(ಪ್ರಾ) ರೆಪ್ಟೀಲಿಯ (ಸರೀಸೃಪ) ವರ್ಗದ ಜಲವಾಸಿ ಪ್ರಾಣಿ; ಸ್ಥೂಲವಾಗಿ ಮೊಸಳೆಯಂತೆ ಆಕಾರ; ಚಿಕ್ಕದಾದ ಅಗಲ ತಲೆ, ಮೊಂಡು ಮೂತಿ; ಕೆಳ ದವಡೆ ಹಲ್ಲು ಮೇಲ್ದವಡೆ ಗುಳಿಯಲ್ಲಿ ಹುದುಗಿರುವುದು. ಸದ್ಯದಲ್ಲಿ ಎರಡು ಪ್ರಭೇದಗಳು ಮಾತ್ರ ಉಳಿದಿವೆ: ಉತ್ತರ ಅಮೆರಿಕದ ಅಲಿಗೇಟರ್ ಮಿಸಿಸಿಪ್ಪಿ ಯನ್ಸಿಸ್ (ಗರಿಷ್ಠ ಉದ್ದ ೪.೫ ಮೀ), ಚೀಣಾದ ಅಲಿಗೇಟರ್ ಸೈನೆನ್ಸಿಸ್ (ಗರಿಷ್ಠ ಉದ್ದ ೧.೫ ಮೀ)
alligator
ಅಲಿಜರೀನ್
(ರ) ಅತಿಮುಖ್ಯ ನೈಸರ್ಗಿಕ ಹಾಗೂ ಸಂಶ್ಲೇಷಿತ ವರ್ಣದ್ರವ್ಯಗಳ ಪೈಕಿ ಒಂದು; ಕೆಂಪು ಅಶ್ರಗ ಅಥವಾ ಸೂಜಿ ರೂಪದಲ್ಲಿರುವುದು. ೧,೨-ಡೈಹೈಡ್ರಾಕ್ಸಿ ಅಂತ್ರಕ್ವಿನೋನ್. C14H6O2(OH)2. ದ್ರಬಿಂ ೨೮೯0 ಸೆ.
alizarin
ಅಲೀಲ್
(ಜೀ) ಅಲೆಲೊಮಾರ್ಫ್‌ನ ಹ್ರಸ್ವರೂಪ; ನಿರ್ದಿಷ್ಟ ಜೀನ್‌ನ ಪರ್ಯಾಯ ರೂಪಗಳ ಪೈಕಿ ಯಾವುದೇ ಒಂದು; ಸಾಮಾನ್ಯವಾಗಿ ಫೀನೊಟೈಪಿನ ಮೇಲೆ ವಿಭಿನ್ನ ಅಲೀಲ್‌ಗಳ ಪರಿಣಾಮಗಳು ವಿಭಿನ್ನ. ಯುಗ್ಮ ವಿಭಿನ್ನಕಾರಕ
allele
ಅಲೆಗುರುತುಗಳು
(ಭೂವಿ) ನೀರಿನ ಅಥವಾ ಗಾಳಿಯ ಕ್ರಿಯೆಯಿಂದಾಗಿ ಜಲಜಶಿಲೆಯ ಮೇಲೆ ಅಥವಾ ಮರಳ ಹರಹಿನ ಮೇಲೆ, ಗಡುಸಾಗುವ ಮುನ್ನ ಉಂಟಾದ ಕಿರಿಯಗಲದ ಸಮಾಂತರ ಏಣುಗಳು
ripple marks
ಅಲೆತ
(ಸಾ) ನಿಶ್ಚಿತ ಜಾಡಿನಿಂದ ಕ್ರಮೇಣ ಹೊರಸರಿತ. ಅನಿಶ್ಚಯ ಗತಿ
drift
ಅಲೆಮಾರಿ ಪದ್ಧತಿ
(ಸಾ) ನಿರ್ದಿಷ್ಟ ಸ್ಥಳಕ್ಕೆ ಕ್ರಮ ಬದ್ಧವಾಗಿ ಹಿಂದಿರುಗದೆಯೇ ಮೇವಿಗಾಗಿ (ಆಹಾರಕ್ಕಾಗಿ) ಸ್ಥಳದಿಂದ ಸ್ಥಳಕ್ಕೆ ಯಾವ ಕ್ರಮವೂ ಇಲ್ಲದೆ ಅಲೆಯುವ ಕೆಲವು ಪ್ರಾಣಿಗಳ (ಹಾಗೂ ಜನರ) ಅಭ್ಯಾಸ/ಜೀವನ ಪದ್ಧತಿ
nomadism
ಅಲೆಯಾಕಾರದ
(ಸ) ಡೊಂಕು ಡೊಂಕು ಅಂಚುಳ್ಳ (ಎಲೆ)
sinuous
ಅಲೆಯುದ್ದ
(ಭೌ) ತರಂಗಚಲನೆಯಲ್ಲಿ ಸಮ ಪ್ರಾವಸ್ಥೆಯಲ್ಲಿರುವ ಉತ್ತರೋತ್ತರ ಬಿಂದುಗಳ ನಡುವಿನ ಅಂತರ. ಉದಾ: ವಿದ್ಯುತ್ಕಾಂತೀಯ ಅಲೆ, ಶಬ್ದದ ಅಲೆ ಮುಂತಾದ ಯಾವುದೇ ಅಲೆಯಲ್ಲಿ ಎರಡು ಆಸನ್ನ ಶೃಂಗಗಳ ಇಲ್ಲವೇ ಕುಳಿಗಳ ನಡುವಿನ ಅಂತರ. ಪ್ರತೀಕ ==/n. ಇಲ್ಲಿ ತರಂಗ ಚಲನೆಯ ವೇಗ, nಆವೃತ್ತಿ , l ತರಂಗಾಂತರ
wavelength
ಅಲೈಂಗಿಕ
(ಜೀ) ಕ್ರಿಯಾಶೀಲ ಲೈಂಗಿಕ ಅಂಗಗಳಿಲ್ಲದಿರುವುದು
asexual
ಅಲೈಂಗಿಕ ಸಂತಾನೋತ್ಪತ್ತಿ
(ಜೀ) ಲೈಂಗಿಕ ಪ್ರಕ್ರಿಯೆಯನ್ನು ನೇರವಾಗಿ ಆಗಲಿ ಮಾರ್ಪಡಿಸಿದ ರೀತಿಯಲ್ಲೇ ಆಗಲಿ ಅವಲಂಬಿಸದೆ ನಡೆಸುವ ಯಾವುದೇ ಬಗೆಯ ಸಂತಾನೋತ್ಪತ್ತಿ