(ವೈ) ಬ್ಯಾಕ್ಟೀರಿಯಾಗಳು ಉತ್ಪಾದಿಸುವ ವಿಷವನ್ನು ಪ್ರತಿರೋಧಿಸುವ ದೇಹಜನ್ಯ ಪದಾರ್ಥ
allotoxin
ಅಲೊಪತಿ
(ವೈ) ಆಧುನಿಕ ಪಾಶ್ಚಾತ್ಯ ವೈದ್ಯ ಪದ್ಧತಿ: ರೋಗದ ಪರಿಣಾಮಗಳಿಗೆ ವಿರುದ್ಧವಾದ (ಪ್ರತಿಯಾದ) ಪರಿಣಾಮ ಗಳನ್ನು ಉಂಟುಮಾಡುವ ಪದಾರ್ಥಗಳನ್ನು ನೀಡಿ ರೋಗನಿವಾರಣೆ ಮಾಡುವ ವೈದ್ಯ ವಿಧಾನ. ವಿದೃಶ ಕ್ರಿಯಾ ಚಿಕಿತ್ಸೆ. ಹೋಮಿಯೊಪತಿ (ಸದೃಶ ಕ್ರಿಯಾ ಚಿಕಿತ್ಸೆ) ಪದ್ಧತಿಗೆ ಭಿನ್ನವಾದುದು
allopathy
ಅಲೊಬಾರ್
(ರ) ಸಮಸ್ಥಾನಿಗಳ ಮಿಶ್ರಣ; ಇವುಗಳ ನಿಷ್ಪತ್ತಿ ನಿಸರ್ಗಲಭ್ಯ ಮಿಶ್ರಣದಲ್ಲಿಯದಕ್ಕಿಂತ ಭಿನ್ನ
allobar
ಅಲೊಮಾರ್ಫ್
(ಭೂವಿ) ರಾಸಾಯನಿಕ ಸಂರಚನೆ ಒಂದೇ ಆಗಿದ್ದು ಸ್ಫಟಿಕ ರೂಪ ಭಿನ್ನವಾಗಿರುವ ಯಾವುದೇ ವಸ್ತುವಿನ ರೂಪಗಳಲ್ಲೊಂದು. ನೋಡಿ: ಪ್ಯಾರಾಮಾರ್ಫಿಸಮ್
allomorph
ಅಲ್ಟಾಜಿಮತ್
(ಖ) ಆಕಾಶಕಾಯದ ಉನ್ನತಿಯನ್ನೂ ಕ್ಷಿತಿಜಾಂಶವನ್ನೂ ಒಮ್ಮೆಗೇ ಅಳೆಯಬಲ್ಲ ಸಾಧನ. ಉನ್ನತಿ ದಿಗಂತ ಮಾಪಕ. ಅತಿ ದೊಡ್ಡ ದೃಗ್ದೂರದರ್ಶಕಗಳಲ್ಲೂ ರೇಡಿಯೊ ದೂರದರ್ಶಕಗಳಲ್ಲೂ ಬಳಕೆ
altazimuth
ಅಲ್ಟ್ರಮೇಫಿಕ್ ಶಿಲೆ
(ಭೂವಿ) ಶೇ. ೭೦ಕ್ಕಿಂತಲೂ ಹೆಚ್ಚು ಮೆಗ್ನೀಸಿಯಮ್ ಖನಿಜಗಳಿರುವ ಅಗ್ನಿಶಿಲೆ
ultramafic rock
ಆಲ್ಟ್ರಾಮೆರೀನ್
(ರ) ಜೇಡಿ, ಸೋಡಿಯಮ್ ಸಲ್ಫೇಟ್, ಕಾರ್ಬನ್ ಮತ್ತು ಗಂಧಕದ ಮಿಶ್ರಣವನ್ನು ಕಾಸಿ ತಯಾರಿಸಿದ ಪದಾರ್ಥ
ultramarine
ಅಲ್ಟ್ರಾಸೆಂಟ್ರಿಫ್ಯೂಜ್
(ತಂ) ಉನ್ನತವೇಗದ ಕೇಂದ್ರಾಪಕ (ಸೆಂಟ್ರಿಫ್ಯೂಜ್). ಮಿನಿಟಿಗೆ ೬೦,೦೦೦ ಆವರ್ತಗಳಷ್ಟು ವೇಗದೊಂದಿಗೆ ತಿರುಗಬಲ್ಲದು. ಉನ್ನತ ಬಹ್ವಂಗಿಗಳಲ್ಲೂ (ಪಾಲಿಮರ್) ಪ್ರೋಟೀನುಗಳಲ್ಲೂ ಇರುವ ದೊಡ್ಡ ಅಣುಗಳ ಅಣುತೂಕಗಳನ್ನು ನಿರ್ಧರಿಸಲು ಬಳಕೆ. ೧೯೨೫ರಲ್ಲಿ ಸ್ವೆಡ್‌ಬರ್ಗ್ ಎಂಬಾತ ಇದನ್ನು ರೂಪಿಸಿದ
ultracentrifuge
ಅಲ್ನ
(ಪ್ರಾ) ಚತುಷ್ಪಾದಿಯಲ್ಲಿ ಮುಂದೋಳಿನ ಎರಡು ಮೂಳೆಗಳ ಪೈಕಿ ದೊಡ್ಡದು. ಹೆಬ್ಬೆರಳಿಗೆ ಎದುರಾಗಿದೆ. ಮುಂದೋಳಿನ ಒಳಮೂಳೆ. ನೋಡಿ: ರೇಡಿಯಸ್
ulna
ಅಲ್ನಿಕೋ
(ತಂ) ಅಲ್ಯೂಮಿನಿಯಮ್, ನಿಕಲ್, ಕೊಬಾಲ್ಟ್, ಕಬ್ಬಿಣ ಹಾಗೂ ತಾಮ್ರ ಇವುಗಳ ಮಿಶ್ರ ಲೋಹ; ಇದೊಂದು ಶಾಶ್ವತ ಕಾಂತ ಪದಾರ್ಥ