(ಗ) ರೋಮನ್ ಅಂಕೆಗಳು i, ii, iii ಇತ್ಯಾದಿಗಳಿಗೆ ಭಿನ್ನವಾಗಿ ದಶಮಾಂಶ ಪದ್ಧತಿಯಲ್ಲಿ ಬಳಸುವ ೧,೨,೩,೪...೯ ಮತ್ತು ೦- ಈ ಹತ್ತು ಅಂಕೆಗಳು. ವಾಸ್ತವವಾಗಿ ಇವು ಭಾರತದಲ್ಲಿ ಉಗಮಿಸಿದವು. ನೋಡಿ: ಹಿಂದೂ-ಅರ‍್ಯಾಬಿಕ್ ಅಂಕೆಗಳು
arabic numerals
ಅರ್ಗ್
(ಭೌ) ಕಾರ್ಯದ ಅಥವಾ ಶಕ್ತಿಯ ಏಕಮಾನ. ೧ ಡೈನ್ ಬಲದ ದಿಕ್ಕಿನಲ್ಲಿ ೧ ಸೆಂಟಿಮೀಟರ್ ದೂರ ಚಲಿಸುವಾಗ ಆಗುವ ಕಾರ್ಯದ ಪರಿಮಾಣ. ಇದನ್ನು ಡೈನ್- ಸೆಂಟಿಮೀಟರ್ ಎಂದೂ ಕರೆಯಲಾಗುತ್ತದೆ
erg
ಅರ್ತಿಂಗ್
(ತಂ) ಅತ್ಯಲ್ಪ ಪ್ರತಿಬಾಧೆ ಇರುವ ವಾಹಕದ ಮೂಲಕ ವಿದ್ಯುನ್ಮಂಡಲವನ್ನು ನೆಲಕ್ಕೆ ಸೇರಿಸುವುದು. ವಿದ್ಯುದಾಘಾತ ವನ್ನು ತಗ್ಗಿಸುವುದು ಇದರ ಉದ್ದೇಶ. ಭೂಸಂಪರ್ಕಗೊಳಿಸುವುದು
earthing
ಅರ್ಧಕ
(ಗ) ಕೋನ ಅಥವಾ ರೇಖೆಯ ಸಮದ್ವಿಭಾಜಕ
bisector
ಅರ್ಧಕಕಲೆ
(ಖ) ಗ್ರಹದ ಅರ್ಧಾಂಶ ಮಾತ್ರ ಹೊಳೆಯುತ್ತಿರುವ ಪ್ರಾವಸ್ಥೆ; ಮೊದಲ ಅಥವಾ ಮೂರನೆಯ ಪಾದದ ಅಂತ್ಯದಲ್ಲಿ ಚಂದ್ರನ ಕಲೆ; ಬುಧ ಮತ್ತು ಶುಕ್ರ ಗ್ರಹಗಳ ಕೋನಾಂತರಗಳು ಗರಿಷ್ಠವಾಗಿರುವಾಗ ಆಯಾ ಗ್ರಹದ ಕಲೆ
dichotomy
ಅರ್ಧಕೋಶ
(ತಂ) ವಿದ್ಯುದ್ವಿಭಜನೀಯ ಕೋಶಾರ್ಧ. ವಿದ್ಯುದ್ವಿಭಾಜ್ಯದಲ್ಲಿ ಮುಳುಗಿದ ಏಕೈಕ ಎಲೆಕ್ಟ್ರೋಡ್ ಇದರಲ್ಲಿ ಇರುತ್ತದೆ. ಇಂಥ ವ್ಯವಸ್ಥೆಯ ಎಲೆಕ್ಟ್ರೋಡ್‌ನ ವಿಭವವನ್ನು ಹೈಡ್ರೊಜನ್ ಎಲೆಕ್ಟ್ರೋಡ್‌ಗೆ ಹೋಲಿಸಿ ಅಳೆಯಲಾಗುತ್ತದೆ. ಹೈಡ್ರೊಜನ್ ಎಲೆಕ್ಟ್ರೋಡ್‌ನ ವಿಭವ
half cell
ಅರ್ಧಚಕ್ರೀಯ
(ಸ) ಕೆಲವು ಹೂ, ಎಲೆಗಳು ವೃತ್ತಾ ಕಾರದಲ್ಲೂ ಇತರ ಕೆಲವು ಕಾರ್ಕ್, ಸ್ಕ್ರೂ, ವಂಕಿ ಆಕಾರದಲ್ಲೂ ಇರುವ. ಅರ್ಧವೃತ್ತೀಯ, ಅರ್ಧಚಂದ್ರಾಕೃತಿಯ
hemicyclic
ಅರ್ಧಛಾಯೆ
(ಖ) ನೋಡಿ: ಪೂರ್ಣಛಾಯೆ
penumbra
ಅರ್ಧಫಲಕೀಯ
(ರ) (ಹರಳುಗಳ ವಿಷಯದಲ್ಲಿ) ಸಹಜವಾಗಿ ಇರಬೇಕಾಗಿದ್ದುದರ ಅರ್ಧದಷ್ಟೆ ಸಂಖ್ಯೆಯ ಫಲಕಗಳುಳ್ಳ. ಅರ್ಧಮುಖೀಯ
hemihedral
ಅರ್ಧಸುಷುಪ್ತಿ
(ವೈ) ಹೆರಿಗೆಯಲ್ಲಿ ನೋವು ಆಗದಂತೆ ಮಾಡಲು ಮಾರ್ಫೀನ್ ಹಾಗೂ ಸ್ಕೊಪೊಲಾಮಿನ್‌ಗಳನ್ನು ನೀಡಿ ಉಂಟುಮಾಡಿದ ಅರೆ ಪ್ರeವಸ್ಥೆಯ ಸ್ಥಿತಿ. ಸೂಲು ನಿದ್ರೆ