(ರ) ಆವರ್ತ ಕೋಷ್ಟಕದಲ್ಲಿ viiನೇ ಗುಂಪಿನಲ್ಲಿ ಬರುವ ಅಲೋಹೀಯ ಧಾತು. ಪ್ರತೀಕ i. ಹ್ಯಾಲೊಜನ್ ಗಳಲ್ಲೊಂದು. ಪಸಂ ೫೩, ಸಾಪರಾ ೧೨೬.೯೦೪೪, ವೇಲೆನ್ಸಿಗಳು ೧, ೩, ೫, ೭. ಕಪ್ಪು-ಬೂದು ಸ್ಫಟಿಕ. ದ್ರಬಿಂ ೧೧೪0ಸೆ. ಕುಬಿಂ ೧೮೪0 ಸೆ, ಸಾಸಾಂ ೪.೯೫. ನೀರಿನಲ್ಲಿ ಅವಿಲೇಯ. ಆಲ್ಕಹಾಲ್‌ನಲ್ಲಿ ಲೀನವಾಗಿ ಟಿಂಕ್ಚರ್ ಆಫ್ ಅಯೊಡೀನ್ ನೀಡುತ್ತದೆ. ಆವಿಶೀಲ. ನೇರಿಳೆ ಬಣ್ಣದ ಆವಿಯನ್ನು ಹೊರ ಸೂಸುತ್ತದೆ. ಜೀವಿಗಳಲ್ಲಿ ಥೈರಾಯಿಡ್ ಗ್ರಂಥಿಯ ಕ್ರಿಯೆಗೆ ಅತ್ಯವಶ್ಯ. ಆಹಾರದಲ್ಲಿ ಸಾಕಷ್ಟು ಅಯೊಡೀನ್ ಇಲ್ಲದಿದ್ದರೆ ಗಳಗಂಡ ರೋಗ ಬರುತ್ತದೆ. ಔಷಧಿಗಳಲ್ಲಿ ರಾಸಾಯನಿಕ ವಿಶ್ಲೇಷಣೆಯಲ್ಲಿ, ಛಾಯಾಚಿತ್ರಣದಲ್ಲಿ ಬಳಕೆ. ಚಿಲಿಪೆಟ್ಲುಪ್ಪು ಹಾಗೂ ಕೆಲವು ಸಮುದ್ರದ ಕಳೆಗಳಲ್ಲಿ ಲಭ್ಯ. ಸಮುದ್ರ ಜಲದಲ್ಲಿಯ ಅಯೊಡೈಡ್‌ಗಳನ್ನು ಲ್ಯಾಮಿನೇರಿಯ ವರ್ಗದ ಜೊಂಡುಗಳು ಹೀರಿಕೊಂಡಿರುತ್ತವೆ. ಬಸಲೆ ಸೊಪ್ಪು, ಲೆಬ್ಯೂಸ್‌ನಂಥ ಕಾಯಿಪಲ್ಯೆ ಗಳಿಂದ ಮತ್ತು ಹಾಲು, ಬೆಣ್ಣೆ, ಕಾಡ್‌ಲಿವರ್ ಎಣ್ಣೆಗಳಿಂದ ನಮಗೆ ಅಯೊಡೀನ್ ಒದಗುತ್ತದೆ. ಆರೋಗ್ಯವಂತ ಪ್ರಾಪ್ತ ವಯಸ್ಕರ ಶರೀರದಲ್ಲಿ ೨೦ ಮಿಗ್ರಾಂ ಅಯೊಡೀನ್ ಇರುವುದೆಂದು ಅಂದಾಜು
iodine
ಅಯೊಡೇಟ್
(ರ) ಅಯೊಡಿಕ್ ಆಮ್ಲದ ಲವಣ. HIO3. ಸೋಡಿಯಮ್ ಮತ್ತು ಪೊಟ್ಯಾಸಿಯಮ್ ಅಯೊಡೇಟ್‌ಗಳು ಅತ್ಯಂತ ಮುಖ್ಯವಾದವು. ಔಷಧಗಳಲ್ಲಿ ಬಳಕೆ
iodate
ಅಯೊಡೈಡ್‌ಗಳು
(ರ) ಅಯೊಡೀನ್ ಸಂಯುಕ್ತಗಳು. ಹೈಡ್ರೊಅಯೊಡಿಕ್ ಆಮ್ಲಗಳ ಲವಣಗಳು. ಹೆಚ್ಚಿನ ಲೋಹ ಅಯೊಡೈಡ್‌ಗಳನ್ನು ಉಷ್ಣಕ್ಕೆ ಒಳಪಡಿಸಿದಾಗ ಮುಕ್ತ ಅಯೊಡೀನ್, ಲೋಹ/ಲೋಹದ ಆಕ್ಸೈಡ್ ಉಳಿಯುತ್ತವೆ
iodides
ಅಯೋಡೀಕೃತ ಲವಣ
(ರ) ಆಹಾರದಲ್ಲಿ ಅಯೋಡಿನ್‌ಅನ್ನು ಪೌಷ್ಟಿಕ ವಸ್ತುವಾಗಿ ಒದಗಿಸಲೋಸುಗ ಅಯೊಡೈಡ್‌ನಿಂದ ಸಂಸ್ಕರಿಸಿದ ಸಾಮಾನ್ಯ ಬಿಳಿ ಪುಡಿ ಉಪ್ಪು
