವಾಸಿ. ಉದ್ದ ಮತ್ತು ರೇಷ್ಮೆಯಂತೆ ಮೃದು ತುಪ್ಪಟದ ಕೂದಲಿದೆ
alpaca

ಅಲ್ಯಾಕ್ಸಾನ್
(ರ) (CO)4(NH)2 ಬಿಳಿ ಹರಳು ರೂಪದ ಹೆಟರೊಸೈಕ್ಲಿಕ್ ಸಂಯುಕ್ತ. ದ್ರಬಿಂ ೧೭೦0 ಸೆ. ಸಾರರಿಕ್ತ ನೈಟ್ರಿಕ್ ಆಮ್ಲದೊಡನೆ ಯೂರಿಕ್ ಆಮ್ಲ ವರ್ತಿಸಿದಾಗ ದೊರೆಯುವ ಉತ್ಪನ್ನ. ಮೇದೋಜೀರಕಾಂಗದಲ್ಲಿಯ ಕೆಲವು ಕೋಶಗಳನ್ನು ನಾಶಪಡಿಸಬಲ್ಲದು. ಹೀಗಾಗಿ ಪ್ರಯೋಗಾರ್ಥವಾಗಿ ಪ್ರಾಣಿಗಳಲ್ಲಿ ಮಧುಮೇಹ ರೋಗವನ್ನು ಆರೋಪಿಸಲು ಉಪಯುಕ್ತ
alloxan

ಅಲ್ಯೂಮಿನ
(ರ) ಅಲ್ಯೂಮಿನಿಯಮ್ ಭಸ್ಮ. ಅಲ್ಯೂಮಿನಿಯಮ್ ಟ್ರೈಆಕ್ಸೈಡ್. Al2O3. ನಿಸರ್ಗ ಲಭ್ಯ. ಕುರುಂದದ ಘಟಕ
alumina

ಅಲ್ಯೂಮಿನಿಯಮ್
(ರ) ಬೆಳ್ಳಿ ಬಣ್ಣದ ಲೋಹ; al; ಆಕರ ಬಾಕ್ಸೈಟ್; ಪಸಂ ೧೩; ಸಾಪರಾ ೨೬.೯೮೧೫; ದ್ರಬಿಂ ೬೫೯.೭0 ಸೆ; ಕುಬಿಂ ೧೮೦೦0 ಸೆ; ಸಾಸಾಂ ೨.೫೮. ಉತ್ತಮ ವಿದ್ಯುದ್ವಾಹಕ; ಸುಲಭವಾಗಿ ತಂತಿ ಎಳೆಯಬಹುದು, ತಗಡಾಗಿ ತಟ್ಟಬಹುದು; ಕಿಲುಬು ಹಿಡಿಯದು. ಹಗುರವಾದುದರಿಂದ ಇದರ ಮಿಶ್ರ ಲೋಹಗಳನ್ನು ವಿಮಾನಗಳ ಒಡಲು, ಅಡುಗೆ ಪಾತ್ರೆಗಳು ಇತ್ಯಾದಿಗಳ ತಯಾರಿಕೆಯಲ್ಲಿ ವಿಶೇಷವಾಗಿ ಬಳಸಲಾಗುತ್ತದೆ
aluminium

ಅಲ್ಯೂಮಿನಿಯಮ್ ಅಸಿಟೇಟ್
(ರ) Al(CH3.COO)3 ಬಿಳಿಪುಡಿ. ನೀರಿನಲ್ಲಿ ವಿಲೇಯ. ಪೂತಿ ನಾಶಕ ಮತ್ತು ಬಂಧಕ. ಪ್ರತ್ಯಾಮ್ಲೀಯ ಅಲ್ಯೂಮಿಯಮ್ ಅಸಿಟೇಟ್, A1OH (CH3.COO)2.XH2O ಬಟ್ಟೆ ಉದ್ಯಮದಲ್ಲಿ ಜಲನಿರೋಧಕವಾಗಿ ಮತ್ತು ಅಗ್ನಿ ನಿರೋಧಕವಾಗಿ ಬಳಕೆ
aluminium acetate

ಅಲ್ಯೂಮಿನಿಯಮ್ ಕಂಚು
(ರ) ೪-೧೧% ಅಲ್ಯೂಮಿನಿಯಮ್ ಮತ್ತು ತಲಾ ೫%ವರೆಗೆ ಕಬ್ಬಿಣ ಮತ್ತು ನಿಕಲ್ ಅಥವಾ ೦.೫% ತವರ ಇರಬಹುದಾದ ತಾಮ್ರ- ಅಲ್ಯೂಮಿನಿಯಮ್ ಮಿಶ್ರ ಲೋಹಗಳು. ಉಚ್ಚ ಕರ್ಷಕ ತ್ರಾಣ, ಅಧಿಕ ಸಂಕ್ಷಾರಣ ರೋಧ ಮತ್ತು ಎರಕ ಹುಯ್ಯುವ ಸೌಲಭ್ಯ ಮುಖ್ಯ ಗುಣಗಳು
aluminum bronze

ಅಲ್ಯೂಮಿನಿಯಮ್ ಹಿತ್ತಾಳೆ
(ರ) ಹಿತ್ತಾಳೆಯ ಸಂಕ್ಷಾರಣ ರೋಧವನ್ನು (ತುಕ್ಕು ಹಿಡಿಯದಿರುವಿಕೆಯನ್ನು) ವರ್ಧಿಸುವ ಸಲುವಾಗಿ ಅದಕ್ಕೆ ಅಲ್ಯೂಮಿನಿಯಮ್ ಬೆರೆಸಿ ಪಡೆದ ಮಿಶ್ರಲೋಹ; ೧-೬% al ೨೪-೪೨% Zn. ೫೫-೭೧% Cu
aluminum brass

ಅಲ್ಯೂಮಿನೊಥೆರ್ಮಿಕ್ ವಿಧಾನ
(ರ) ನೋಡಿ : ಗೋಲ್ಡ್‌ಷ್ಮಿಟ್ ವಿಧಾನ
aluminothermic process


logo