(ಖ) ಚಂದ್ರ ಅಥವಾ ಗ್ರಹದ ಕಲೆ ಅರ್ಧವೃತ್ತಕ್ಕಿಂತ ಹೆಚ್ಚು, ಪೂರ್ಣ ವೃತ್ತಕ್ಕಿಂತ ಕಡಿಮೆ ಇರುವ ಸ್ಥಿತಿ
gibbous
ಅರ್ಧಿಸು
(ಗ) ಸಮದ್ವಿಭಾಗಿಸು. ಎರಡು ಸಮಭಾಗಗಳಾಗಿ ಕತ್ತರಿಸು
bisect
ಅರ್ಪಿಮೆಂಟ್
(ಭೂವಿ) ಆರ್ಸೆನಿಕ್ ಟ್ರೈಸಲ್ಫೈಡ್ ಸಂಯೋಜನೆಯುಳ್ಳ ಹಳದಿ ಬಣ್ಣದ ಖನಿಜ. AS2S3 ಚಿತ್ರ ಕಲಾವಿದರು ವರ್ಣದ್ರವ್ಯವಾಗಿ ಬಳಸುವ ಗಂಧಕ- ಆರ್ಸೆನಿಕ್‌ಗಳ ಸಂಯುಕ್ತಕ್ಕೂ ಇದೇ ಹೆಸರುಂಟು
orpiment
ಅಲಂಕಾರ ಬರಹ
(ಸಾ) ಸುಂದರ ಅಕ್ಷರಗಳಿಂದ ಮಾಡಿದ ಬರವಣಿಗೆ. ಕೈಬರಹ. ಅಂದಬರಹ
calligraphy
ಅಲಂಕಾರ ಸಸ್ಯಾವಳಿ
(ಸ) ಉದ್ಯಾನವನ ದಲ್ಲಿ ವಿವಿಧ ಆಕಾರ, ಬಣ್ಣಗಳಲ್ಲಿ ಆಕರ್ಷಕವಾಗಿ ಎಲೆ, ಹೂ ಬಿಡುವ ಸಸ್ಯಗಳು. ಅಗ್ಲೊನಿಮ, ಅಲೊಕೇಷಿಯ ಅಲೊಪ್ಲಿಕ್ಟಸ್, ತಾಳೆ, ಕ್ರಿಸ್‌ಟ್ಯಾಂತಸ್, ಸೈಪೆರಸ್, ಅಂತೆರಿಕಮ್ ಇತ್ಯಾದಿ ಇಂಥ ಸಸ್ಯಗಳಲ್ಲಿ ಕೆಲವು
ornamental foliage
ಅಲಗು
(ಸಾ) ಕತ್ತಿ ಮೊದಲಾದ ಚೂಪು ಆಯುಧಗಳ ಹರಿತ ಅಂಚು (ತಂ) bit ತೋಪಡದ ಉಳಿ ಬಾಯಿ
blade
ಅಲಬಾಸ್ಟರ್
(ಭೂವಿ) ಜಿಪ್ಸಮ್ ಶಿಲೆಯ ನೈಸರ್ಗಿಕ ರೂಪ; ಅರೆಪಾರಕ ಮಿದು ನುಣುಪು ಕಲ್ಲು, ರಾಸಾಯನಿಕ ಸೂತ್ರ CaSO4.2H2O. ಸುಲಭವಾಗಿ ಕೊರೆಯಲು, ಮೆರುಗು ನೀಡಲು ಸಾಧ್ಯವಿರುವುದರಿಂದ ಅಲಂಕಾರ ವಸ್ತುಗಳ ತಯಾರಿಕೆಯಲ್ಲಿ ಬಳಕೆ. ಹಾಲುಗಲ್ಲು
alabaster
ಅಲರ್ಜನ್
(ವೈ) ದೇಹದಲ್ಲಿ ಅಲರ್ಜಿ ಅನುಕ್ರಿಯೆ ಯನ್ನು ಪ್ರಚೋದಿಸುವ ಪ್ರತಿಜನಕ ಪದಾರ್ಥ. ಅಲರ್ಜಿಜನಕ
allergen
ಅಲರ್ಜಿ
(ವೈ) ನಮ್ಮ ದೇಹಕ್ಕೆ ಒಗ್ಗದ ಪರವಸ್ತುಗಳು (ಪ್ರತಿಜನಕ/ಅಲರ್ಜಿ ಜನಕ) ದೇಹದೊಳಗೆ ಪ್ರವೇಶಿಸಿದಾಗ, ನಮ್ಮ ದೇಹ ತೋರುವ ವಿಪರೀತ (ಅತಿಸಂವೇದನಾ) ಪ್ರತಿಕ್ರಿಯೆ. ಒಗ್ಗದಿಕೆ. ನೋಡಿ: ಅತಿಸಂವೇದೀ