iodized salt
ಅಯೋನಿಯಮ್
(ಭೌ) ನೈಸರ್ಗಿಕವಾಗಿ ದೊರೆಯುವ ಮತ್ತು ಯುರೇನಿಯಮ್‌ನ ವಿಕಿರಣಾತ್ಮಕ ಕ್ಷಯದಿಂದ ಉತ್ಪತ್ತಿ ಯಾಗುವ ಥೋರಿಯಮ್ ಸಮಸ್ಥಾನಿ. ಪತೂ ೨೩೦. ಪ್ರತೀಕ Io
ionium
ಅಯೋರ್ಟ
(ಪ್ರಾ) ಆಕ್ಸಿಜನೀಕೃತ ರಕ್ತವನ್ನು ಹೃದಯದಿಂದ ಫುಪ್ಪುಸಗಳ ಹೊರತಾಗಿ ದೇಹದ ಎಲ್ಲ ಭಾಗಗಳಿಗೂ ಒಯ್ಯುವ ಮಹಾಧಮನಿ
aorta
ಅರ
(ತಂ) ವಸ್ತುಗಳ ಮೇಲ್ಭಾಗವನ್ನು ಉಜ್ಜಿ ನಯ ಮಾಡುವುದಕ್ಕಾಗಲಿ, ಅವುಗಳ ಗಾತ್ರ ಕಡಿಮೆ ಮಾಡುವುದಕ್ಕಾಗಲಿ ಉಪಯೋಗಿಸುವ, ಸಾಮಾನ್ಯ ವಾಗಿ ಉಕ್ಕಿನಿಂದ ಮಾಡಿದ, ಒರಟು ಮೈಯ ಉಪಕರಣ
file
ಅರಗುರೆಕ್ಕೆ ಹಕ್ಕಿ
(ಪ್ರಾ) ಪ್ಯಾಸರಿಫಾರ್ಮೀಸ್ ವರ್ಗ, ಬಾಂಬಿಸಿಲಿಡೀ ಕುಟುಂಬ ಮತ್ತು ಬಾಂಬಿಸಿಲ ಜಾತಿಗೆ ಸೇರಿದ ಹಲವು ಬಗೆಯ ಹಕ್ಕಿಗಳ ಸಾಮಾನ್ಯ ಹೆಸರು. ರೆಕ್ಕೆ ಗರಿಗಳ ಕೊನೆ ಅರಗಿನಂತೆ ಕೆಂಪಗಿದೆ. ತಲೆಯ ಮೇಲೆ ಗರಿಗಳಿಂದ ಆದ ಜುಟ್ಟು ಉಂಟು. ನೋಟಕ್ಕೆ ಬಲು ಸುಂದರ
wax wing
ಅರಣ್ಯ
(ಭೂ) ಅಧಿಕ ಉಷ್ಣತೆ ಇರುವ ಹಾಗೂ ತುಂಬ ಮಳೆ ಬೀಳುವ ಪ್ರದೇಶಗಳಲ್ಲಿ ದಟ್ಟವಾದ ಪೊದೆ ಕುರುಚಲು ಗಿಡಗಳಿಂದಲೂ ಎತ್ತರವಾದ ಮರಗಳಿಂದಲೂ ಆವೃತವಾದ, ಸಾಮಾನ್ಯವಾಗಿ ಅಧಿಕ ಸಂಖ್ಯೆಯಲ್ಲಿ ಪ್ರಾಣಿಗಳಿಗೂ ಕ್ರಿಮಿ ಕೀಟಗಳಿಗೂ ಆಶ್ರಯವಾದ ವಿಶಾಲ ಪ್ರದೇಶ. ಕಾಡು
jungle
ಅರಣ್ಯನಾಶ
(ಪವಿ) ಕಾಡ್ಗಿಚ್ಚು, ಚಂಡಮಾರುತ, ಭೀಕರ ಪ್ರವಾಹ ಮುಂತಾದ ನೈಸರ್ಗಿಕ ಕಾರಣಗಳಿಂದಲೂ ಕೃಷಿ ವಿಸ್ತರಣೆ, ನೀರಾವರಿ, ಅಣೆಕಟ್ಟು ನಿರ್ಮಾಣ, ಮರ ಕಡಿಯುವುದು ಮುಂತಾದ ಮಾನವ ಚಟುವಟಿಕೆಗಳ ಕಾರಣ ದಿಂದಲೂ ಆಗುವ ಕಾಡುಗಳ ನಾಶ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನೋಡಿ: ಅರಣ್ಯೀಕರಣ