logo
भारतवाणी
bharatavani  
logo
Knowledge through Indian Languages
Bharatavani

Navakarnataka Vijnana Tantrajnana Padasampada (2011)

Please click here to read PDF file Navakarnataka Vijnana Tantrajnana Padasampada (2011)

ಅರಣ್ಯ ವಿಜ್ಞಾನ
(ಸ) ಮರಗಳನ್ನು ನೆಟ್ಟು, ಆರೈಕೆ ಮಾಡಿ, ಕಾಡು ಬೆಳೆಸಿ ಅದನ್ನು ನಿರ್ವಹಿಸುವ ವಿಜ್ಞಾನ ಶಾಖೆ
forestry

ಅರಣ್ಯೀಕರಣ
(ಸ) ಖಾಲಿ ಹರವಿನಲ್ಲಿ ಮರಗಳನ್ನು ದಟ್ಟವಾಗಿ ಬೆಳೆಸಿ ಕಾಪಾಡುವುದು. ಅರಣ್ಯವೃದ್ಧಿ
afforestation

ಅರಪುಡಿ
(ತಂ) ಅರದಿಂದ ಉಜ್ಜಿ ಬಂದ ಪುಡಿ. ಲೋಹವನ್ನು ಯಂತ್ರದಲ್ಲಿ ಕತ್ತರಿಸಿ ನಯಗೊಳಿಸಿದಾಗ ಬರುವ ತೆಳು ರೇಕುಗಳು ಅಥವಾ ಚೂರುಗಳು
filing

ಅರಮೀನು
(ಪ್ರಾ) ಮೋನಕಾನ್ತಿಡೀ ಕುಟುಂಬಕ್ಕೆ ಸೇರಿದ ಈ ಮೀನು ಉಷ್ಣ, ಉಪೋಷ್ಣ ಸಮುದ್ರಗಳಲ್ಲಿ ವಾಸ. ಬಣ್ಣ ಹಳದಿ, ಕೆಂಪು, ನೀಲಿ ತೊಗಲಿನಂಥ ಚರ್ಮ, ಚೂಪಾದ ಬಲವಾದ ಬಾಚಿ ಹಲ್ಲುಗಳು ಇವೆ. ಮುತ್ತಿನ ಚಿಪ್ಪುಗಳನ್ನೂ ಹವಳದ ಚೂರುಗಳನ್ನೂ ಕಡಿದು ತಿನ್ನುತ್ತದೆ. ಬಿಡುಕ ಮೀನು
file fish

ಅರಳು
(ಸ) ಮೊಗ್ಗು ಬಿರಿದು ಹೂವಾಗು. ನಳನಳಿಸು, ವಿಕಸಿಸು
bloom

ಅರಳು ಗಂಧಕ
(ರ) ಪೊಟ್ಯಾಸಿಯಮ್ ಕಾರ್ಬೊನೇಟ್ K2CO3 ಮತ್ತು ಗಂಧಕದ ಹುಡಿಯನ್ನು ಕರಗಿಸಿದಾಗ ಒದಗುವ ಸಲ್ಫೈಡ್‌ಗಳ ಮಿಶ್ರಣ. ತೋಟಗಾರಿಕೆಯಲ್ಲಿ ಕೀಟನಾಶಕವಾಗಿ ಮತ್ತು ಶಿಲೀಂಧ್ರನಾಶಕವಾಗಿ ಬಳಕೆ. ದ್ರಾಕ್ಷಿ ಬಳ್ಳಿಗಳಿಗೆ ಉತ್ತಮ ರಕ್ಷಣೆ
liver of sulphur

ಅರಾಗೊನೈಟ್
(ಭೂವಿ) CaCO3ಯ ನೈಸರ್ಗಿಕ ರೂಪಗಳಲ್ಲೊಂದು. ಸಾಪೇಕ್ಷವಾಗಿ ಅಸ್ಥಿರ; ಆರ್ಥೊರಾಂಬಿಕ್ ವ್ಯವಸ್ಥೆಯಲ್ಲಿ ಸ್ಫಟಿಕೀಕರಣ; ಬೆಚ್ಚಗಿನ ನೀರಿನಿಂದ ನಿಕ್ಷೇಪಿತ; ಆದರೆ ಕ್ಯಾಲ್ಸೈಟ್ ಆಗಿ ವಿಲೋಮನ (inversion)ಗೊಳ್ಳುವ ಪ್ರವೃತ್ತಿ ಉಳ್ಳದ್ದು; ಉನ್ನತ ಒತ್ತಡಗಳಲ್ಲಿ ಸ್ಥಿರ
aragonite

ಅರಾಚಿಡಿಕ್ ಆಮ್ಲ
(arachic acid) (ರ) CH3(CH2)18COOH ಬಿಳಿಹರಳು ರೂಪಿ ಘನ. ಅವಿಲೇಯ. ದ್ರಬಿಂ ೭೬.೩0 ಸೆ. ನೆಲಗಡಲೆ ಎಣ್ಣೆಯಿಂದ ತಯಾರಿಕೆ. ಮೃದು ಚಾಲಕಗಳು (ಲ್ಯೂಬ್ರಿಕೆಂಟ್ಸ್) ಪ್ಲ್ಯಾಸ್ಟಿಕ್ ಮತ್ತು ಮೇಣಗಳ ತಯಾರಿಕೆಯಲ್ಲಿ ಬಳಕೆ
arachidic acid

ಅರಾಬಿನೋಸ್
(ರ) ಅರ‍್ಯಾಬಿಕ್ ಗೋಂದು ಮತ್ತು ಚೆರಿಗೋಂದು/ಬೀಟ್‌ರೂಟ್ ತುಣುಕುಗಳು ಇವನ್ನು ಸಾರರಿಕ್ತ ಸಲ್ಫ್ಯೂರಿಕ್ ಆಮ್ಲದ ಜೊತೆ ಕುದಿಸಿದಾಗ ದೊರೆಯುವ ಅಶ್ರಗರೂಪಿ ಹರಳುಗಳು. ಪೆಂಟೋಸ್ ಗುಂಪಿಗೆ ಸೇರಿರುವ ಮಾನೊಸ್ಯಾಕರೈಡ್. C5H10O5 ಕೆಲವು ಬ್ಯಾಕ್ಟೀರಿಯಾಗಳ ಕೃಷಿಗೆ ಮಾಧ್ಯಮವಾಗಿ ಬಳಕೆ
arabinose

ಅರಿವಳಿಕ
(ವೈ) ನೋಡಿ: ಸಂವೇದನಹಾರಿ
anaesthetic


logo